AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Battlegrounds Mobile India: ಅಧಿಕೃತವಾಗಿ ವಾಪಸ್​ ಆದ PUBG; ಪ್ರೀ ರಿಜಿಸ್ಟ್ರೇಷನ್ ಹೇಗೆ?

PUBG ಗೇಮ್ ಈಗ ಅಧಿಕೃತವಾಗಿ ಈಗ ಭಾರತಕ್ಕೆ ಹಿಂತಿರುಗಿದೆ. ಹೆಸರು ಏನು ಗೊತ್ತಾ? Battlegrounds Mobile India. ಪ್ರೀ ರಿಜಿಸ್ಟ್ರೇಷನ್ ಕೂಡ ಶುರುವಾಗಿದೆ.

Battlegrounds Mobile India: ಅಧಿಕೃತವಾಗಿ ವಾಪಸ್​ ಆದ PUBG; ಪ್ರೀ ರಿಜಿಸ್ಟ್ರೇಷನ್ ಹೇಗೆ?
ಸಾಂದರ್ಭಿಕ ಚಿತ್ರ
Srinivas Mata
|

Updated on: May 13, 2021 | 11:29 PM

Share

ನವದೆಹಲಿ: ಬಹಳ ಸಮಯದ ನಿರೀಕ್ಷೆ ಹಾಗೂ ಊಹೆಯ ನಂತರ ಅಂತೂ PUBG Mobile ಮತ್ತೆ ಭಾರತಕ್ಕೆ ಅಧಿಕೃತವಾಗಿ ಕಾಲಿಟ್ಟಿದೆ. ಈ ಬಾರಿ ಅದರ ಹೆಸರು ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಆಗಿದೆ. ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ- ಅ ಬ್ಯಾಟಲ್ ರಾಯಲ್ ಎಕ್ಸ್​ಪೀರಿಯೆನ್ಸ್- ಇದಕ್ಕೆ ಆರಂಭಕ್ಕೂ ಮುನ್ನ ಪ್ರೀ ರಿಜಿಸ್ಟ್ರೇಷನ್ ಇದೆ. ಕ್ರಾಫ್ಟನ್ ಈ ಬಗ್ಗೆ ಮಾತನಾಡಿ, ನಿರಂತರವಾಗಿ ಗೇಮ್ ಕಂಟೆಂಟ್​ಗಳನ್ನು ತರುವ ಉದ್ದೇಶದಿಂದ ಇ- ಸ್ಪೋರ್ಟ್ಸ್ ಎಕೋಸಿಸ್ಟಮ್ ನಿರ್ಮಿಸುವುದಾಗಿ ಹೇಳಿದೆ. ಇದಕ್ಕಾಗಿ ಸರಣಿಯಲ್ಲಿ ಭಾರತಕ್ಕಾಗಿಯೇ ಮೀಸಲಾದ ಇನ್- ಗೇಮ್ ಕಾರ್ಯಕ್ರಮಗಳನ್ನು ನೀಡುವುದಾಗಿ ಹೇಳಿದೆ.

ಬ್ಯಾಟಲ್​ಗೌಂಡ್ಸ್ ಮೊಬೈಲ್ ಇಂಡಿಯಾ ಪ್ರೀ ರಿಜಿಸ್ಟ್ರೇಷನ್ ವರದಿಗಳ ಪ್ರಕಾರ, ಈ ಗೇಮ್​ನ ಡೆವಲಪರ್ ಆದ ಕ್ರಾಫ್ಟನ್​ನಿಂದ ಜೂನ್​ ತಿಂಗಳಲ್ಲಿ ಗೇಮ್ ಬಿಡುಗಡೆ ಆಗುವ ಸಾಧ್ಯತೆ ಇದೆ. ಆದರೆ ಕಂಪೆನಿಯಿಂದ ಅಧಿಕೃತವಾಗಿ ಯಾವುದೂ ದೃಢಪಟ್ಟಿಲ್ಲ. ಆದರೆ ವರದಿಗಳನ್ನು ಆಧರಿಸಿ ಹೇಳುವುದಾದರೆ, ಜೂನ್​ನಲ್ಲಿ ಗೇಮ್ ಆರಂಭ ಆಗುವುದಾದರೆ ಅದಕ್ಕೂ ಕನಿಷ್ಠ ಒಂದು ವಾರ ಮುಂಚೆಯಾದರೂ ಪ್ರೀ- ರಿಜಿಸ್ಟ್ರೇಷನ್ ಶುರುವಾಗಬೇಕು. PUBG Mobile ಇಂಡಿಯಾ ಆಂಡ್ರಾಯಿಡ್ ಮತ್ತು iOS ಎರಡರಲ್ಲೂ ಲಭ್ಯವಿದೆ. ಆದ್ದರಿಂದ ಕಂಪೆನಿಯು ಇದೇ ಟ್ರೆಂಡ್ ಅನುಸರಿಸಿದರೆ ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಪ್ರೀ ರಿಜಿಸ್ಟ್ರೇಷನ್ ಆಂಡ್ರಾಯಿಡ್ ಮತ್ತು iOS ಬಳಕೆದಾರರಿಗೆ ಸಿಗಲಿದೆ.

ಕಂಪೆನಿ ಹೇಳುವ ಪ್ರಕಾರ, ಈ ಗೇಮ್ ವಿಶ್ವಮಟ್ಟದ ಮಲ್ಟಿಪ್ಲೇಯರ್ ಅನುಭವವನ್ನು ಮೊಬೈಲ್​ನಲ್ಲಿ ಕಾಣುತ್ತೇವೆ. ಮೊಬೈಲ್ ಸಾಧನದಲ್ಲಿ ಈ ಗೇಮ್ ಉಚಿತವಾಗಿ ಆಡುವ ಅನುಭವ ಪಡೆಯಬಹುದು. ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾ ಭಾರತದಲ್ಲಿ ಎಕ್ಸ್​ಕ್ಲೂಸಿವ್ ಇನ್ ಗೇಮ್ ಆಗಿರುತ್ತದೆ.

ಬ್ಯಾಟಲ್​ಗ್ರೌಂಡ್ಸ್ ಮೊಬೈಲ್​ ಆಡುವಾಗ 18 ವರ್ಷಕ್ಕಿಂತ ಕೆಳಗಿನವರದು ಕಾನೂನು ಅನುಮತಿಯಂತೆ ಪೋಷಕರ ಸಮ್ಮತಿ ಇಲ್ಲದೆ ಉದ್ದೇಶಪೂರ್ವಕವಾಗಿ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಮತ್ತು ಹಂಚಿಕೊಳ್ಳುವುದಿಲ್ಲ. ಪೋಷಕರು ಅಥವಾ ಗಾರ್ಡಿಯನ್ ಮೊಬೈಲ್ ಸಂಖ್ಯೆಯನ್ನು ಕೇಳಲಾಗುತ್ತದೆ. ಕಾನೂನು ಪ್ರಕಾರ ಈ ಗೇಮ್ ಆಡಲು ಅರ್ಹರು ಎಂದು ಅವರು ಖಾತ್ರಿಪಡಿಸಬೇಕು. ಇನ್ನು ಪೋಷಕರು, ಗಾರ್ಡಿಯನ್ ಒಪ್ಪಿಗೆ ಇಲ್ಲದೆ ಮಾಹಿತಿಯನ್ನು ನೀಡಿದ್ದಲ್ಲಿ, ಆ ಮಾಹಿತಿಯನ್ನು ಡಿಲೀಟ್ ಮಾಡುವಂತೆ ಕೇಳಿದರೆ ಅದನ್ನು ತೆಗೆದುಹಾಕುತ್ತೇವೆ ಎಂದು ಕಂಪೆನಿ ಹೇಳಿದೆ.

ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ 118 ಆ್ಯಪ್​ಗಳನ್ನು ಕಳೆದ ಸೆಪ್ಟೆಂಬರ್ 2ರಂದು ಭಾರತದಲ್ಲಿ ನಿಷೇಧ ಮಾಡಲಾಗಿತ್ತು. ಅದರಲ್ಲಿ ಪ್ಲೇಯರ್ಸ್ ಅನೌನ್​ಸ್ ಬ್ಯಾಟಲ್​ಗ್ರೌಂಡ್ಸ್ (PUBG) ಮೊಬೈಲ್ ಕೀಡ ಒಂದಾಗಿತ್ತು. PUBGಗೆ ಜಾಗತಿಕವಾಗಿ 60 ಕೋಟಿ ಡೌನ್​ಲೋಡ್ಸ್ ಮತ್ತು 5 ಕೋಟಿ ಸಕ್ರಿಯ ಆಟಗಾರರಿದ್ದಾರೆ. ಭಾರತದಲ್ಲೇ ಹತ್ತಿರಹತ್ತಿರ 3.3 ಕೋಟಿ ಆಟಗಾರರು ಭಾರತದಲ್ಲಿ ಇದ್ದಾರೆ.

ಇದನ್ನೂ ಓದಿ: ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಆಗಿ ಬರುತ್ತಿದೆ PUBG; ಅಧಿಕೃತ ಪೋಸ್ಟರ್ ಬಿಡುಗಡೆ

(Battlegrounds mobile India officially back to India. Previously it was PUBG. How to preregistration for this?)

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ