AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Airtel Black Vs Jio Fiber: ಏರ್​ಟೆಲ್​ ಬ್ಲ್ಯಾಕ್ ವರ್ಸಸ್ ಜಿಯೋ ಫೈಬರ್ ಮಧ್ಯೆ ಭರ್ಜರಿ ಪೈಪೋಟಿ; ನಿಮ್ಮ ಆಯ್ಕೆ ಯಾವುದು?

ಇದು ಏರ್​ಟೆಲ್ ಬ್ಲ್ಯಾಕ್ ವರ್ಸಸ್ ಜಿಯೋ ಫೈಬರ್​ನ ಕಾಳಗ. ಬ್ರಾಂಡ್​ಬ್ಯಾಂಡ್, ಫೋನ್, ಡಿಟಿಎಚ್ ಎಲ್ಲವೂ ಒಳಗೊಂಡಂಥ ಪ್ಲ್ಯಾನ್​ಗಳಿವು. ಇವೆರಡರ ಪೈಕಿ ನಿಮ್ಮ ಆಯ್ಕೆ ಯಾವುದಿರಬೇಕು ಎಂಬುದನ್ನು ನಿರ್ಧರಿಸುವುದು ನಿಮಗೇ ಬಿಟ್ಟ ವಿಚಾರ,

Airtel Black Vs Jio Fiber: ಏರ್​ಟೆಲ್​ ಬ್ಲ್ಯಾಕ್ ವರ್ಸಸ್ ಜಿಯೋ ಫೈಬರ್ ಮಧ್ಯೆ ಭರ್ಜರಿ ಪೈಪೋಟಿ; ನಿಮ್ಮ ಆಯ್ಕೆ ಯಾವುದು?
ಏರ್​ಟೆಲ್​ ಬ್ಲ್ಯಾಕ್ ವರ್ಸಸ್ ಜಿಯೋ ಫೈಬರ್
TV9 Web
| Edited By: |

Updated on: Jul 02, 2021 | 11:25 PM

Share

ಏರ್​ಟೆಲ್​ನಿಂದ ಈಗ ಆಲ್-ಇನ್-ಒನ್ ಪ್ಲ್ಯಾನ್ ಬಂದಿದ್ದು, ಅದರ ಹೆಸರು ಏರ್​ಟೆಲ್ ಬ್ಲ್ಯಾಕ್ ಎಂದಿಡಲಾಗಿದೆ. ಗ್ರಾಹಕರು ಅದಾಗಲೇ ನಿಗದಿಯಾಗಿರುವ ನಾಲ್ಕು ಫಿಕ್ಸೆಡ್​ ಪ್ಲ್ಯಾನ್​ಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಅಥವಾ ತಮ್ಮ ಅಗತ್ಯಕ್ಕೆ ತಕ್ಕಂತೆ ರೂಪಿಸಿಕೊಳ್ಳಬಹುದು, ಅಂದರೆ ಕಸ್ಟಮೈಸ್ಡ್ ಪ್ಲ್ಯಾನ್ ಆಗಿರಲಿದೆ. ಅವೆರಡರ ಪೈಕಿ ತಮಗೆ ಬೇಕಾದದ್ದನ್ನು ಆರಿಸಿಕೊಳ್ಳುತ್ತಿರಬಹುದು. ಫೋನ್, ಬ್ರಾಡ್​ಬ್ಯಾಂಡ್, ಡಿಟಿಎಚ್​ ಹೀಗೆ ಬೇರೆ ಬೇರೆ ಆದ ಬಿಲ್​ ಅನ್ನು ಒಗ್ಗೂಡಿಸಿ, ಒಂದನ್ನಾಗಿ ಮಾಡುವುದು ಏರ್​ಟೆಲ್​ ಬ್ಲ್ಯಾಕ್ ಹಿಂದಿನ ಉದ್ದೇಶ. ವಿವಿಧ ಗ್ರಾಹಕ ಸೇವಾ ಅಂಗಗಳನ್ನು ಒಂದೇ ವ್ಯವಸ್ಥೆ ಅಡಿಯಲ್ಲಿ ತರುವುದು ಕೂಡ ಗುರಿಯಾಗಿದೆ. ಅಂದಹಾಗೆ, ಏರ್​ಟೆಲ್​ ಬ್ಲ್ಯಾಕ್​ ಏನನ್ನು ನೀಡುತ್ತಿದೆಯೋ ಅದಕ್ಕೆ ಹತ್ತಿರವಾಗಿ ಮಾರುಕಟ್ಟೆಯಲ್ಲಿ ಇರುವುದು ಜಿಯೋ ಫೈಬರ್. ಅದರಲ್ಲಿ ಬ್ರಾಡ್ ಬ್ಯಾಂಡ್​ ಜತೆಗೆ ವಾಯ್ಸ್ ಕಾಲ್, ಒಟಿಟಿ ಪ್ಲಾಟ್​ಫಾರ್ಮ್​ಗಳ ಸಂಪರ್ಕ ಸಹ ದೊರೆಯುತ್ತದೆ. ಆದರೆ ಏರ್​ಟೆಲ್​ ಬ್ಲ್ಯಾಕ್​ನ ಆಫರ್​ಗಳು ಒಂದಿಷ್ಟು ಆಕರ್ಷಕವಾಗಿವೆ. ಅಷ್ಟು ಸುಲಭಕ್ಕೆ ತೆಗೆದು ಹಾಕಲಿಕ್ಕೆ ಆಗಲ್ಲ. ಆದರೆ ಜಿಯೋ ಫೈಬರ್​ನ ಅನಿಯಮಿತ ಡೇಟಾ, ಧ್ವನಿ ವ್ಯವಸ್ಥೆಯ ಅದರ ಎಲ್ಲ ಪ್ಲ್ಯಾನ್​ಗಳು ಸ್ಪರ್ಧೆಯಲ್ಲಿ ತುದಿಗೆ ತಂದು ನಿಲ್ಲಿಸುತ್ತದೆ.

ಏರ್​ಟೆಲ್​ ಬ್ಲ್ಯಾಕ್​ನ ಪ್ರಮುಖ ಅಂಶಗಳೆಂದರೆ, ಫೈಬರ್, ಡಿಟಿಎಚ್ ಮತ್ತು ಮೊಬೈಲ್. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಅದನ್ನೇ ಮಿಶ್ರಣ ಮತ್ತು ಹೊಂದಾಣಿಕೆ ಮಾಡಲಾಗುತ್ತದೆ. ಫೈಬರ್ ಸೇವೆ ರೂ. 499ರಿಂದ ಶುರುವಾಗುತ್ತದೆ. ಇಂಟರ್​ನೆಟ್​ ವೇಗ 1 Gbps ದೊರೆಯುತ್ತದೆ. ಅನಿಯಮಿತ ಡೇಟಾ, ಲ್ಯಾಂಡ್​ಲೈನ್ ಸಂಪರ್ಕ ಕೂಡ ಸಿಗುತ್ತದೆ. ಇನ್ನು ಡಿಟಿಎಚ್​ ಸೇವೆ ರೂ. 153ರಿಂದ ಸಿಗುತ್ತದೆ. ಆಫರ್ ಉಚಿತ ಎಚ್​ಡಿ ಬಾಕ್ಸ್​ ಮತ್ತು ಏರ್​ಟೆಲ್​ Xtream ಬಾಕ್ಸ್ ಇದೆ. ಮೊಬೈಲ್ ಪ್ಲ್ಯಾನ್ 499 ರೂ.ನಿಂದ ಶುರು ಆಗುತ್ತದೆ. ಅನಿಯಮಿತ ಲೋಕಲ್ ಮತ್ತು ಎಸ್​ಟಿಡಿ ಕಾಲ್ಸ್​, 100 ಉಚಿತ ಟೆಕ್ಸ್ಟ್ ಮೆಸೇಜ್ ಮತ್ತು 210 ಜಿಬಿ ಡೇಟಾ ರೋಲ್ ಓವರ್ ಆಯ್ಕೆಯೊಂದಿಗೆ ದೊರೆಯುತ್ತದೆ.

ಏರ್​ಟೆಲ್​ ಬ್ಲ್ಯಾಕ್ ಹಾಗೂ ಜಿಯೋ ಫೈಬರ್ ಇವೆರಡೂ ಪ್ಲ್ಯಾನ್​ಗಳ ಹೋಲಿಕೆಯೊಂದನ್ನು ಇಲ್ಲಿ ನೀಡಲಾಗುತ್ತಿದೆ. 1. ಏರ್‌ಟೆಲ್ ಬ್ಲ್ಯಾಕ್ ₹ 2,099 ಪ್ಲಾನ್ ಮತ್ತು ಜಿಯೋಫೈಬರ್ ₹ 2,499 ಪ್ಲಾನ್ ಏರ್‌ಟೆಲ್ ಬ್ಲ್ಯಾಕ್‌ ₹ 2,099 ಯೋಜನೆಯು ಮೂರು ಮೊಬೈಲ್ ಸಂಪರ್ಕಗಳು, 1 ಫೈಬರ್ ಸಂಪರ್ಕ ಮತ್ತು ಒಂದು ಡಿಟಿಎಚ್ ಸಂಪರ್ಕದೊಂದಿಗೆ ಬರುತ್ತದೆ. ಮತ್ತೊಂದೆಡೆ, ಜಿಯೋ ಫೈಬರ್‌ನ 4 2,499 ಯೋಜನೆಯು ಅನಿಯಮಿತ ಡೇಟಾ ಮತ್ತು ಧ್ವನಿ, 500 Mbpsವರೆಗೆ ಇಂಟರ್​ನೆಟ್ ವೇಗ, ಮತ್ತು ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ಸೋನಿ Liv, Zee5 ಒಳಗೊಂಡಂತೆ ಇತರ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸಂಪರ್ಕ ದೊರಕಿಸುತ್ತದೆ.

2. ಏರ್‌ಟೆಲ್ ಬ್ಲ್ಯಾಕ್ ₹ 1,598 ಪ್ಲ್ಯಾನ್ ಮತ್ತು ಜಿಯೋಫೈಬರ್ 1,499 ಯೋಜನೆ ಏರ್‌ಟೆಲ್ ಬ್ಲ್ಯಾಕ್ 1,598ರ ಯೋಜನೆಯೊಂದಿಗೆ ಎರಡು ಮೊಬೈಲ್ ಸಂಪರ್ಕಗಳನ್ನು ಮತ್ತು ಫೈಬರ್ ಸಂಪರ್ಕವನ್ನು ನೀಡುತ್ತದೆ. ಜಿಯೋ 300 Mbpsವರೆಗೆ ಇಂಟರ್ನೆಟ್ ವೇಗ ಮತ್ತು ಅನಿಯಮಿತ ಡೇಟಾ ಮತ್ತು ಧ್ವನಿ ಸೌಲಭ್ಯಗಳನ್ನು ನೀಡುತ್ತದೆ. 2,499 ಯೋಜನೆಯಲ್ಲಿರುವ ಅದೇ ಒಟಿಟಿ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಂಪರ್ಕ ದೊರಕಿಸುತ್ತದೆ.

3. ಏರ್‌ಟೆಲ್ ಬ್ಲ್ಯಾಕ್ 1,349 ಯೋಜನೆ ಮತ್ತು ಜಿಯೋಫೈಬರ್ ₹ 1,499 ಯೋಜನೆ ಏರ್‌ಟೆಲ್ ಬ್ಲ್ಯಾಕ್‌ನ 1,349 ಯೋಜನೆಯು 3 ಮೊಬೈಲ್ ಸಂಪರ್ಕಗಳು ಮತ್ತು ಡಿಟಿಎಚ್ ಸಂಪರ್ಕದೊಂದಿಗೆ ಬರುತ್ತದೆ. ಜಿಯೋಫೈಬರ್‌ನ ಇದಕ್ಕೆ ಹತ್ತಿರದ ಯೋಜನೆ ಅಂದರೆ ₹ 1,499 ರೂಪಾಯಿಯದು.

4. ಏರ್‌ಟೆಲ್ ಬ್ಲ್ಯಾಕ್ 998 ಯೋಜನೆ ಮತ್ತು ಜಿಯೋಫೈಬರ್ 999 ಯೋಜನೆ ಏರ್​ಟೆಲ್ ಬ್ಲ್ಯಾಕ್ ಅಡಿ 998 ಯೋಜನೆಯು 2 ಮೊಬೈಲ್ ಸಂಪರ್ಕಗಳು ಮತ್ತು ಡಿಟಿಎಚ್ ಸಂಪರ್ಕವನ್ನು ನೀಡುತ್ತದೆ. ಜಿಯೋ ಫೈಬರ್‌ನ 999 ಯೋಜನೆಯು 150 Mbpsವರೆಗಿನ ಡೇಟಾ ವೇಗವನ್ನು ಹೊಂದಿದೆ ಮತ್ತು ಅನಿಯಮಿತ ಇಂಟರ್​ನೆಟ್ ಮತ್ತು ವಾಯ್ಸ್ ನಿಮಿಷಗಳನ್ನು ಹೊಂದಿದೆ. ಇನ್ನು ಒಟಿಟಿ ವಿಚಾರಕ್ಕೆ ಬರುವುದಾದರೆ, ಈ ಪ್ಲ್ಯಾನ್​ನಲ್ಲಿ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್ ವಿಐಪಿ, ಸೋನಿ Liv, Zee5, ಇರೋಸ್ ನೌ ಮತ್ತು ಇತರವು ಬರುತ್ತದೆ. ಮೇಲೆ ತಿಳಿಸಲಾದ ಎಲ್ಲ ಯೋಜನೆಗಳು 30 ದಿನಗಳ ಮಾನ್ಯತೆ ಹೊಂದಿವೆ.

ಇದನ್ನೂ ಓದಿ: ಜಿಯೋ ಫೈಬರ್‌ನಿಂದ ಮಾನ್ಸೂನ್​ ಸುಗ್ಗಿ! ಹೊಸ ಪೋಸ್ಟ್‌ ಪೇಯ್ಡ್ ಪ್ಲಾನ್‌, ಇಂಟರ್‌ನೆಟ್‌ ಬಾಕ್ಸ್‌ ಜೊತೆಗೆ ಇನ್‌ಸ್ಟಲೇಷನ್‌ ಉಚಿತ!

(Airtel Black or Jio Fiber which one have better plans to offer for customers. Here is an explainer)

ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?