ಕಿಲ್ಲರ್ ಗೇಮ್! PubG ಆಡಬೇಡ ಎಂದಿದ್ದಕ್ಕೆ ತಂದೆಯ ಕತ್ತನ್ನೇ ಕತ್ತರಿಸಿದ ಮಗ
ಮೀರತ್: ಕಿಲ್ಲರ್ ಗೇಮ್ ಪಬ್‌ಜಿ ಯಿಂದ ಕುಟುಬಗಳಲ್ಲಿ, ಮಾನವ ಸಂಬಂಧಗಳಲ್ಲಿ ಎಷ್ಟೋ ಅನಾಹುತಗಳು ನಡೆದುಬಿಟ್ಟಿವೆ. ಹಾಗೂ ಎಷ್ಟೂ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎಷ್ಟೋ ಪೋಷಕರು ಹಿಡಿ ಶಾಪ ಹಾಕಿದ್ದಾರೆ. ಆದರೆ ಮತ್ತೆ ಮತ್ತೆ ಈ ಗೇಮ್ನಿಂದ ಆಘಾತಕಾರಿ ಘಟನೆಗಳು ನಡೆಯುತ್ತಿವೆ. ಪಬ್‌ಜಿ ಯನ್ನು ಭಾರತ ಸರ್ಕಾರ ನಿಷೇಧಿಸಿದ ನಂತರವೂ ಚೀನಾದ ಗೇಮಿಂಗ್ ಆ್ಯಪ್ ದೇಶದ ಅನೇಕ ಕುಟುಂಬಗಳಿಗೆ ಮಾರಕವಾಗಿದೆ. ದೀರ್ಘಕಾಲ ಪಬ್‌ಜಿ ಆಡಬೇಡ ಎಂದಿದ್ದಕ್ಕೆ ಜನ್ಮ ನೀಡಿದ ಅಪ್ಪನ ಕತ್ತನ್ನೇ ಕೊಯ್ದ: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ […]
ಮೀರತ್: ಕಿಲ್ಲರ್ ಗೇಮ್ ಪಬ್‌ಜಿ ಯಿಂದ ಕುಟುಬಗಳಲ್ಲಿ, ಮಾನವ ಸಂಬಂಧಗಳಲ್ಲಿ ಎಷ್ಟೋ ಅನಾಹುತಗಳು ನಡೆದುಬಿಟ್ಟಿವೆ. ಹಾಗೂ ಎಷ್ಟೂ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎಷ್ಟೋ ಪೋಷಕರು ಹಿಡಿ ಶಾಪ ಹಾಕಿದ್ದಾರೆ. ಆದರೆ ಮತ್ತೆ ಮತ್ತೆ ಈ ಗೇಮ್ನಿಂದ ಆಘಾತಕಾರಿ ಘಟನೆಗಳು ನಡೆಯುತ್ತಿವೆ. ಪಬ್‌ಜಿ ಯನ್ನು ಭಾರತ ಸರ್ಕಾರ ನಿಷೇಧಿಸಿದ ನಂತರವೂ ಚೀನಾದ ಗೇಮಿಂಗ್ ಆ್ಯಪ್ ದೇಶದ ಅನೇಕ ಕುಟುಂಬಗಳಿಗೆ ಮಾರಕವಾಗಿದೆ.
ದೀರ್ಘಕಾಲ ಪಬ್‌ಜಿ ಆಡಬೇಡ ಎಂದಿದ್ದಕ್ಕೆ ಜನ್ಮ ನೀಡಿದ ಅಪ್ಪನ ಕತ್ತನ್ನೇ ಕೊಯ್ದ: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಜಾಸ್ತಿ ಹೊತ್ತು ಪಬ್‌ಜಿ ಆಡಬೇಡ ಎಂದಿದ್ದಕ್ಕೆ ಮಗ, ತನ್ನ ತಂದೆಯ ಕತ್ತನ್ನೇ ಕೊಯ್ದಿದ್ದಾನೆ. ಘಟನೆಯಲ್ಲಿ ತಂದೆಗೆ ಗಂಭೀರ ಗಾಯಗಳಾಗಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ. ಅಲ್ಲದೆ ತಂದೆಗೆ ಚಾಕುವಿನಿಂದ ಕತ್ತು ಕತ್ತರಿಸಿದ ಬಳಿಕ ಮಗ ಅಮೀರ್ ಕೂಡ ಅದೇ ಚಾಕುವಿನಿಂದ ಹಲ್ಲೆ ಮಾಡಿಕೊಂಡಿದ್ದಾನೆ.
ಸದ್ಯ ಇಬ್ಬರನ್ನೂ ಮೀರತ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೆಲ ವರದಿಗಳ ಪ್ರಕಾರ, ಜಿಲ್ಲೆಯ ಖಾರ್ಖೋಡಾ ಪಟ್ಟಣದ ಜಮ್ನನಗರದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ತಂದೆಯನ್ನು ಇರ್ಫಾನ್ ಮತ್ತು ಮಗನನ್ನು ಅಮೀರ್ ಎಂದು ಗುರುತಿಸಲಾಗಿದೆ.
ತಂದೆ ಮೇಲೆಯೇ ಹಲ್ಲೆ ನಡೆಸಿದ ಯುವಕ ಮಾದಕ ವ್ಯಸನಿಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದನೆಂದು ಯುವಕನ ಕುಟುಂಬಸ್ಥರು ತಿಳಿಸಿರುವುದಾಗಿ ಇನ್ಸ್‌ಪೆಕ್ಟರ್ ಅರವಿಂದ ಮೋಹನ್ ಶರ್ಮಾ ಹೇಳಿದ್ದಾರೆ. ಸರ್ಕಾರವು ಪಬ್‌ಜಿ ಗೇಮಿಂಗ್ ಆ್ಯಪನ್ನು ನಿಷೇಧಿಸಿತ್ತು. ಆದರೆ ಯುವಕರಲ್ಲಿ ಆ್ಯಪ್‌ನ ವ್ಯಾಮೋಹ ಇನ್ನೂ ಕಡಿಮೆಯಾಗಿಲ್ಲ. ಜನರು ಈಗಾಗಲೇ ಡೌನ್‌ಲೋಡ್ ಮಾಡಿಕೊಂಡಿದ್ದ ಅಪ್ಲಿಕೇಶನ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿದ್ದಾರೆ.