ಜಿಯೋ ಫೈಬರ್‌ನಿಂದ ಮಾನ್ಸೂನ್​ ಸುಗ್ಗಿ! ಹೊಸ ಪೋಸ್ಟ್‌ ಪೇಯ್ಡ್ ಪ್ಲಾನ್‌, ಇಂಟರ್‌ನೆಟ್‌ ಬಾಕ್ಸ್‌ ಜೊತೆಗೆ ಇನ್‌ಸ್ಟಲೇಷನ್‌ ಉಚಿತ!

Jio Fiber post paid plans: ರಿಲಯನ್ಸ್ ಜಿಯೋನ ಹೊಸ ಪೋಸ್ಟ್‌ಪೇಯ್ಡ್ ಯೋಜನೆಯ ಒಂದು ವಿಶೇಷವೆಂದರೆ, ಇದರಲ್ಲಿ ಅಪ್‌ಲೋಡ್ ಮತ್ತು ಡೌನ್‌ಲೋಡ್ ವೇಗ ಒಂದೇ ಆಗಿರುತ್ತದೆ. 399 ರೂ ಪ್ಲಾನ್‌ಗೆ 30 ಎಂಬಿ, 699 ರೂ. ಪ್ಲಾನ್‌ಗೆ 100 ಎಂಬಿ, 999 ರೂ. ಪ್ಲಾನ್‌ಗೆ 150 ಎಂಬಿ ಮತ್ತು 1499 ರೂ. ಪ್ಲಾನ್‌ಗೆ 300 ಎಂಬಿ ಅಪ್‌ಲೋಡ್ ಮತ್ತು ಡೌನ್‌ಲೋಡ್ ವೇಗವನ್ನು ಗ್ರಾಹಕರು ಪಡೆದುಕೊಳ್ಳಲಿದ್ದಾರೆ. ಇದಲ್ಲದೆ, 1 ಜಿಬಿಪಿಎಸ್ ವರೆಗಿನ ಪ್ಲಾನ್‌ಗಳು ಜಿಯೋ ಫೈಬರ್‌ನಲ್ಲಿ ಲಭ್ಯವಿವೆ.

ಜಿಯೋ ಫೈಬರ್‌ನಿಂದ ಮಾನ್ಸೂನ್​ ಸುಗ್ಗಿ! ಹೊಸ ಪೋಸ್ಟ್‌ ಪೇಯ್ಡ್ ಪ್ಲಾನ್‌, ಇಂಟರ್‌ನೆಟ್‌ ಬಾಕ್ಸ್‌ ಜೊತೆಗೆ ಇನ್‌ಸ್ಟಲೇಷನ್‌ ಉಚಿತ!
ಜಿಯೋ ಫೈಬರ್‌ನಿಂದ ಮಾನ್ಸೂನ್​ ಸುಗ್ಗಿ! ಹೊಸ ಪೋಸ್ಟ್‌ ಪೇಯ್ಡ್ ಪ್ಲಾನ್‌, ಇಂಟರ್‌ನೆಟ್‌ ಬಾಕ್ಸ್‌ ಜೊತೆಗೆ ಇನ್‌ಸ್ಟಲೇಷನ್‌ ಉಚಿತ!
Follow us
ಸಾಧು ಶ್ರೀನಾಥ್​
| Updated By: Digi Tech Desk

Updated on:Jun 16, 2021 | 11:53 AM

ನವದೆಹಲಿ: ಕಳೆದ ವಾರವಷ್ಟೇ ದೈನಂದಿನ ಮಿತಿರಹಿತ 5 ನವೀನ ಪ್ರೀ ಪೇಯ್ಡ್ ಡೇಟಾ ಯೋಜನೆಗಳನ್ನು ಪರಿಚಯಿಸಿದ್ದ ರಿಲಯನ್ಸ್‌ ಜಿಯೋ ಈಗ ತನ್ನ ರಿಲಯನ್ಸ್‌ ಜಿಯೋ ಫೈಬರ್ ಬಳಕೆದಾರರಿಗಾಗಿ ಹಲವಾರು ಹೊಸ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ತಂದಿದೆ. ಈ ಪ್ಲಾನ್‌ಗಳು ಪ್ರತಿ ತಿಂಗಳಿಗೆ 399 ರೂ.ನಂತೆ ಆರಂಭವಾಗಲಿವೆ. ಹೊಸ ಪ್ಲಾನ್‌ ಚಾಲನೆಯ ಜೊತೆಗೆ ಕಂಪನಿಯು ಹೊಸ ಬಳಕೆದಾರರಿಗೆ ಇಂಟರ್ನೆಟ್ ಬಾಕ್ಸ್ ರೌಟರ್‌ ಅನ್ನು (Jio Fiber router) ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ಅಲ್ಲದೆ ಗ್ರಾಹಕರು ಯಾವುದೇ ಇನ್‌ಸ್ಟಲೇಷನ್‌ಗಾಗಿ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಕನಿಷ್ಠ 6 ತಿಂಗಳ ವ್ಯಾಲಿಡಿಟಿಯನ್ನು ಖರೀದಿಸುವ ಗ್ರಾಹಕರು ಉಚಿತ ಇಂಟರ್ನೆಟ್ ಬಾಕ್ಸ್ ಮತ್ತು ಉಚಿತ ಇನ್‌ಸ್ಟಲೇಷನ್‌ ಲಾಭ ಪಡೆಯಲಿದ್ದು, ಇದರಿಂದ ಒಟ್ಟು 1500 ರೂ.ವರೆಗೆ ಉಳಿತಾಯವಾಗುವುದು. ಎಲ್ಲಾ ಪ್ಲಾನ್‌ಗಳು ಜೂನ್ 17 ರಿಂದ ಅನ್ವಯವಾಗುತ್ತವೆ.

ರಿಲಯನ್ಸ್ ಜಿಯೋನ ಹೊಸ ಪೋಸ್ಟ್‌ಪೇಯ್ಡ್ ಯೋಜನೆಯ ಒಂದು ವಿಶೇಷವೆಂದರೆ, ಇದರಲ್ಲಿ ಅಪ್‌ಲೋಡ್ ಮತ್ತು ಡೌನ್‌ಲೋಡ್ ವೇಗ ಒಂದೇ ಆಗಿರುತ್ತದೆ. 399 ರೂ ಪ್ಲಾನ್‌ಗೆ 30 ಎಂಬಿ, 699 ರೂ. ಪ್ಲಾನ್‌ಗೆ 100 ಎಂಬಿ, 999 ರೂ. ಪ್ಲಾನ್‌ಗೆ 150 ಎಂಬಿ ಮತ್ತು 1499 ರೂ. ಪ್ಲಾನ್‌ಗೆ 300 ಎಂಬಿ ಅಪ್‌ಲೋಡ್ ಮತ್ತು ಡೌನ್‌ಲೋಡ್ ವೇಗವನ್ನು ಗ್ರಾಹಕರು ಪಡೆದುಕೊಳ್ಳಲಿದ್ದಾರೆ. ಇದಲ್ಲದೆ, 1 ಜಿಬಿಪಿಎಸ್ ವರೆಗಿನ ಪ್ಲಾನ್‌ಗಳು ಜಿಯೋ ಫೈಬರ್‌ನಲ್ಲಿ ಲಭ್ಯವಿವೆ.

ರಿಲಯನ್ಸ್ ಜಿಯೋನ 999 ರೂ. ಪೋಸ್ಟ್‌ ಪೇಯ್ಡ್ ಜಿಯೋ ಫೈಬರ್ ಸಂಪರ್ಕದೊಂದಿಗೆ, ಗ್ರಾಹಕರಿಗೆ ಉಚಿತ ಒಟಿಟಿ ಅಪ್ಲಿಕೇಶನ್‌ಗಳ ಲಾಭವೂ ಸಿಗಲಿದೆ. ಅಮೆಜಾನ್ ಪ್ರೈಮ್, ಡಿಸ್ನಿ ಹಾಟ್‌ಸ್ಟಾರ್, ಸೋನಿ ಲಿವ್, ಜಿ 5, ವೂಟ್ ಸೆಲೆಕ್ಟ್, ಸನ್ ನೆಕ್ಟ್ ಮತ್ತು ಹೊಯ್ಚೊಯ್‌ನಂತಹ 14 ಜನಪ್ರಿಯ ಒಟಿಟಿ ಅಪ್ಲಿಕೇಶನ್‌ಗಳು ಇದರಲ್ಲಿವೆ. 1499 ಯೋಜನೆಯು ನೆಟ್‌ಫ್ಲಿಕ್ಸ್ ಸೇರಿದಂತೆ ಎಲ್ಲಾ 15 ಒಟಿಟಿ ಅಪ್ಲಿಕೇಶನ್‌ಗಳನ್ನು ಒಳಗೊಂಡಿರುತ್ತದೆ. ಈ ಅಪ್ಲಿಕೇಶನ್‌ಗಳ ಮಾರುಕಟ್ಟೆ ಬೆಲೆಯು 999 ರೂ. ಗಳಾಗಿದ್ದು, ಒಟಿಟಿ ಅಪ್ಲಿಕೇಶನ್‌ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು 1000 ರೂ.ಗಳ ಸೆಕ್ಯುರಿಟಿ ಠೇವಣಿ ತೆಗೆದುಕೊಳ್ಳುವ ಮೂಲಕ ಕಂಪನಿಯು 4K ಸೆಟ್ ಟಾಪ್ ಬಾಕ್ಸ್ ಅನ್ನು ಗ್ರಾಹಕರಿಗೆ ಉಚಿತವಾಗಿ ಒದಗಿಸುತ್ತದೆ.

ಜಿಯೋ ಫೈಬರ್ ಪೋಸ್ಟ್‌ ಪೇಯ್ಡ್ ಪಡೆಯುವುದು ಹೇಗೆ:

jio.com/fiber ನಲ್ಲಿ ಲಾಗ್ ಇನ್ ಮಾಡುವ ಮೂಲಕ ಒಬ್ಬರು ಸೇವೆಯನ್ನು ಪಡೆಯಬಹುದು. ನಿಮ್ಮ ಪ್ರದೇಶವು ಜಿಯೋ ಫೈಬರ್ ಸಿದ್ಧವಾದ ತಕ್ಷಣ, ನಮ್ಮ ಕಾರ್ಯನಿರ್ವಾಹಕರು ನಿಮ್ಮನ್ನು ಸಂಪರ್ಕಿಸಿ, ಪೋಸ್ಟ್‌ ಪೇಯ್ಡ್ ಕನೆಕ್ಷನ್ ನೀಡುತ್ತಾರೆ. ನಾಳೆ ಗುರುವಾರದಿಂದ (ಜೂನ್ 17) ಜಿಯೋ ಫೈಬರ್ ಪೋಸ್ಟ್‌ ಪೇಯ್ಡ್ ಸೇವೆ ಲಭ್ಯವಿರುತ್ತದೆ.

Published On - 9:34 am, Wed, 16 June 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ