3 ತಿಂಗಳಲ್ಲಿ ಫಸ್ಟ್ ಟೈಂ.. ಕಡಿಮೆಯಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ!
ದೆಹಲಿ: ಗಲ್ಲಿಗಲ್ಲಿಯಲ್ಲೂ ಕೊರೊನಾ ಸೋಂಕಿನ ಆತಂಕ ಮನೆಮಾಡಿದೆ. ಎಲ್ಲೆಲ್ಲೂ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ನೋಡ ನೋಡುತ್ತಿದ್ದಂತೆ ಭಾರತದಲ್ಲಿ ಲಕ್ಷಾಂತರ ಜನರಿಗೆ ಈ ಡೆಡ್ಲಿ ವೈರಸ್ ಅಂಟಿಬಿಟ್ಟಿದೆ. ಆದ್ರೆ ಕೊರೊನಾ ಕಂಟಕ ಮುಗಿಯೋದು ಯಾವಾಗ..? ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಗುಡ್ ನ್ಯೂಸ್ ಹೊರಬಿದ್ದಿದೆ. ದೇಶದಲ್ಲಿ ಪ್ರತಿನಿತ್ಯ ವರದಿಯಾಗುತ್ತಿದ್ದ ಹೊಸ ಕೊರೊನಾ ಪ್ರಕರಣಗಳು ಕಳೆದ ಮೂರು ತಿಂಗಳಲ್ಲಿ ಇದೇ ಮೊದಲ ಬಾರಿಗೆ 50 ಸಾವಿರಕ್ಕಿಂತ ಕಡಿಮೆಯಾಗಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 46,790 ಕೇಸ್ ಮಾತ್ರ ಪತ್ತೆಯಾಗಿದೆ. […]
ದೆಹಲಿ: ಗಲ್ಲಿಗಲ್ಲಿಯಲ್ಲೂ ಕೊರೊನಾ ಸೋಂಕಿನ ಆತಂಕ ಮನೆಮಾಡಿದೆ. ಎಲ್ಲೆಲ್ಲೂ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ನೋಡ ನೋಡುತ್ತಿದ್ದಂತೆ ಭಾರತದಲ್ಲಿ ಲಕ್ಷಾಂತರ ಜನರಿಗೆ ಈ ಡೆಡ್ಲಿ ವೈರಸ್ ಅಂಟಿಬಿಟ್ಟಿದೆ. ಆದ್ರೆ ಕೊರೊನಾ ಕಂಟಕ ಮುಗಿಯೋದು ಯಾವಾಗ..? ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಗುಡ್ ನ್ಯೂಸ್ ಹೊರಬಿದ್ದಿದೆ.
ದೇಶದಲ್ಲಿ ಪ್ರತಿನಿತ್ಯ ವರದಿಯಾಗುತ್ತಿದ್ದ ಹೊಸ ಕೊರೊನಾ ಪ್ರಕರಣಗಳು ಕಳೆದ ಮೂರು ತಿಂಗಳಲ್ಲಿ ಇದೇ ಮೊದಲ ಬಾರಿಗೆ 50 ಸಾವಿರಕ್ಕಿಂತ ಕಡಿಮೆಯಾಗಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 46,790 ಕೇಸ್ ಮಾತ್ರ ಪತ್ತೆಯಾಗಿದೆ. ಜುಲೈ 29ರ ನಂತರ ಇದೇ ಮೊದಲ ಬಾರಿಗೆ ಹೊಸ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆಗೆ ಕುಸಿದಿದೆ.
ಸದ್ಯ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 75,97,063 ಕ್ಕೆ ತಲುಪಿದೆ. ಈ ಮಾಹಿತಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದೆ. ಇದಲ್ಲದೆ, ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 587 ಎಂದು ವರದಿಯಾಗಿದ್ದು ದೇಶದಲ್ಲಿ 1,15,197 ಸೋಂಕಿಗೆ ಬಲಿಯಾಗಿದ್ದಾರೆ.
ಚೀನಿ ವೈರಸ್ ಕೊರೊನಾ ಇಡೀ ಜಗತ್ತನ್ನೇ ಅಲುಗಾಡಿಸಿದೆ. ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಜನರು ಡೆಡ್ಲಿ ವೈರಸ್ಗೆ ಬಲಿಯಾಗಿದ್ದಾರೆ. ಆದ್ರೂ ಕೊರೊನಾ ತಣ್ಣಗಾಗಿಲ್ಲ, ಮತ್ತಷ್ಟು ತನ್ನ ಜಾಲ ಬೀಸುತ್ತಲೇ ಇದೆ. ಇನ್ನಷ್ಟು ಜನ ಈ ಮಹಾಮಾರಿಗೆ ಬಲಿ ಆಗ್ತಾನೆ ಇದ್ದಾರೆ.
ವಿಶ್ವದ ದೊಡ್ಡಣ್ಣ ಅಂತಾ ಕರೆಸಿಕೊಳ್ಳೋ ಅಮೆರಿಕ ಕೂಡ ‘ಕೊರೊನಾ’ ಕೂಪದಲ್ಲಿ ಬಿದ್ದು ವಿಲವಿಲನೆ ಒದ್ದಾಡುತ್ತಿದೆ. ಇಷ್ಟೆಲ್ಲದರ ಮಧ್ಯೆ ನೆಮ್ಮದಿಯಿಂದ ಇದ್ದ ಭಾರತೀಯರಿಗೂ ಕೊರೊನಾ ಶಾಕ್ ಸಿಕ್ಕಿದೆ. ಪ್ರತಿನಿತ್ಯ ಹತ್ತಾರು ಸಾವಿರ ಕೇಸ್ಗಳು ದಾಖಲಾಗುತ್ತಿವೆ.ಇಷ್ಟೆಲ್ಲಾ ಆತಂಕ ಮೂಡಿರುವಾಗಲೇ ನೆಮ್ಮದಿಯ ನಿಟ್ಟುಸಿರುವ ಬಿಡುವಂತಹ ವಿಚಾರ ಹೊರಬಿದ್ದಿದೆ.
3 ತಿಂಗಳಲ್ಲಿ ಇದೇ ಮೊದಲ ಬಾರಿಗೆ 50 ಸಾವಿರಕ್ಕಿಂತ ಕಡಿಮೆ ಕೇಸ್: ದೇಶದಲ್ಲಿ ಪ್ರತಿನಿತ್ಯ ವರದಿಯಾಗುತ್ತಿದ್ದ ಹೊಸ ಕೊರೊನಾ ಪ್ರಕರಣಗಳು ಕಳೆದ ಮೂರು ತಿಂಗಳಲ್ಲಿ ಇದೇ ಮೊದಲ ಬಾರಿಗೆ 50 ಸಾವಿರಕ್ಕಿಂತ ಕಡಿಮೆಯಾಗಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 46,790 ಕೇಸ್ ಮಾತ್ರ ಪತ್ತೆಯಾಗಿದೆ.
ಜುಲೈ 29ರ ನಂತರ ಇದೇ ಮೊದಲ ಬಾರಿಗೆ ಹೊಸ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆಗೆ ಕುಸಿದಿದೆ. ಸದ್ಯ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 75,97,063 ಕ್ಕೆ ತಲುಪಿದೆ. ಈ ಮಾಹಿತಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದೆ.
ಇದಲ್ಲದೆ, ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 587 ಎಂದು ವರದಿಯಾಗಿದ್ದು ದೇಶದಲ್ಲಿ 1,15,197 ಸೋಂಕಿಗೆ ಬಲಿಯಾಗಿದ್ದಾರೆ. ಇದರ ಜೊತೆಗೆ ಮತ್ತೊಂದು ಖುಷಿ ಪಡುವ ವಿಚಾರ ಅಂದ್ರೆ. ಫೆಬ್ರವರಿಯಲ್ಲಿ ಕೊರೊನಾ ಕಡಿಮೆಯಾಗಲಿದೆಯಂತೆ.
2021ರ ಫೆಬ್ರವರಿಯಲ್ಲಿ ‘ಕೊರೊನಾ’ ಕಥೆ ಕ್ಲೋಸ್! ಅಂದಹಾಗೆ ಸೆಪ್ಟೆಂಬರ್ 17 ರಿಂದ ದೇಶದಲ್ಲಿ ಉತ್ತುಂಗಕ್ಕೇರಿರುವ ಕೊರೊನಾ ಸಾಂಕ್ರಾಮಿಕ ರೋಗ ಇನ್ನೇನು ಕೊನೆ ಹಂತಕ್ಕೆ ಸಮೀಪಿಸಿದೆ ಎನ್ನಲಾಗಿದೆ. ಸೂಕ್ತ ಸುರಕ್ಷತಾ ಕ್ರಮ ಮುಂದುವರಿಸಿದರೆ 2021ರ ಫೆಬ್ರವರಿಯೊಳಗೆ ಸಕ್ರಿಯ ಪ್ರಕರಣಗಳು 40 ಸಾವಿರಕ್ಕಿಂತ ಕಡಿಮೆಯಾಗಲಿವೆ ಎಂದು ಕೇಂದ್ರ ರಚಿಸಿರುವ ತಜ್ಞರ ಸಮಿತಿ ಹೇಳಿದೆ. ಆ ಸಮಿತಿ ನೀಡಿರುವ ವರದಿಯನ್ನ ಡೀಟೇಲ್ ಆಗಿ ನೋಡೋದಾದ್ರೆ.
ಸುರಕ್ಷತೆ ಅತ್ಯಗತ್ಯ: ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಜನರು, ಸ್ಥಳೀಯ ಆಡಳಿತಗಳು ಎಚ್ಚರಿಕೆ ವಹಿಸಬೇಕಾಗಿದೆ. ಅಕಸ್ಮಾತ್ ಕೇರ್ಲೆಸ್ ಆಗಿ ವರ್ತಿಸಿದರೆ ತಿಂಗಳಿಗೆ 26 ಲಕ್ಷ ಕೇಸ್ಗಳು ದೇಶದಲ್ಲಿ ದಾಖಲಾಗುವ ಸಾಧ್ಯತೆಯಿದೆ. ಇನ್ನು ಓಣಂ ಹಬ್ಬದ ಸಂದರ್ಭದಲ್ಲಿ ಕೇರಳದಲ್ಲಿ ಕೊರೊನಾ ಕೇಸ್ಗಳು ದಿಢೀರ್ ಹೆಚ್ಚಾಗಿದ್ದನ್ನ ಇಲ್ಲಿ ಸ್ಮರಿಸಲಾಗಿದೆ. ನಿರ್ಲಕ್ಷ್ಯ ತೋರಿಸಿದರೆ ಅದರಿಂದಲೇ ಹೆಚ್ಚಿನ ತೊಂದರೆ ಆಗಲಿದೆ ಎಂದು ಸಮಿತಿ ವಾರ್ನಿಂಗ್ ಕೊಟ್ಟಿದೆ. ಐಐಟಿ, ಐಐಎಸ್ಸಿ ಮುಖಸ್ಥರಿದ್ದ ಸಮಿತಿಯಿಂದ ರಿಪೋರ್ಟ್ ಹೊರತರಲಾಗಿದ್ದು, ರಿಲೀಫ್ ಸಿಗುವ ಮುನ್ಸೂಚನೆ ಸಿಕ್ಕಿದೆ.
ಒಟ್ನಲ್ಲಿ ಏನೇ ಮಾಡಿದ್ರೂ ಸುರಕ್ಷತಾ ಕ್ರಮ ಕೈಗೊಳ್ಳದ ಹೊರತು ಅಷ್ಟು ಸುಲಭವಾಗಿ ಕೊರೊನಾ ಸೋಂಕನ್ನ ಹೊರದಬ್ಬಲು ಆಗಲ್ಲ. ಹೀಗಾಗಿಯೇ ಜನ ಕೂಡ ಸರ್ಕಾರದ ನಿಯಮ ಪಾಲಿಸಿ ಕಟ್ಟುನಿಟ್ಟಾಗಿ ಮಾಸ್ಟ್ ಧರಿಸುವುದು, ದೈಹಿಕ ಅಂತರ ಕಾಪಾಡಬೇಕು. ಇಲ್ಲವಾದರೆ ಮತ್ತೆ ಕೊರೊನಾ ಮರಣಮೃದಂಗ ಬಾರಿಸುವುದು ಪಕ್ಕಾ.