PUBG ಮೊಬೈಲ್ ಇಂಡಿಯಾದ ಟೀಸರ್ ಬಿಡುಗಡೆಯಾದಷ್ಟೇ ವೇಗದಲ್ಲಿ ಡಿಲೀಟ್
PUBG ಮೊಬೈಲ್ ಇಂಡಿಯಾದ ಟೀಸರ್ ಬಿಡುಗಡೆ ಮಾಡಿದ ಕೆಲವೇ ನಿಮಿಷಗಳಲ್ಲಿ ಅಲ್ಲಿಂದ ತೆಗೆಯಲಾಗಿದೆ. ಅಂದಹಾಗೆ ಸದ್ಯಕ್ಕೆ ಭಾರತದಲ್ಲಿ PUBG ಮೊಬೈಲ್ಗೆ ನಿಷೇಧ ಇದೆ.
PUBG ಮೊಬೈಲ್ ಇಂಡಿಯಾ ಬಿಡುಗಡೆಯ ಬಗ್ಗೆ ಮತ್ತೊಮ್ಮೆ ಸುಳಿವು ನೀಡಲಾಗಿದೆ. ಸದ್ಯಕ್ಕೆ ಭಾರತದಲ್ಲಿ ನಿಷೇಧಿಸಿರುವ PUBG ಮೊಬೈಲ್ ಆಟವನ್ನು ಮತ್ತೆ ಬಿಡುಗಡೆ ಮಾಡುವ ಬಗ್ಗೆ ಕಂಪೆನಿಯ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಟೀಸರ್ ಬಿಡಲಾಗಿದೆ. ಆದರೆ PUBG ಮೊಬೈಲ್ ಇಂಡಿಯಾದ ಬಿಡುಗಡೆ ವಿಡಿಯೋವನ್ನು ಆ ನಂತರ ಡೆವಲಪರ್ಗಳು ತೆಗೆದಿದ್ದಾರೆ. ಈ ಟೀಸರ್ ವಿಡಿಯೋ ತೆಗೆಯುವ ಕೆಲವು ನಿಮಿಷಗಳ ಮುಂಚೆ ಈಗಲ್ ಐಸ್ ಅದನ್ನು ನೋಡಿದೆ. PUBG ಮೊಬೈಲ್ ಭಾರತದಲ್ಲಿ ಯಾವಾಗ ಆರಂಭವಾಗುತ್ತದೆ ಎಂಬ ಮಾಹಿತಿಯನ್ನು ಬಹಿರಂಗ ಮಾಡಿಲ್ಲ. ಆದರೆ ಈ ಗೇಮಿಂಗ್ ಸದ್ಯದಲ್ಲೇ ಬರಲಿದೆ ಎಂಬ ಸುಳಿವನ್ನು ಮಾತ್ರ ನೀಡಿದೆ.
ಬಹಳ ಸಮಯದಿಂದ ಭಾರತದಲ್ಲಿ PUBG ಮೊಬೈಲ್ ಬಿಡುಗಡೆ ದಿನಾಂಕದ ಬಗ್ಗೆ ವದಂತಿ ಇತ್ತು. ಕಳೆದ ವರ್ಷದ ಕೊನೆಯ ಭಾಗದಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಮಾಡಲಾಗಿತ್ತು. ಆದರೆ ಡೆವಲಪರ್ಗಳು ಭಾರತ ಸರ್ಕಾರದಿಂದ ಅನುಮತಿ ಪಡೆಯಬೇಕಿದೆ ಎಂಬ ಸುದ್ದಿ ಬಂದಿತ್ತು. ಅಂದಹಾಗೆ PUBG ಮೊಬೈಲ್ ಮತ್ತು PUBG ಮೊಬೈಲ್ ಲೈಟ್ ಸೇರಿದಂತೆ ನೂರಕ್ಕೂ ಹೆಚ್ಚು ಅಪ್ಲಿಕೇಷನ್ಗಳನ್ನು ಕಳೆದ ವರ್ಷದ ಸೆಪ್ಟೆಂಬರ್ನ ಆರಂಭದಲ್ಲಿ ಭಾರತದಲ್ಲಿ ನಿಷೇಧಿಸಲಾಯಿತು.
PUBG ಮೊಬೈಲ್ ಡೆವಲಪರ್ ಆದ ಕ್ರಾಫ್ಟನ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ PUBG ಮೊಬೈಲ್ ಇಂಡಿಯಾದ ಪುನರಾರಂಭದ ಸುಳಿವು ನೀಡಿದೆ. ಭಾರತದ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಟೀಸರ್ ಪೋಸ್ಟ್ ಮಾಡಲಾಗಿದ್ದು, “ಎಲ್ಲ ರೀತಿಯಲ್ಲೂ ಹೊಸದಾದ PUBG ಮೊಬೈಲ್ ಭಾರತಕ್ಕೆ ಬರಲಿದೆ. ಈಗ ನಿಮ್ಮ ಸ್ಕ್ವಾಡ್ಮೇಟ್ಗಳ ಜತೆಗೆ ಹಂಚಿಕೊಳ್ಳಿ!” ಎಂದು ಹಾಕಿದೆ. ಆಟಗಾರರಿಗೆ ಡೇಟಾ ಭದ್ರತೆ ಹೆಚ್ಚಿಸುವುದಾಗಿ ಕಂಪೆನಿ ಹೇಳಿದೆ. ಜತೆಗೆ ಸ್ಥಳೀಯ ನಿಬಂಧನೆಗಳಿಗೆ ಬದ್ಧವಾಗಿರುವುದಾಗಿ ತಿಳಿಸಿದೆ.
ಗೇಮ್ ಡೆವಲಪರ್ಸ್ ಹೇಳಿರುವಂತೆ, PUBG ಮೊಬೈಲ್ ಇಂಡಿಯಾವು ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಕಸ್ಟಮೈಸ್ಡ್ ವೈಶಿಷ್ಟ್ಯ ಹೊಂದಿರುತ್ತದೆ. ಹೊ ಪಾತ್ರಗಳಿಗೆ ಇರುವ ದಿರಿಸಿನಲ್ಲಿ ಬದಲಾವಣೆ ಇರಲಿದೆ. ಕೆಂಪಿನ ಬದಲು ಹಸಿರು ಎಫೆಕ್ಟ್ ಇರುತ್ತದೆ. PUBG ಕಾರ್ಪೊರೇಷನ್ ಮತ್ತು ಮಾತೃ ಸಂಸ್ಥೆಯಾದ ಕ್ರಾಫ್ಟನ್ ಭಾರತದಲ್ಲಿ 10 ಕೋಟಿ ಅಮೆರಿಕನ್ ಡಾಲರ್ ಮೊತ್ತವನ್ನು ಭಾರತದಲ್ಲಿ ಹೂಡಿಕೆ ಮಾಡಲು ಯೋಜನೆ ರೂಪಿಸಿವೆ. ಸ್ಥಳೀಯ ವಿಡಿಯೋ ಗೇಮ್, ಇ- ಸ್ಪೋರ್ಟ್ಸ್, ಮನರಂಜನೆ ಮತ್ತು ಐ.ಟಿ. ವಲಯದಲ್ಲಿ ಹೂಡಿಕೆಗೆ ಇದನ್ನು ಬಳಸಲಾಗುತ್ತದೆ.
ಇದನ್ನೂ ಓದಿ: ಕಿಲ್ಲರ್ ಗೇಮ್! PubG ಆಡಬೇಡ ಎಂದಿದ್ದಕ್ಕೆ ತಂದೆಯ ಕತ್ತನ್ನೇ ಕತ್ತರಿಸಿದ ಮಗ
(PubG mobile India teaser deleted by developers after a few minutes of it’s launch in YouTube channel)