ಆರೋಗ್ಯ ಸೇತು ಆ್ಯಪ್ ಇಲ್ಲದಿದ್ರೆ ಸೋಂಕಿಗೆ ಚಿಕಿತ್ಸೆ ಇಲ್ವಂತೆ! ಹೈಕೋರ್ಟ್ ಹೇಳಿದ್ದೇನು?
ಬೆಂಗಳೂರು: ಕೊರೊನಾ ದೇಶವನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಪತ್ತೆಯಾಗಿ ಹಾಗೂ ಸೋಂಕಿನಿಂದ ದೂರ ಇರಿಸಲು ಸಹಾಯವಾಗಲಿ ಎಂದು ಕೇಂದ್ರ ಸರ್ಕಾರ ಆರೋಗ್ಯ ಸೇತು ಆ್ಯಪನ್ನು ಬಿಡುಗಡೆ ಮಾಡಿತ್ತು. ಹಾಗೂ ಅದನ್ನು ಕೆಲ ಸರ್ಕಾರಿ ಸಂಸ್ಥೆಗಳು ಕಡ್ಡಾಯಗೊಳಿಸಿದ್ದವು. ಆದರೆ ಈ ಬಗ್ಗೆ ಪ್ರಶ್ನಿಸಿ ಅನಿವರ್ ಅರವಿಂದ್ ಪಿ.ಐ.ಎಲ್. ಸಲ್ಲಿಸಿದ್ದರು. ಸದ್ಯ ಈಗ ಈ ಬಗ್ಗೆ ತೀರ್ಪು ಹೊರ ಬಿದ್ದಿದ್ದು, ಆರೋಗ್ಯ ಸೇತು ಆ್ಯಪ್ ಇಲ್ಲವೆಂದು ಸೌಲಭ್ಯ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿದೆ. […]
ಬೆಂಗಳೂರು: ಕೊರೊನಾ ದೇಶವನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಪತ್ತೆಯಾಗಿ ಹಾಗೂ ಸೋಂಕಿನಿಂದ ದೂರ ಇರಿಸಲು ಸಹಾಯವಾಗಲಿ ಎಂದು ಕೇಂದ್ರ ಸರ್ಕಾರ ಆರೋಗ್ಯ ಸೇತು ಆ್ಯಪನ್ನು ಬಿಡುಗಡೆ ಮಾಡಿತ್ತು. ಹಾಗೂ ಅದನ್ನು ಕೆಲ ಸರ್ಕಾರಿ ಸಂಸ್ಥೆಗಳು ಕಡ್ಡಾಯಗೊಳಿಸಿದ್ದವು. ಆದರೆ ಈ ಬಗ್ಗೆ ಪ್ರಶ್ನಿಸಿ ಅನಿವರ್ ಅರವಿಂದ್ ಪಿ.ಐ.ಎಲ್. ಸಲ್ಲಿಸಿದ್ದರು.
ಸದ್ಯ ಈಗ ಈ ಬಗ್ಗೆ ತೀರ್ಪು ಹೊರ ಬಿದ್ದಿದ್ದು, ಆರೋಗ್ಯ ಸೇತು ಆ್ಯಪ್ ಇಲ್ಲವೆಂದು ಸೌಲಭ್ಯ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿದೆ. ಕೆಲವೊಮ್ಮೆ ಹಣವಿರುವವರೂ ಸಹ ಮೊಬೈಲ್ ಇಟ್ಟುಕೊಳ್ಳುವುದಿಲ್ಲ.
ಅಂಥಹವರಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯ ಹೇಗೆ ಮಾಡುತ್ತೀರಿ ಎಂದು ಕೇಂದ್ರ ಸರ್ಕಾರದ ವಕೀಲರಿಗೆ ಹೈಕೋರ್ಟ್ ಪ್ರಶ್ನಿಸಿದೆ. ಸರ್ಕಾರಿ ಸಂಸ್ಥೆಗಳು ಆರೋಗ್ಯ ಸೇತು ಆ್ಯಪ್ ಕಡ್ಡಾಯಗೊಳಿಸುವಂತಿಲ್ಲ. ಸರ್ಕಾರಿ ಸಂಸ್ಥೆಗಳು ಸೇವೆ, ಸೌಲಭ್ಯ ನಿರಾಕರಿಸುವಂತಿಲ್ಲ. ಏರ್ ಪೋರ್ಟ್ಗಳಲ್ಲಿ ಆ್ಯಪ್ ಬಳಕೆಗೆ ಒತ್ತಾಯ ಮಾಡುವಂತಿಲ್ಲ ಎಂದು ಸೂಚಿಸಿದೆ.