Mobile data plan: 100 ರೂಪಾಯಿಯೊಳಗೆ ಅನ್​ಲಿಮಿಟೆಡ್ ಮೊಬೈಲ್ ಇಂಟರ್​ನೆಟ್ ಸಿಗುವ ಪ್ಲಾನ್​ಗಳಿವು

Mobile data plans under 100 Rupees: 100 ರೂಪಾಯಿಯೊಳಗೆ ಅನ್​ಲಿಮಿಟೆಡ್ ಡೇಟಾ ಒದಗಿಸುವ ಟೆಲಿಕಾಂ ಕಂಪೆನಿಗಳಿವು.

Mobile data plan: 100 ರೂಪಾಯಿಯೊಳಗೆ ಅನ್​ಲಿಮಿಟೆಡ್ ಮೊಬೈಲ್ ಇಂಟರ್​ನೆಟ್ ಸಿಗುವ ಪ್ಲಾನ್​ಗಳಿವು
ಸಾಂದರ್ಭಿಕ ಚಿತ್ರ
Follow us
|

Updated on: May 14, 2021 | 5:20 PM

ವರ್ಕ್ ಫ್ರಮ್ ಹೋಮ್ ಮಾಡುತ್ತಿರುವ ಸಿಬ್ಬಂದಿಯಿಂದ ಮತ್ತು ಆನ್​ಲೈನ್ ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಂದ ಇಂಟರ್​ನೆಟ್​ಗೆ ಬೇಡಿಕೆ ಹೆಚ್ಚಾಗಿದೆ. ಈಚೆಗೆ ಹಲವು ಪ್ರಮುಖ ಟೆಲಿಕಾಂ ಕಂಪೆನಿಗಳ ದರವನ್ನು ಏರಿಕೆ ಮಾಡಿದ ಮೇಲೆ ಅನಿಯಮಿತ ಡೇಟಾ ಆಫರ್​ಗಳು ಕೆಲವು ನೂರು ರೂಪಾಯಿಗಳಾಗಿವೆ. ಆದರೆ ಇಂಟರ್​ನೆಟ್​ ಕೈಗೆಟುಕುವ ಬೆಲೆಯಲ್ಲಿ ಇರಬೇಕು ಎಂಬ ಕಾರಣಕ್ಕೆ ಬಿಎಸ್​ಎನ್ಎಲ್​ನಿಂದ ರೂ. 98ರ ವೋಚರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 22 ದಿನಗಳ ಅವಧಿಗೆ ಅನಿಯಮಿತವಾದ ಇಂಟರ್​ನೆಟ್ ದೊರೆಯುತ್ತದೆ. ಬಳಕೆದಾರರಿಗೆ ನಿತ್ಯವೂ 2 GB ಹೈಸ್ಪೀಡ್ ಇಂಟರ್​ನೆಟ್ ಸಿಗುತ್ತದೆ. ಆ ಡೇಟಾ ಪೂರ್ತಿ ಬಳಕೆ ಆದ ಮೇಲೆ ವೇಗವು 40 Kbpsಗೆ ಇಳಿಕೆ ಆಗುತ್ತದೆ.

ಬಿಎಸ್​ಎನ್​ಎಲ್ ರೂ. 97ರ ವೋಚರ್ ಬಿಎಸ್​ಎನ್​ಎಲ್​ನಿಂದ ಮತ್ತೊಂದು ಅನಿಯಮಿತ ಉಚಿತ ಇಂಟರ್​ನೆಟ್ 18 ದಿನಗಳ ಅವಧಿಗೆ ಇದೆ. ಅದಕ್ಕೆ 97 ರೂಪಾಯಿ ಆಗುತ್ತದೆ. ಚಂದಾದಾರಿಗೆ ಪ್ರತಿ ದಿನ 2GB ಡೇಟಾ ದೊರೆಯುತ್ತದೆ. ಆ ನಂತರ ವೇಗವು 80 Kbps ಸಿಗುತ್ತದೆ. ಇದರ ಜತೆಗೆ ಅನಿಯಮಿತ ಕರೆ, ನೂರು ಎಸ್ಸೆಮ್ಮೆಸ್ ಮತ್ತು ಇತರ ಕಂಟೆಂಟ್ ದೊರೆಯುತ್ತದೆ. ಅಂದಹಾಗೆ ಏರ್​ಟೆಲ್, Vi ಮತ್ತು ಜಿಯೋದಿಂದಲೂ 100 ರೂಪಾಯಿಯೊಳಗೆ ಇದೇ ರೀತಿಯ ಅನುಕೂಲಗಳು ಗ್ರಾಹಕರಿಗೆ ದೊರೆಯುತ್ತಿವೆ. ಹೈಸ್ಪೀಡ್ ಇಂಟರ್​ನೆಟ್​, ಉಚಿತ ಕಾಲಿಂಗ್ ಮತ್ತು ಎಸ್ಸೆಮ್ಮೆಸ್ ಹೀಗೆ.

ಏರ್​ಟೆಲ್ ರೂ. 98ರ ವೋಚರ್ ಏರ್​ಟೆಲ್​ನಿಂದ ರೂ. 98ಕ್ಕೆ 12 GB ಡೇಟಾ ನೀಡಲಾಗುತ್ತಿದೆ. ಈಗ ಯಾವ ವ್ಯಾಲಿಡಿಟಿ ಪ್ಲಾನ್​ನಲ್ಲಿ ಇರುತ್ತದೋ ಅದರ ಆಧಾರದಲ್ಲಿ ಈ ಪ್ಯಾಕೇಜ್​ನ ವ್ಯಾಲಿಡಿಟಿ ಅವಲಂಬನೆ ಆಗಿರುತ್ತದೆ.

ಜಿಯೋ ರೂ 101 4G ವೋಚರ್ ಭಾರತದ ಅತಿ ದೊಡ್ಡ ಟೆಲಿಕಾಂ ಆದ ರಿಲಯನ್ಸ್ ಜಿಯೋ 101 ರೂಪಾಯಿಗೆ 12GB ಹೈಸ್ಪೀಡ್ ಡೇಟಾ ನೀಡುತ್ತದೆ. ಇದರ ಜತೆಗೆ 1362 IUC ನಿಮಿಷಗಳ ಉಚಿತ ಕರೆಯನ್ನು ಸಹ ಪ್ಯಾಕೇಜ್ ಜತೆ ಒದಗಿಸಲಾಗುತ್ತದೆ.

Vi ರೂ. 98 ಆಫರ್ Viನಿಂದ 12GB ಹೈಸ್ಪೀಡ್ ಇಂಟರ್​ನೆಟ್ ಡೇಟಾ ದೊರೆಯುತ್ತದೆ. ಇದು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.

ಇದನ್ನೂ ಓದಿ: Jio free calls: ರಿಲಯನ್ಸ್ ಜಿಯೋದಿಂದ 300 ನಿಮಿಷಗಳ ಹೊರಹೋಗುವ ಕರೆಗಳು ಉಚಿತ

(Unlimited mobile internet data under Rs 100 by these telecom companies. With some other benefits like free calls and SMS)

Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ