Hyundai: ಹ್ಯುಂಡೈನಿಂದ ಗುರುಗ್ರಾಮದಲ್ಲಿ 1000 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಂದ್ರ ಕಚೇರಿ ಆರಂಭ

TV9 Digital Desk

| Edited By: Srinivas Mata

Updated on: Jul 28, 2021 | 8:53 PM

ಆಟೋಮೋಟಿವ್ ಉತ್ಪಾದಕ ಹ್ಯುಂಡೈ ಮೋಟಾರ್ಸ್ ರೂ. 2000 ಕೋಟಿ ಹೂಡಿಕೆಯೊಂದಿಗೆ ಹರ್ಯಾಣದ ಗುರುಗ್ರಾಮದಲ್ಲಿ ಹೆಜ್ಜೆಯನ್ನು ಇಟ್ಟಿದೆ. ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಅಷ್ಟೇ ಅಲ್ಲ ಹ್ಯುಂಡೈ ಕಂಪೆನಿಯ ವ್ಯಾವಹಾರಿಕ ಪ್ರತಿಸ್ಪರ್ಧಿಯಾದ ಮಾರುತಿ ಸುಜುಕಿಯ ಕಾರ್ಯನಿರ್ವಹಣಾ ನಿರ್ದೇಶಕರಾದ ಕೆನಿಚಿ ಅಯುಕವ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಕೊರಿಯಾ ಕಂಪೆನಿಯಾದ ಹ್ಯುಂಡೈನಿಂದ ಗುರುಗ್ರಾಮದಲ್ಲಿ ಮೆಗಾ- ಕಾರ್ಪೊರೇಟ್​ ಕಚೇರಿಯನ್ನು ಆರಂಭಿಸಲಾಯಿತು. ಈ ಕಚೇರಿಯು ಭಾರತದಲ್ಲಿ ಹ್ಯುಂಡೈ ಕಂಪೆನಿಯ ಕೇಂದ್ರ ಕಚೇರಿ ಆಗಲಿದೆ. ಈ ಹೊಸ ಕಚೇರಿಯು 28,000 ಚದರಡಿ ವ್ಯಾಪ್ತಿಯಲ್ಲಿ […]

Hyundai: ಹ್ಯುಂಡೈನಿಂದ ಗುರುಗ್ರಾಮದಲ್ಲಿ 1000 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಂದ್ರ ಕಚೇರಿ ಆರಂಭ
ಹ್ಯುಂಡೈ ಘಟಕ ಉದ್ಘಾಟನೆ ಮಾಡಿದ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್

ಆಟೋಮೋಟಿವ್ ಉತ್ಪಾದಕ ಹ್ಯುಂಡೈ ಮೋಟಾರ್ಸ್ ರೂ. 2000 ಕೋಟಿ ಹೂಡಿಕೆಯೊಂದಿಗೆ ಹರ್ಯಾಣದ ಗುರುಗ್ರಾಮದಲ್ಲಿ ಹೆಜ್ಜೆಯನ್ನು ಇಟ್ಟಿದೆ. ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಅಷ್ಟೇ ಅಲ್ಲ ಹ್ಯುಂಡೈ ಕಂಪೆನಿಯ ವ್ಯಾವಹಾರಿಕ ಪ್ರತಿಸ್ಪರ್ಧಿಯಾದ ಮಾರುತಿ ಸುಜುಕಿಯ ಕಾರ್ಯನಿರ್ವಹಣಾ ನಿರ್ದೇಶಕರಾದ ಕೆನಿಚಿ ಅಯುಕವ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಕೊರಿಯಾ ಕಂಪೆನಿಯಾದ ಹ್ಯುಂಡೈನಿಂದ ಗುರುಗ್ರಾಮದಲ್ಲಿ ಮೆಗಾ- ಕಾರ್ಪೊರೇಟ್​ ಕಚೇರಿಯನ್ನು ಆರಂಭಿಸಲಾಯಿತು. ಈ ಕಚೇರಿಯು ಭಾರತದಲ್ಲಿ ಹ್ಯುಂಡೈ ಕಂಪೆನಿಯ ಕೇಂದ್ರ ಕಚೇರಿ ಆಗಲಿದೆ. ಈ ಹೊಸ ಕಚೇರಿಯು 28,000 ಚದರಡಿ ವ್ಯಾಪ್ತಿಯಲ್ಲಿ ವ್ಯಾಪಿಸಿದೆ. ಕಳೆದ ಮೂರು ವರ್ಷದಲ್ಲಿ 1000 ಕೋಟಿ ರೂಪಾಯಿಯಷ್ಟು ಹೂಡಿಕೆ ಮಾಡಲಾಗಿದೆ.

ಈ ಸ್ಥಳದಲ್ಲಿ ಎಲೆಕ್ಟ್ರಿಕಲ್​ ವಾಹನಗಳಿಗಾಗಿ 14 ಚಾರ್ಜಿಂಗ್ ಘಟಕಗಳು, 50kw ಸೋಲಾರ್ ಪ್ಯಾನೆಲ್ ರೂಫ್ ಟಾಪ್​ನಲ್ಲಿ ಮತ್ತು 400 ಚದರ ಮೀಟರ್ ಉದ್ದಕ್ಕೂ ಹಸಿರು ಗೋಡೆಯ ಇದೆ. ಇನ್ನು ಈ ಕಚೇರಿಗೆ ಹೊಂದಿಕೊಂಡಂತೆಯೇ ಮತ್ತೊಂದು ಫೆಸಿಲಿಟಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅದು ಕೂಡ 1000 ಕೋಟಿ ರೂಪಾಯಿಯ ಹೂಡಿಕೆ ಯೋಜನೆ ಆಗಿದೆ.

ಹ್ಯುಂಡೈ ಸಿಇಒ ಮತ್ತು ಎಂ.ಡಿ. ಎಸ್.ಎಸ್.ಕಿಮ್ ಮಾತನಾಡಿ, ಜನರು ಹಾಗೂ ಪರಿಸರದ ಬಗೆಗಿನ ಬದ್ಧತೆಯೊಂದಿಗೆ ಈ ಕೇಂದ್ರ ಕಚೇರಿಯು ಮುಖ್ಯ ಗಮನವನ್ನು ಆವಿಷ್ಕಾರಗಳಗೆ ಮತ್ತು ಜನರ ಬೆಳವಣಿಗೆ ಹಾಗೂ ಈ ಭೂಮಿಯ ಸಮೃದ್ಧಿ ದೃಷ್ಟಿಕೋನವನ್ನು ಹೊಂದಿದೆ ಎಂದು ಹೇಳಿದ್ದಾರೆ. ಅಂದಹಾಗೆ ಹರ್ಯಾಣದಲ್ಲಿ 10 ಲಕ್ಷ ಯೂನಿಟ್ ವಾರ್ಷಿಕ ಉತ್ಪಾದನಾ ಸಾಮರ್ಥ್ಯದ ಘಟಕ ಸ್ಥಾಪಿಸಲು ಮಾರುತಿ ಸುಜುಕಿಯಿಂದ 18,000 ಕೋಟಿ ರೂಪಾಯಿ ಹೂಡಿಕೆ ಮಾಡುವ ಗುರಿ ಇದೆ. ಆ ಯೋಜನೆಯಂತೆ ಹೇಳುವುದಾದರೆ, ಸದ್ಯಕ್ಕೆ ಗುರುಗ್ರಾಮದಲ್ಲಿ ಇರುವ ಮಾರುತಿ ಸುಜುಕಿಯ ಉತ್ಪಾದನಾ ಘಟಕಕ್ಕಿಂತ ಹೆಚ್ಚು ದೊಡ್ಡದಾದ ಹಾಗೂ ಆಧುನಿಕವಾದ ಉತ್ಪಾದನಾ ಘಟಕಕ್ಕೆ ಸ್ಥಳಾಂತರಗೊಳ್ಳಲಿದೆ.

ಇದನ್ನೂ ಓದಿ: ಅಮೆರಿಕದ ಎಲೆಕ್ಟ್ರಿಕಲ್ ವಾಹನ ಮಾರುಕಟ್ಟೆಯಲ್ಲಿ ದೊಡ್ಡ ಮೊತ್ತದ ಹೂಡಿಕೆ ಘೋಷಿಸಿದ ಹುಂಡೈ, ಕಿಯಾ

(Hyundai Company Open Up Rs 1000 Crore Worth Facility At Gurugram In Haryana )

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada