Sign In

By signing in or creating an account, you agree with Associated Broadcasting Company's Terms & Conditions and Privacy Policy.

Debit Card EMI: ಕೊಟಕ್ ಮಹೀಂದ್ರಾ ಡೆಬಿಟ್​ ಕಾರ್ಡ್​ದಾರರಿಗೆ ಸ್ಮಾರ್ಟ್ ಇಎಂಐ ಪರಿಚಯಿಸಿದ ಕೆಎಂಬಿಎಲ್

ಕೊಟಕ್​ ಮಹೀಂದ್ರಾ ಬ್ಯಾಂಕ್​ನಿಂದ ಡೆಬಿಟ್​ ಕಾರ್ಡ್​ದಾರರಿಗೆ ಸ್ಮಾರ್ಟ್​ ಇಎಂಐ ವ್ಯವಸ್ಥೆ ಆರಂಭಿಸಲಾಗಿದೆ. ಇದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

Debit Card EMI: ಕೊಟಕ್ ಮಹೀಂದ್ರಾ ಡೆಬಿಟ್​ ಕಾರ್ಡ್​ದಾರರಿಗೆ ಸ್ಮಾರ್ಟ್ ಇಎಂಐ ಪರಿಚಯಿಸಿದ ಕೆಎಂಬಿಎಲ್
ಕೊಟಕ್ ಮಹೀಂದ್ರಾ ಬ್ಯಾಂಕ್ ಈ ಬ್ಯಾಂಕ್​ನಿಂದ ಕೊಟಕ್ ಜೂನಿಯರ್ ಅಕೌಂಟ್​ಗೆ ವಾರ್ಷಿಕ ಶೇಕಡಾ 4ರ ವರೆಗಿನ ಬಡ್ಡಿಯನ್ನು ನೀಡುತ್ತದೆ. ಕೊಟಕ್ ಜೂನಿಯರ್ ಖಾತೆಯು ಮಗುವಿನ ಭವಿಷ್ಯಕ್ಕಾಗಿ ರೆಕರಿಂಗ್ ಡೆಪಾಸಿಟ್​ ಮತ್ತು ಎಸ್‌ಐಪಿ ರೂಪದಲ್ಲಿ ಸುಲಭ ಹೂಡಿಕೆಗೆ ಆಯ್ಕೆಗಳನ್ನು ಹೊಂದಿದೆ. ರೆಕರಿಂಗ್ ಡೆಪಾಸಿಟ್ ಅಥವಾ SIP ಅನ್ನು ಕನಿಷ್ಠ ಮೂರು ವರ್ಷಗಳ ಅವಧಿಗೆ ಆರಿಸಿಕೊಂಡರೆ ಖಾತೆದಾರರು ತಮ್ಮ ಮಗುವಿನ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕಾಗಿಲ್ಲ. 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಪೋಷಕರ ಕೋರಿಕೆಯ ಮೇರೆಗೆ ಡೆಬಿಟ್ ಕಾರ್ಡ್‌ಗಳನ್ನು ನೀಡಲಾಗುವುದು ಮತ್ತು ಅವರ ದೈನಂದಿನ ವಿಥ್​ಡ್ರಾ ಮಿತಿಯು ರೂ. 5,000 ಮಾತ್ರ.
Follow us
TV9 Web
| Updated By: Srinivas Mata

Updated on: Aug 11, 2021 | 11:14 AM

ಕೊಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್​ನಿಂದ (KMBL) ಮಂಗಳವಾರದಂದು ತಿಳಿಸಿರುವಂತೆ, ಎಲ್ಲ ಅರ್ಹ ಕೊಟಲ್ ಡೆಬಿಟ್ ಕಾರ್ಡ್​ದಾರರು ಸಹ ಈಗ ತಮ್ಮ ಮಧ್ಯಮ ಹಾಗೂ ಹೆಚ್ಚಿನ ಮೌಲ್ಯದ ಖರೀದಿಗೆ ಡೆಬಿಟ್ ಕಾರ್ಡ್ ವ್ಯವಸ್ಥೆಗೆ ಇಎಂಐ ಪಡೆಯಬಹುದು. ದೇಶಾದ್ಯಂತ ಇರುವ ಎಲ್ಲ ಆಫ್​ಲೈನ್ ಹಾಗೂ ಆನ್​ಲೈನ್ ಮಳಿಗೆಗಳಲ್ಲಿ ಖರೀದಿ ಮಾಡಬಹುದು. ಕೊಟಕ್ ಸ್ಮಾರ್ಟ್ ಇಎಂಐ ಮೂಲಕ ಈ “ಬೈ ನೌ, ಪೇ ಲೇಟರ್” ಶುರು ಮಾಡಲಾಗಿದೆ. ಕೆಎಂಬಿಎಲ್ ಗ್ರಾಹಕರಿ ಏನನ್ನಾದರೂ ಮತ್ತು ಎಲ್ಲವನ್ನೂ ವರ್ಚುವಲಿ ಖರೀದಿಸಬಹುದು. ಅದು ದಿನಸಿ ಇರಬಹುದು, ಫ್ಯಾಷನ್, ಸ್ಮಾರ್ಟ್​ಫೋನ್​ನಿಂದ ಎಲೆಕ್ಟ್ರಾನಿಕ್ಸ್​ ತನಕ ಯಾವುದೇ ವರ್ತಕರ ಮೂಲಕ ಖರೀದಿಸಿ ಮತ್ತು ಆ ನಂತರ ಸುಲಭ ಕಂತುಗಳಲ್ಲಿ ಪಾವತಿಸಬಹುದು.

ಕೊಟಕ್ ಸ್ಮಾರ್ಟ್ ಇಎಂಐ ಪಡೆಯುವುದು ಹೇಗೆ? * ಕೊಟಕ್ ಮಹೀಂದ್ರಾ ಡೆಬಿಟ್​ ಕಾರ್ಡ್​ದಾರರು ಕೊಟಕ್ ಡೆಬಿಟ್​ ಕಾರ್ಡ್ ಬಳಸಿ ಯಾವುದೇ ಆನ್​ಲೈನ್/ಆಫ್​ಲೈನ್ ಸ್ಟೋರ್​ನಲ್ಲಿ ಖರೀದಿ ಮಾಡಬಹುದು. * ಆ ನಂತರ ಎಸ್ಸೆಮ್ಮೆಸ್ ಮೂಲಕ ಲಿಂಕ್ ಬರುತ್ತದೆ. ಅದನ್ನು ಬಳಸಿಕೊಂಡು ವಹಿವಾಟನ್ನು ಇಎಂಐ ಆಗಿ ಕನ್ವರ್ಟ್ ಮಾಡಿಕೊಳ್ಳಬಹುದು. * ಗ್ರಾಹಕರು ಲಿಂಕ್ ಮೇಲೆ ಕ್ಲಿಕ್ ಮಾಡಿ, ತಮ್ಮ ಆದ್ಯತೆಯ ಇಎಂಐ ಅವಧಿಯನ್ನು ಆರಿಸಿಕೊಳ್ಳಬೇಕು. ಮಾಹಿತಿಯನ್ನು ಪರಿಶೀಲನೆ ಮಾಡಿ, ವಹಿವಾಟನ್ನು ಖಾತ್ರಿಪಡಿಸಬೇಕು. * ವಹಿವಾಟು ಆ ತಕ್ಷಣವೇ ಇಎಂಐ ಆಗಿ ಕನ್ವರ್ಟ್ ಆಗುತ್ತದೆ. * ಸ್ವೈಪ್ ಮಾಡಿದಂಥ ಮೂಲ ಮೊತ್ತವು ಗ್ರಾಹಕರ ಖಾತೆಗೆ ಜಮೆ ಆಗುತ್ತದೆ.

ಈ ತನಕ ಹೇಗಿತ್ತು ಅಂದರೆ, ಬ್ಯಾಂಕ್​ನಿಂದ ಒಪ್ಪಂದ ಮಾಡಿಕೊಂಡ ವರ್ತಕರ ಮಳಿಗೆಗಳಲ್ಲಿ ವಹಿವಾಟು ನಡೆಸಿದಲ್ಲಿ ಮಾತ್ರ ಇಎಂಐ ಆಗಿ ಕನ್ವರ್ಟ್ ಆಗುತ್ತಿತ್ತು. ಕೊಟಕ್ ಸ್ಮಾರ್ಟ್ ಇಎಂಐ ಅಡಿಯಲ್ಲಿ ಕೆಎಂಬಿಎಲ್​ನಿಂದ ಡೆಬಿಟ್​ ಕಾರ್ಡ್ ಮೇಲಿನ ಇಎಂಐ ಅನ್ನು ದೇಶದಾದ್ಯಂತ ವಿಸ್ತರಣೆ ಮಾಡಲಾಗಿದೆ. ಜತೆಗೆ ಎಲ್ಲ ವಿಭಾಗಗಳಿಗೂ (ಕೆಟಗಿರಿ) ಅನ್ವಯ ಆಗುತ್ತದೆ. ಕೊಟಕ್ ಮಹೀಂದ್ರಾ ಬ್ಯಾಂಕ್ ಹೇಳಿರುವಂತೆ, ರೂ. 5000 ಹಾಗೂ ಅದಕ್ಕಿಂತ ಮೇಲ್ಪಟ್ಟ ವಹಿವಾಟನ್ನು ಯಾವುದೇ ಕಾಗದ ವ್ಯವಹಾರ ಅಥವಾ ದಾಖಲಾತಿಗಳ ಅಗತ್ಯ ಇಲ್ಲದೆ ಇಎಂಐ ಆಗಿ ಬದಲಾಯಿಸಿಕೊಳ್ಳಬಹುದು.

ಇದನ್ನೂ ಓದಿ: Pay Your Contact: ಕೊಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರು ಮೊಬೈಲ್​ ನಂಬರ್ ಮೂಲಕವೇ ಹಣ ಪಾವತಿಸಬಹುದು

ಇದನ್ನೂ ಓದಿ: Housing loan: ಶೇ 7ರೊಳಗೆ ಇಳಿಯಿತು ಈ ಬ್ಯಾಂಕ್​​ಗಳ ಗೃಹ ಸಾಲ ಬಡ್ಡಿ ದರ

(Kotak Mahindra Bank Launched Smart EMI Facilities For Debit Cardholders)

ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್