ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಆಗಿ ಬರುತ್ತಿದೆ PUBG; ಅಧಿಕೃತ ಪೋಸ್ಟರ್ ಬಿಡುಗಡೆ

Battlegrounds Mobile India: ಪಬ್​ ಜಿ ಮೊಬೈಲ್ ಗೇಮ್ ಈಗ ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಹೆಸರಲ್ಲಿ ಅಧಿಕೃತವಾಗಿ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ನಿಮ್ಮೆದುರು ಇದೆ.

  • TV9 Web Team
  • Published On - 11:32 AM, 4 May 2021
ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಆಗಿ ಬರುತ್ತಿದೆ PUBG; ಅಧಿಕೃತ ಪೋಸ್ಟರ್ ಬಿಡುಗಡೆ
ಸಾಂದರ್ಭಿಕ ಚಿತ್ರ

ಭಾರತೀಯ ಗೇಮಿಂಗ್ ಉತ್ಸಾಹಿಗಳಿಗೆ PUBG (ಪಬ್​ಜಿ) ಮೊಬೈಲ್ ಇಂಡಿಯಾದಿಂದ ಅಧಿಕೃತ ಘೋಷಣೆ ಹೊರಬಿದ್ದಿದೆ. ಅಂತೂ ಕೆಲವು ತಿಂಗಳ ನಂತರ ಅದರ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಹೆಸರು ಬದಲಿಸಿಕೊಂಡು ಬಂದಿರುವ ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಬಗ್ಗೆ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈಚೆಗಷ್ಟೇ ತನ್ನ ಫೇಸ್​ಬುಕ್​ನಲ್ಲಿ ಹಾಕಿದ ಟೀಸರ್ ಪೋಸ್ಟರ್​ ಅನ್ನು ಕೆಲವೇ ಗಂಟೆಗಳಲ್ಲಿ ತೆಗೆಯಲಾಗಿತ್ತು. ಈ ವಾರದ ಆರಂಭದಲ್ಲಿ ವರದಿಯಾದಂತೆ, ಬ್ಯಾಟಲ್ ರಾಯಲ್ ಗೇಮ್ PUBG ಮೊಬೈಲ್ ಇಂಡಿಯಾದಿಂದ ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಎಂಬ ಹೆಸರಲ್ಲಿ ಬಿಡುಗಡೆ ಮಾಡಲಾಗುವುದು. ಈ ಅಧಿಕೃತ ಟೀಸರ್ ಪೋಸ್ಟರ್ ಮೂಲಕ ಸೋರಿಕೆ ದೃಢಪಟ್ಟಿದೆ. ಇನ್ನು ಗೇಮ್ ಭಾರತದಲ್ಲಿ ಯಾವಾಗ ಬಿಡುಗಡೆ ಎಂಬ ಮಾಹಿತಿ ಬಹಿರಂಗ ಆಗಬೇಕಿದೆ.

ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಹೆಸರಲ್ಲಿ ಭಾರತಕ್ಕೆ ಬರಲಿದೆ PUBG ಮೊಬೈಲ್ ಇಂಡಿಯಾ. ಅಧಿಕೃತ ಪೋಸ್ಟರ್​ ತೋರಿಸಿರುವ ಪ್ರಕಾರ, ಮೊಬೈಲ್ ಗೇಮ್ ಶೀಘ್ರದಲ್ಲೇ ಬರಲಿದೆ. PUBG ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮತ್ತು ಯೂಟ್ಯೂಬ್ ಪುಟದ ಪೋಸ್ಟರ್ ಈಗ ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಎಂದು ಬದಲಾಗಿದೆ. ಆದರೆ ಟ್ವಿಟ್ಟರ್​ ಹ್ಯಾಂಡಲ್​ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಕಳೆದ ವಾರ PUBG ಮೊಬೈಲ್ ಇಂಡಿಯಾದಿಂದ ತಪ್ಪಾಗಿ ಅದರ ಹೊಸ ಅಫಿಷಿಯಲ್ ಟ್ರೇಲರ್​ ಅನ್ನು ಯೂಟ್ಯೂಬ್​ನಲ್ಲಿ ಹಾಕಿ, ಆ ನಂತರ ಡಿಸೇಬಲ್ ಮಾಡಲಾಗಿತ್ತು. ಆ ಟ್ರೇಲರ್​ನಿಂದ ಯಾವುದೇ ಹೊಸ ಸಂಗತಿ ಬಿಡುಗಡೆ ಮಾಡಿರಲಿಲ್ಲ. ಈಗಾಗಲೇ ಗೊತ್ತಿರುವ ಕೆಲವು ಸಂಗತಿಗಳನ್ನೇ ಮತ್ತೆ ಖಾತ್ರಿ ಪಡಿಸಿದೆ.

ಅಂದಹಾಗೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯ ಪ್ರಕಾರ, ಭಾರತದಲ್ಲಿ PUBG ಮೊಬೈಲ್ ಗೇಮ್ ನಿಷೇಧಿಸಲಾಗಿತ್ತು. ಟಿಕ್​ಟಾಕ್, ಕ್ಯಾಮ್​ಸ್ಕ್ಯಾನರ್ ಸೇರಿದಂತೆ ಇತರ ಹಲವಾರು ಚೀನೀ ಅಪ್ಲಿಕೇಷನ್​ಗಳನ್ನು ಕೂಡ ಅದೇ ಕಾಯ್ದೆ ಅಡಿಯಲ್ಲಿ ನಿಷೇಧಿಸಲಾಗಿತ್ತು. ನಿಷೇಧಿಸಲಾದ ಯಾವುದೇ ಅಪ್ಲಿಕೇಷನ್​ಗಳು ಸದ್ಯಕ್ಕೆ ಭಾರತದಲ್ಲಿ ದೊರೆಯುತ್ತಿಲ್ಲ. ನಿಷೇಧಿತ ಅಪ್ಲಿಕೇಷನ್​ಗಳ ಪೈಕಿ PUBG ಮಾತ್ರ ಮತ್ತೆ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದೆ. ಭಾರತ ಸರ್ಕಾರದ ಜತೆ ಕಂಪೆನಿ ಕಡೆಯಿಂದ ಮಾತುಕತೆ ನಡೆಯುತ್ತಿದೆ. ಈ ಸಂಬಂಧವಾಗಿ ಕ್ರಾಫ್ಟಾನ್ ಮತ್ತು ಸರ್ಕಾರದ ಮಧ್ಯೆ ಹಲವು ಸುತ್ತಿನ ಮಾತುಕತೆ ಆಗಿದೆ.

ಭಾರತದಲ್ಲಿ ಈ ಗೇಮ್ ನಿಷೇಧಿಸುವ ಸಂದರ್ಭದಲ್ಲಿ ಎತ್ತಿದ್ದ ಆತಂಕಗಳೆಲ್ಲಕ್ಕೂ PUBG ಮೊಬೈಲ್ ಇಂಡಿಯಾ- ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾದಿಂದ ಸಮಾಧಾನಕರವಾದ ಪರಿಷ್ಕಾರ ಸಿಗಬೇಕಿದೆ. ಇನ್ನು ಕಂಪೆನಿ ಹೇಳಿರುವಂತೆ, ಗೇಮ್ ಅನ್ನು ಭಾರತದ ಮಾರುಕಟ್ಟೆಗೆ ಅಂತಲೇ ಹೊಸ ವರ್ಷನ್ ಘೋಷಣೆ ಮಾಡಲಾಗಿದೆ. ಎಲ್ಲ ಆತಂಕಗಳನ್ನೂ ನಿವಾರಿಸಲಾಗುತ್ತದೆ. ಮೊದಲ ರೀಲಾಂಚ್ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ, ಬಳಕೆದಾರರ ಡೇಟಾ ಮತ್ತು ಖಾಸಗಿತನ ಅತ್ಯಂತ ಮುಖ್ಯವಾದದ್ದು ಎಂದು PUBG ಕಂಪೆನಿ ಹೇಳಿತ್ತು.

ಇದನ್ನೂ ಓದಿ: PUBG ಮೊಬೈಲ್ ಇಂಡಿಯಾದ ಟೀಸರ್ ಬಿಡುಗಡೆಯಾದಷ್ಟೇ ವೇಗದಲ್ಲಿ ಡಿಲೀಟ್

(PUBG renamed the mobile game as Battlegrounds Mobile India and relaunch poster officially released. Here is the details)