AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ದೊಡ್ಡ ಆರ್ಥಿಕ ಪ್ಯಾಕೇಜ್ ಬಗ್ಗೆ ಸುಳಿವು ಕೊಟ್ಟ ಕೇಂದ್ರ, ಹಬ್ಬದ ಸಮಯಕ್ಕೆ ಸಿಗುತ್ತಾ ಈ ಬಂಪರ್ ಗಿಫ್ಟ್?

ದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಹಾಗೂ ಲಾಕ್​ಡೌನ್​ನಿಂದ ಆರ್ಥಿಕತೆ ಕುಸಿತದ ಹಾದಿ ಹಿಡಿದಿದೆ. ಮೋದಿ ಸರ್ಕಾರ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿತ್ತು. ಇತ್ತೀಚೆಗೆ ಕೇಂದ್ರ ನೌಕರರಿಗೆ ಎಲ್‌ಟಿಎ ಯೋಜನೆಯನ್ನು ಘೋಷಿಸಿದೆ. ಆದರೆ ಇದರಿಂದ ಆರ್ಥಿಕತೆ ಚೇತರಿಕೆಯಾಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಮತ್ತೊಂದು ಆರ್ಥಿಕ ಪುನಶ್ಚೇತನದ ಪ್ಯಾಕೇಜ್ ಘೋಷಿಸುವ ಸುಳಿವನ್ನು ಕೇಂದ್ರ ಹಣಕಾಸು ಸಚಿವರೇ ನೀಡಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಶೇಕಡಾ 10 ರಷ್ಟು ನಕಾರಾತ್ಮಕ ಬೆಳವಣಿಗೆ ದಾಖಲಿಸಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಕೊರೊನಾ […]

ಮತ್ತೊಂದು ದೊಡ್ಡ ಆರ್ಥಿಕ ಪ್ಯಾಕೇಜ್ ಬಗ್ಗೆ ಸುಳಿವು ಕೊಟ್ಟ ಕೇಂದ್ರ, ಹಬ್ಬದ ಸಮಯಕ್ಕೆ ಸಿಗುತ್ತಾ ಈ ಬಂಪರ್ ಗಿಫ್ಟ್?
ಆಯೇಷಾ ಬಾನು
|

Updated on: Oct 20, 2020 | 8:14 AM

Share

ದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಹಾಗೂ ಲಾಕ್​ಡೌನ್​ನಿಂದ ಆರ್ಥಿಕತೆ ಕುಸಿತದ ಹಾದಿ ಹಿಡಿದಿದೆ. ಮೋದಿ ಸರ್ಕಾರ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿತ್ತು. ಇತ್ತೀಚೆಗೆ ಕೇಂದ್ರ ನೌಕರರಿಗೆ ಎಲ್‌ಟಿಎ ಯೋಜನೆಯನ್ನು ಘೋಷಿಸಿದೆ. ಆದರೆ ಇದರಿಂದ ಆರ್ಥಿಕತೆ ಚೇತರಿಕೆಯಾಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಮತ್ತೊಂದು ಆರ್ಥಿಕ ಪುನಶ್ಚೇತನದ ಪ್ಯಾಕೇಜ್ ಘೋಷಿಸುವ ಸುಳಿವನ್ನು ಕೇಂದ್ರ ಹಣಕಾಸು ಸಚಿವರೇ ನೀಡಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಶೇಕಡಾ 10 ರಷ್ಟು ನಕಾರಾತ್ಮಕ ಬೆಳವಣಿಗೆ ದಾಖಲಿಸಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಕೊರೊನಾ ಹಾಗೂ ಲಾಕ್​ಡೌನ್​ನಿಂದ ದೇಶದಲ್ಲಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಇದರ ಪರಿಣಾಮ ಜನರ ಬಳಿ ಹಣ ಇಲ್ಲ. ಖರೀದಿ ಸಾಮರ್ಥ್ಯ ಕುಸಿದಿದೆ. ಉತ್ಪನ್ನಗಳಿಗೆ ಬೇಡಿಕೆಯೇ ಇಲ್ಲವಾಗಿದೆ. ಬೇಡಿಕೆ ಇಲ್ಲದಿರೋ ಹಿನ್ನೆಲೆ ಉದ್ಯೋಗ ಸೃಷ್ಟಿ ಅಸಾಧ್ಯ. ಹೀಗಾಗಿ ಜನರ ಬಳಿ ಹಣ ಇರುವಂತೆ ನೋಡಿಕೊಳ್ಳಬೇಕು. ಜನ ಹೆಚ್ಚುಹೆಚ್ಚು ಹಣ ಖರ್ಚು ಮಾಡಿದಾಗ ಬೇಡಿಕೆ ಸೃಷ್ಟಿಯಾಗಿ ಉದ್ಯೋಗ ಸೃಷ್ಟಿಯಾಗುತ್ತೆ. ಹೀಗಾಗಿಯೇ ಕೇಂದ್ರ ಸರ್ಕಾರ ದೇಶದ ಆರ್ಥಿಕ ಸ್ಥಿತಿ ಪುನಶ್ಚೇತನಕ್ಕೆ ಹರಸಾಹಸಪಡ್ತಿದೆ.

ಒಮ್ಮೆ ₹20 ಲಕ್ಷ ಕೋಟಿ, ಮತ್ತೊಮ್ಮೆ ₹36 ಸಾವಿರ ಕೋಟಿ ಮೋದಿ ಸರ್ಕಾರ ಈಗಾಗಲೇ 20 ಲಕ್ಷ ಕೋಟಿ ಮೊತ್ತ ಪ್ಯಾಕೇಜ್ ಘೋಷಿಸಿತ್ತು. ಇತ್ತೀಚೆಗೆ 49 ಲಕ್ಷ ಕೇಂದ್ರ ನೌಕರರಿಗೆ ಎಲ್‌ಟಿಎ ಘೋಷಿಸಿದೆ. ಇದರಿಂದಾಗಿ 36 ಸಾವಿರ ಕೋಟಿ ರೂಪಾಯಿ ಮೌಲ್ಯದ ಉತ್ಪನ್ನಗಳಿಗೆ ಬೇಡಿಕೆ ಬರಲಿದೆ ಎನ್ನುವುದು ಕೇಂದ್ರದ ಅಂದಾಜು. ಕೆಲ ರಾಜ್ಯ ಸರ್ಕಾರಗಳಿಗೆ 12 ಸಾವಿರ ಕೋಟಿ ಬಡ್ಡಿರಹಿತ ಸಾಲ ಕೇಂದ್ರ ನೀಡಿದೆ. ಮೂಲಸೌಕರ್ಯ ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುವ ಘೋಷಣೆಯನ್ನು ಮಾಡಿದೆ. ಈಗ ಇಂತಹದ್ದೇ ಮತ್ತೊಂದು ಗಿಫ್ಟ್ ಸಿಗುವ ಸಾಧ್ಯತೆ ದಟ್ಟವಾಗಿದೆ.

ಮತ್ತೊಂದು ಆರ್ಥಿಕ ಪ್ಯಾಕೇಜ್ ಬಗ್ಗೆ ನಿರ್ಮಲಾ ಸುಳಿವು! ಈಗಾಗ್ಲೇ 2 ಬೃಹತ್ ಪ್ಯಾಕೇಜ್​ಗಳನ್ನ ನೀಡಿರುವ ಕೇಂದ್ರ ಈಗ ಮತ್ತೊಂದು ಬೃಹತ್ ಪ್ಯಾಕೇಜ್ ಘೋಷಣೆ ಮಾಡಲು ಸಿದ್ಧತೆ ನಡೆಸಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುಳಿವನ್ನೂ ನೀಡಿದ್ದಾರೆ. ಮತ್ತೊಂದು ಆರ್ಥಿಕ ಪ್ಯಾಕೇಜ್ ಘೋಷಿಸುವ ಆಯ್ಕೆ ಮುಕ್ತವಾಗಿದೆ ಎಂದು ನಿರ್ಮಲಾ ಸೋಮವಾರ ಹೇಳಿದ್ದಾರೆ. ಈ ಮೂಲಕ ಕೇಂದ್ರದ ಮುಂದೆ ಮತ್ತೊಂದು ಆರ್ಥಿಕ ಪುನಶ್ಚೇತನಕ್ಕೆ ಪ್ಯಾಕೇಜ್ ಘೋಷಿಸುವ ಚರ್ಚೆ ನಡೆಯುತ್ತಿದೆ ಎಂಬ ಸುಳಿವು ನೀಡಿದ್ದಾರೆ. ಹಾಗಾದ್ರೆ ಈ ಬಾರಿ ಯಾವ ವರ್ಗಕ್ಕೆ ಪ್ಯಾಕೇಜ್ ಸಿಗಬಹುದ ಅಂತಾ ನೋಡೋದಾದ್ರೆ.

ಖಾಸಗಿ ವಲಯಕ್ಕೆ ಬಂಪರ್? ದೇಶದಲ್ಲಿ ಬೇಡಿಕೆ ಹೆಚ್ಚಳಕ್ಕೆ ಮೋದಿ ಸರ್ಕಾರ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದು, ಮುಂದಿನ ಮಹತ್ವದ ಪ್ಯಾಕೇಜ್​ನಲ್ಲಿ ಖಾಸಗಿ ವಲಯಕ್ಕೆ ಬಂಪರ್ ಸಾಧ್ಯತೆ ಇದೆ. ಈ ಬಾರಿ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಬಂಪರ್ ಆಫರ್ ಸಿಗುವ ಸಾಧ್ಯತೆ ಇದ್ದು, ಎಲ್​ಟಿಎ ವೋಚರ್​ಗೆ ಪ್ಲ್ಯಾನ್ ನಡೆದಿದೆ. ಎಲ್​ಟಿಎ ವೋಚರ್​ಗಳಿಂದ ಗೃಹಬಳಕೆ ವಸ್ತುಗಳ ಖರೀದಿಯನ್ನು ಹೆಚ್ಚಿಸಬಹುದಾಗಿದೆ. ಈ ಮೂಲಕ ಹಬ್ಬದ ಸಂದರ್ಭದಲ್ಲಿ ಕೋಟ್ಯಂತರ ಉದ್ಯೋಗಿಗಳಿಗೆ ಸರ್ಪ್ರೈಸ್ ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿರುವಂತೆ ಕಾಣ್ತಿದೆ.

ಒಟ್ನಲ್ಲಿ ಕೊರೊನಾ ಕಂಟಕದಿಂದ ಪಾರಾಗುವ ಜೊತೆಗೆ ಆರ್ಥಿಕತೆಯನ್ನೂ ಸರಿದಾರಿಗೆ ತರಲು ಕೇಂದ್ರದಿಂದ ಮಹತ್ವದ ಯೋಜನೆ ರೂಪಿಸಲಾಗುತ್ತಿದೆ. ಆದರೆ ಯಾವುದೂ ಇನ್ನೂ ಅಧಿಕೃತವಾಗಿಲ್ಲವಾದರೂ, ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.