Gold Rate Today: ಹಲವು ವರ್ಷಗಳಿಂದ ಕೂಡಿಟ್ಟ ಹಣದಲ್ಲಿ ಚಿನ್ನ, ಬೆಳ್ಳಿ ಖರೀದಿಸುವ ಯೋಚನೆ ಇದ್ದರೆ ದರ ವಿವರ ಪರಿಶೀಲಿಸಿ
Gold Price Today: ನೀವು ಚಿನ್ನದ ಆಭರಣವನ್ನೋ ಅಥವಾ ಬೆಳ್ಳಿಯಆಭರಣವನ್ನೋ ಖರೀದಿಸುವ ಕುರಿತಾಗಿ ಯೋಚಿಸುತ್ತಿದ್ದರೆ ಇಂದು (ಆಗಸ್ಟ್ 11, ಬುಧವಾರ) ದರ ವಿವರ ಪರಿಶೀಲಿಸಿ.
Gold Silver Price Today | ಬೆಂಗಳೂರು: ಕಳೆದ ನಾಲ್ಕು ದಿಗಳಿಂದ ಚಿನ್ನದ ದರ (Gold Price) ಇಳಿಕೆಯತ್ತ ಮುಖ ಮಾಡಿದ್ದು, ಆಭರಣ ಪ್ರಿಯರಿಗೆ ಹೆಚ್ಚು ಸಂತೋಷವನ್ನುಂಟು ಮಾಡಿತ್ತು. ಆದರೆ ಇಂದು ಚಿನ್ನದ ದರ ಸ್ಥಿರತೆಯನ್ನು ಕಾಯ್ದುಕೊಂಡಿದೆ. ದೈನಂದಿನ ದರ ಬದಲಾವಣೆಯನ್ನು ಗಮನಿಸುವಾಗ ಆಭರಣಗಳ ಬೆಲೆ ಏರಿಳಿತ ಕಾಣುತ್ತಿರುವುದು ಸರ್ವೇ ಸಾಮಾನ್ಯ, ನೀವು ಚಿನ್ನದ ಆಭರಣವನ್ನೋ ಅಥವಾ ಬೆಳ್ಳಿಯ(Silver Price) ಆಭರಣವನ್ನೋ ಖರೀದಿಸುವ ಕುರಿತಾಗಿ ಯೋಚಿಸುತ್ತಿದ್ದರೆ ಇಂದು (ಆಗಸ್ಟ್ 11, ಬುಧವಾರ) ದರ ವಿವರ ಪರಿಶೀಲಿಸಿ.
ಚಿನ್ನದ ಆಭರಣ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಆಭರಣ ಖರೀದಿಸುವುದೆಂದರೆ ಮಹಿಳೆಯರಿಗೆ ಎಲ್ಲಿಲ್ಲದ ಖುಷಿ. ಕೇವಲ ಅಲಂಕಾರಕ್ಕೆ ಮಾತ್ರವಲ್ಲ ಹೂಡಿಕೆಯ ದೃಷ್ಟಿಯಿಂದಲೂ ಚಿನ್ನ ಖರೀದಿಸುವ ಪದ್ಧತಿ ಭಾರತದಲ್ಲಿದೆ. ಹಾಗಾಗಿ ಆಭರಣದ ದರ ಎಷ್ಟಿದೆ? ಅಷ್ಟು ವರ್ಷಗಳಿಂದ ಸಂಗ್ರಹಿಸಿದ ಹಣದಲ್ಲಿ ಚಿನ್ನ ಕೊಳ್ಳಲು ಸೂಕ್ತ ಸಮಯವೇ? ಇಂದು ಮಾರುಕಟ್ಟೆಯಲ್ಲಿ ದರ ಇಳಿಕೆ ಕಂಡಿದೆಯೇ? ಹೀಗೆಲ್ಲಾ ಪ್ರಶ್ನೆ ಕಾಡುವುದು ಸಹಜ.
ಚಿನ್ನದ ದರ ವಿವರ ಬೆಂಗಳೂರಿನಲ್ಲಿ ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆಗಳಿಲ್ಲ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,350 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,33,500 ರೂಪಾಯಿ ಇದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,300 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,73,000 ರೂಪಾಯಿ ನಿಗದಿಯಾಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43.750 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,37,300 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,700 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,77,000 ರೂಪಾಯಿ ಇದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,500 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,55,000 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,600 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,96,000 ರೂಪಾಯಿ ಇದೆ.
ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,280 ರೂಪಾಯಿ ಹಾಗೂ 100 ಗ್ರಾಮ ಚಿನ್ನದ ದರ 4,52,800 ರೂಪಾಯಿ ಇದೆ. ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಇಂದು ಚಿನ್ನದ ದರ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಹಾಗಾಗಿ ಚಿನ್ನಾಭರಣ ಪ್ರಿಯರು ಚಿನ್ನ ಖರೀದಿಸುವ ಕುರಿತಾಗಿ ಯೋಚಿಸಬಹುದು.
ಬೆಳ್ಳಿ ದರ ವಿವರ ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಕೊಂಚ ಇಳಿಕೆ ಕಂಡಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ 300 ರೂಪಾಯಿ ಇಳಿಕೆಯಾಗಿದೆ. ಆ ಬಳಿಕ 67,100 ರೂಪಾಯಿ ನಿಗದಿ ಮಾಡಲಾಗಿದೆ. ಚೆನ್ನೈನಲ್ಲಿ ಚಿನ್ನದ ಇಳಿಕೆ ಕಂಡಿದ್ದು, ಕೆಜಿ ಬೆಳ್ಳಿಗೆ 68,200 ರೂಪಾಯಿ ಇದೆ.
ದೆಹಲಿಯಲ್ಲಿ ಕೆಜಿ ಬೆಳ್ಳಿ ಬೆಲೆಯಲ್ಲಿ 300 ರೂಪಾಯಿ ಇಳಿಕೆಯಾಗಿದೆ. ಆ ಬಳಿಕ 63,300 ರೂಪಾಯಿ ನಿಗದಿಯಾಗಿದೆ. ಮುಂಬೈನಲ್ಲಿಯೂ ಸಹ ದರ ಇಳಿಕೆ ಆಗಿದ್ದು 300 ರೂಪಾಯಿ ಇಳಿಕೆ ಬಳಿಕ ಕೆಜಿ ಬೆಳ್ಳಿ ಬೆಲೆ 63,300 ರೂಪಾಯಿ ಆಗಿದೆ. ಒಟ್ಟಾರೆ ಕೆಲವು ನಗರಗಳಲ್ಲಿ ಚಿನ್ನದ ದರ ಕೊಂಚ ಇಳಿಕೆ ಕಂಡಿದೆ.
ಇದನ್ನೂ ಓದಿ: Gold Rate Today: ಗ್ರಾಹಕರಿಗೆ ಗುಡ್ ನ್ಯೂಸ್; ಸತತ ನಾಲ್ಕು ದಿನಗಳಿಂದ ಇಳಿಕೆಯತ್ತ ಸಾಗಿದ ಚಿನ್ನದ ದರ!
Gold Rate Today: ಬಂಗಾರ ಪ್ರಿಯರಿಗೆ ಸಂತೋಷದ ವಿಚಾರ; ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ