ಅಮೆರಿಕದ ಎಲೆಕ್ಟ್ರಿಕಲ್ ವಾಹನ ಮಾರುಕಟ್ಟೆಯಲ್ಲಿ ದೊಡ್ಡ ಮೊತ್ತದ ಹೂಡಿಕೆ ಘೋಷಿಸಿದ ಹುಂಡೈ, ಕಿಯಾ
ಕೊರಿಯನ್ ಮೂಲದ ಕಾರು ತಯಾರಿಕೆ ಕಂಪೆನಿಗಳಾದ ಹ್ಯುಂಡೈ, ಕಿಯಾ ಮೋಟಾರ್ಸ್ನಿಂದ ಅಮೆರಿಕದಲ್ಲಿ ಎಲೆಕ್ಟ್ರಿಕಲ್ ವಾಹನಗಳ ಉತ್ಪಾದನೆಗೆ ದೊಡ್ಡ ಮೊತ್ತದ ಹೂಡಿಕೆ ಘೋಷಣೆ ಮಾಡಲಾಗಿದೆ,
ಕೊರಿಯನ್ ಕಾರು ತಯಾರಿಕೆ ಕಂಪೆನಿಗಳಾದ ಹುಂಡೈ ಮೋಟಾರ್ ಮತ್ತು ಕಿಯಾ ಕಾರ್ಪೊರೇಷನ್ನಿಂದ ಶೀಘ್ರದಲ್ಲೇ ಅಮೆರಿಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಶುರು ಆಗಲಿದೆ. ಇನ್ನು ಕೆಲವು ವರ್ಷಗಳಲ್ಲಿ ಇದು ಸಾಧ್ಯವಾಗುವಂತೆ ಉತ್ಪಾದನೆ, ಇತರ ಸಾಗಾಟ ವ್ಯವಸ್ಥೆಗೆ ಹೂಡಿಕೆ ಮಾಡುವ ಯೋಜನೆ ಬಗ್ಗೆ ಹುಂಡೈ ಮೋಟಾರ್ ಘೋಷಣೆ ಮಾಡಿದೆ. ಹುಂಡೈ ಮೋಟಾರ್ನ ಜಾಗತಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅಧ್ಯಕ್ಷ ಹಾಗೂ ಹುಂಡೈ ಉತ್ತರ ಅಮೆರಿಕ ಸಿಇಒ ಜೋಸ್ ಮುನೋಜ್ ಮಾತನಾಡಿ, ಹುಂಡೈ ಸಮೂಹದ ಪರವಾಗಿ ಘೋಷಣೆ ಮಾಡುತ್ತಿರುವುದಕ್ಕೆ ಸಂತೋಷ ಆಗುತ್ತಿದೆ. ಅಮೆರಿಕ ಮಾರುಕಟ್ಟೆಗೆ, ನಮ್ಮ ಡೀಲರ್ಗಳಿಗೆ ಮತ್ತು ಗ್ರಾಹಕರಿಗೆ ಬದ್ಧತೆಯನ್ನು ಈ ಹೂಡಿಕೆ ತೋರಿಸುತ್ತಿದೆ. ಭವಿಷ್ಯದಲ್ಲಿ ಅಮೆರಿಕ ಮತ್ತು ಇಡೀ ವಿಶ್ವದ ಸಂಚಾರ ವ್ಯವಸ್ಥೆಯನ್ನು ಹುಂಡೈ ಮುನ್ನಡೆಸುತ್ತದೆ. ನಮ್ಮ ಈಗಿನ ಹಾಗೂ ಭವಿಷ್ಯದ ಉತ್ಪನ್ನಗಳು ಉತ್ತಮ ಸಾಧನೆ ಮುಂದುವರಿಸುತ್ತವೆ ಎಂದು ಅವರು ಹೇಳಿದ್ದಾರೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಸ್ಮಾರ್ಟ್ ಮೊಬಿಲಿಟಿ ಸೇವೆಗಳ ಮೇಲೆ 740 ಕೋಟಿ ಅಮೆರಿಕನ್ ಡಾಲರ್ ಮೊತ್ತವನ್ನು 2025ರ ಹೊತ್ತಿಗೆ ಅಮೆರಿಕದಲ್ಲಿ ಹೂಡಿಕೆ ಮಾಡುವುದಾಗಿ ಹುಂಡೈ ಮೋಟಾರ್ ಘೋಷಣೆ ಮಾಡಿದೆ.
ಕಿಯಾ ಉತ್ತರ ಅಮೆರಿಕಾದ ಸಿಇಒ ಮತ್ತು ಅಧ್ಯಕ್ಷ ಸೀನ್ ಯೂನ್ ಮಾತನಾಡಿ, ಕಿಯಾದ ಮುಖ್ಯ ಅಂಶ ಏನೆಂದರೆ ಇಂಟರ್ನಲ್ ಕಂಬಶ್ಚನ್ ಎಂಜಿನ್ನಿಂದ ಎಲೆಕ್ಟ್ರಿಕ್ಫಿಕೇಷನ್ಗೆ ಬದಲಾವಣೆ ಆಗುತ್ತಿದೆ. ನಮ್ಮ ಸ್ಟ್ರಾಟೆಜಿಕ್ ಹೂಡಿಕೆಯು ಅಮೆರಿಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾಡೆಲ್ಗಳನ್ನು ಉತ್ಪಾದನೆ ಮಾಡುವುದಾಗಿದೆ. ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ನಿಲ್ಲಲುಶ್ರಮ ಹಾಕುತ್ತಿದ್ದೀವಿ. ಜತೆಗೆ ನಾವು ಎಲ್ಲ ಉದ್ಯಮ- ವ್ಯವಹಾರ ನಡೆಸುತ್ತೇವೋ ಅಲ್ಲಿ ಆರ್ಥಿಕತೆಗೆ ಕೊಡುಗೆ ನೀಡಲು ಬಯಸುತ್ತೇವೆ ಎಂದು ಹೇಳಿದ್ದಾರೆ.
ಈಚೆಗಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಲೆಕ್ಟ್ರಿಕ್ ವಾಹನಗಳ ಸಂಚಾರ ಹೆಚ್ಚಾಗಬೇಕು ಎಂಬುದರ ಅಗತ್ಯದ ಬಗ್ಗೆ ಒತ್ತಿ ಹೇಳಿದ್ದರು. ಅಮೆರಿಕ ಸರ್ಕಾರವು 6,50,000 ಎಲೆಕ್ಟ್ರಿಕಲ್ ವಾಹನಗಳನ್ನು ಈಗಿರುವ ವಾಹನಗಳಿಗೆ ಬದಲಿಯಾಗಿ ಖರೀದಿಸುವ ಗುರಿ ಹೊಂದಿದೆ. ಹುಂಡೈನಿಂದ ಎಲೆಕ್ಟ್ರಿಕಲ್ ವಾಹನಗಳನ್ನು ತಯಾರಿಸಿದರೆ ಆ ಪೈಕಿ ಕೆಲವನ್ನು ಸರ್ಕಾರಕ್ಕೆ ಮಾರಾಟ ಮಾಡುವಂಥ ಅವಕಾಶ ನೀಡುತ್ತದೆ. “ಅಮೆರಿಕದ ಮಾರುಕಟ್ಟೆ ಸನ್ನಿವೇಶ ಮತ್ತು ಅಮೆರಿಕದ ಸರ್ಕಾರದ ಹೊಸ ಎಲೆಕ್ಟ್ರಿಕಲ್ ವಾಹನ ನೀತಿಯನ್ನು ಗಮನಿಸಿದ ಮೇಲೆ ನಮ್ಮ ಉತ್ಪಾದನಾ ವ್ಯವಸ್ಥೆ ವಿಸ್ತರಣೆಯೂ ಸೇರಿದಂತೆ ವಿವಿಧ ಆಯ್ಕೆಗಳನ್ನು ನೋಡುತ್ತಿದ್ದೇವೆ,” ಎಂದು ಹುಂಡೈ ಹೇಳಿಕೆ ನೀಡಿದೆ ಎಂಬುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹುಂಡೈನಿಂದ ಈಗಾಗಲೇ ಕಾರ್ಯ ನಿರ್ವಹಣೆ ಮಾಡುತ್ತಿರುವ ವಾಹನ ಉತ್ಪಾದನಾ ವ್ಯವಸ್ಥೆ ಅಲಬಾಮದಲ್ಲಿ ಇದೆ. ಕಿಯಾ ವಾಹನಗಳು ಜಾರ್ಜಿಯಾದಲ್ಲಿ ಉತ್ಪಾದನೆ ಆಗುತ್ತದೆ. ಅಂದ ಹಾಗೆ ಹೊಸ ಎಲೆಕ್ಟ್ರಿಕಲ್ ವಾಹನ ನೀತಿ ಅಂತಷ್ಟೇ ಅಲ್ಲ. ರಸ್ತೆಯ ಮೇಲೆ ಎಲೆಕ್ಟ್ರಿಕಲ್ ವಾಹನಗಳು ಸಂಚರಿಸುವ ಪ್ರಮಾಣ ಗಣನೀಯವಾಗಿ ಜಾಸ್ತಿ ಆಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Hyundai Alcazar: ಹುಂಡೈನಿಂದ 7 ಸೀಟರ್ನ ಎಸ್ಯುವಿ ಅಲ್ಕಜರ್ ಶೀಘ್ರದಲ್ಲೇ ರಸ್ತೆಗೆ
ಇದನ್ನೂ ಓದಿ: Used car loans: ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಯಾವ ಬ್ಯಾಂಕ್ನಲ್ಲಿ ಬಡ್ಡಿ ದರ ಕಡಿಮೆ?
(Hyundai and Kia Motors announced huge ammont of investment in US for electric vehicle production)
Published On - 1:48 pm, Fri, 14 May 21