Pay Your Contact: ಕೊಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರು ಮೊಬೈಲ್​ ನಂಬರ್ ಮೂಲಕವೇ ಹಣ ಪಾವತಿಸಬಹುದು

ಕೊಟಕ್ ಮಹೀಂದ್ರಾ ಬ್ಯಾಂಕ್​ನಿಂದ ಪೇ ಯುವರ್ ಕಾಂಟ್ಯಾಕ್ಟ್ ಎಂಬ ಫೀಚರ್ ಅನ್ನು ತನ್ನ ಮೊಬೈಲ್ ಬ್ಯಾಂಕಿಂಗ್ ಆ್ಯಪ್​ನಲ್ಲಿ ಪರಿಚಯಿಸಲಾಗಿದೆ. ಈ ಮೂಲಕ ಗ್ರಾಹಕರು ತಮ್ಮ ಕಾಂಟ್ಯಾಕ್ಟ್​ಗಳಿಗೆ ಹಣ ಕಳುಹಿಸಬಹುದು, ಪಾವತಿ ಸಹ ಮಾಡಬಹುದು. ಕೇವಲ ಮೊಬೈಲ್ ನಂಬರ್ ನಮೂದಿಸಿದರೆ ಸಾಕು.

Pay Your Contact: ಕೊಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರು ಮೊಬೈಲ್​ ನಂಬರ್ ಮೂಲಕವೇ ಹಣ ಪಾವತಿಸಬಹುದು
ಕೊಟಕ್ ಮಹೀಂದ್ರಾ ಬ್ಯಾಂಕ್ ಈ ಬ್ಯಾಂಕ್​ನಿಂದ ಕೊಟಕ್ ಜೂನಿಯರ್ ಅಕೌಂಟ್​ಗೆ ವಾರ್ಷಿಕ ಶೇಕಡಾ 4ರ ವರೆಗಿನ ಬಡ್ಡಿಯನ್ನು ನೀಡುತ್ತದೆ. ಕೊಟಕ್ ಜೂನಿಯರ್ ಖಾತೆಯು ಮಗುವಿನ ಭವಿಷ್ಯಕ್ಕಾಗಿ ರೆಕರಿಂಗ್ ಡೆಪಾಸಿಟ್​ ಮತ್ತು ಎಸ್‌ಐಪಿ ರೂಪದಲ್ಲಿ ಸುಲಭ ಹೂಡಿಕೆಗೆ ಆಯ್ಕೆಗಳನ್ನು ಹೊಂದಿದೆ. ರೆಕರಿಂಗ್ ಡೆಪಾಸಿಟ್ ಅಥವಾ SIP ಅನ್ನು ಕನಿಷ್ಠ ಮೂರು ವರ್ಷಗಳ ಅವಧಿಗೆ ಆರಿಸಿಕೊಂಡರೆ ಖಾತೆದಾರರು ತಮ್ಮ ಮಗುವಿನ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕಾಗಿಲ್ಲ. 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಪೋಷಕರ ಕೋರಿಕೆಯ ಮೇರೆಗೆ ಡೆಬಿಟ್ ಕಾರ್ಡ್‌ಗಳನ್ನು ನೀಡಲಾಗುವುದು ಮತ್ತು ಅವರ ದೈನಂದಿನ ವಿಥ್​ಡ್ರಾ ಮಿತಿಯು ರೂ. 5,000 ಮಾತ್ರ.
Follow us
TV9 Web
| Updated By: Srinivas Mata

Updated on: Jun 24, 2021 | 12:25 PM

ಕೊಟಕ್ ಮಹೀಂದ್ರಾ ಬ್ಯಾಂಕ್​ನಿಂದ ಪೇ ಯುವರ್ ಕಾಂಟ್ಯಾಕ್ಟ್ ಎಂಬ ಫೀಚರ್ ಅನ್ನು ತನ್ನ ಮೊಬೈಲ್ ಬ್ಯಾಂಕಿಂಗ್ ಆ್ಯಪ್​ನಲ್ಲಿ ಪರಿಚಯಿಸಲಾಗಿದೆ. ಈ ಮೂಲಕವಾಗಿ ಗ್ರಾಹಕರು ತಮ್ಮ ಕಾಂಟ್ಯಾಕ್ಟ್​ಗಳಿಗೆ ಹಣ ಕಳುಹಿಸಬಹುದು ಮತ್ತು ಪಾವತಿ ಸಹ ಮಾಡಬಹುದು. ಕೇವಲ ಮೊಬೈಲ್ ನಂಬರ್ ಹಾಕಿದರೆ ಸಾಕು. ಈ ವಹಿವಾಟನ್ನು ಮೊಬೈಲ್​ ಸಂಖ್ಯೆಯಿಂದ ಮಾತ್ರ ಮಾಡುವುದಕ್ಕೆ ಸಾಧ್ಯ. ಬ್ಯಾಂಕ್​ನಲ್ಲಿನ ಖಾತೆ ಸಂಖ್ಯೆ, ಐಎಫ್​ಎಸ್​ಸಿ ಕೋಡ್ ಅಥವಾ ಯುಪಿಐ ಐ.ಡಿ. ಇಂಥದ್ದು ಯಾವುದರ ಅಗತ್ಯವೂ ಇಲ್ಲದೆ ಹಣವನ್ನು ಕಳುಹಿಸಬಹುದು ಹಾಗೂ ಪಾವತಿಯನ್ನು ಮಾಡಬಹುದು. ಗ್ರಾಹಕರಾದವರು ತಮ್ಮ ಕಾಂಟ್ಯಾಕ್ಟ್​ನಲ್ಲಿ ಸೇವ್ ಆಗಿರುವ ಮೊಬೈಲ್ ಫೋನ್ ಸಂಖ್ಯೆಯನ್ನು ಆರಿಸಿಕೊಂಡರೆ ಸಾಕು ಅಥವಾ ಆ ಸಂಖ್ಯೆಯನ್ನು ನಮೂದಿಸಿದರೂ ಆಯಿತು. ಇನ್ನು ಯುಪಿಐ ಆ್ಯಪ್ ಅಥವಾ ಬೆನಿಫಿಷಿಯರಿ (ಫಲಾನುಭವಿ) ಖಾತೆಗೆ ಜೋಡಣೆಯಾದ ಕೆಎಂಬಿಎಲ್ ಖಾತೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಪೇ ಯುವರ್ ಕಾಂಟ್ಯಾಕ್ಟ್​ ಫೀಚರ್ ಎಂಬುದು ಎಲ್ಲ ಪೇಮೆಂಟ್ ಆ್ಯಪ್​ಗಳಲ್ಲೂ ಕಾರ್ಯ ನಿರ್ವಹಿಸುತ್ತದೆ. ಆಂಡ್ರಾಯಿಡ್ ಹಾಗೂ ಐಒಎಸ್ ಎರಡರಲ್ಲೂ ಲಭ್ಯವಿದೆ.

ಕೊಟಕ್ ಮಹೀಂದ್ರಾ ಬ್ಯಾಂಕ್ ಮುಖ್ಯ ಡಿಜಿಟಲ್ ಅಧಿಕಾರಿ ಮತ್ತು ಅಧ್ಯಕ್ಷ ದೀಪಕ್ ಶರ್ಮಾ ಮಾತನಾಡಿ, ಕೊಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರು ಈಗ ಸ್ನೇಹಿತರಿಗೆ, ಮನೆಯ ಸಹಾಯಕರಿಗೆ, ನೆರೆಹೊರೆಯ ಮಳಿಗೆಗಳಿಗೆ ಮುಂತಾದವರಿಗೆ ಮೊಬೈಲ್ ನಂಬರ್ ಮೂಲಕವೇ ಪೇಮೆಂಟ್ ಮಾಡಬಹುದು. ಇನ್ನೂ ಮುಂದುವರಿದು ಯಾವುದೇ ಯುಪಿಐ ಐ.ಡಿ.ಗೆ. ಕೊಟಕ್ ಮಹೀಂದ್ರಾ ಬ್ಯಾಂಕ್ ಆ್ಯಪ್ ಮೂಲಕ ಸುರಕ್ಷಿತವಾಗಿ ಪಾವತಿ ಮಾಡಬಹುದು. ಗ್ರಾಹಕರು ಈಗ ಹಲವು ಪೇಮೆಂಟ್​ ಆ್ಯಪ್​ಗಳನ್ನು ತಮ್ಮ ಪೋನ್​ಗೆ ಡೌನ್​ಲೋಡ್ ಮಾಡಿಕೊಳ್ಳುವ ಬಗ್ಗೆ ಯೋಚಿಸುವ ಅಗತ್ಯ ಇಲ್ಲ ಎಂದಿದ್ದಾರೆ.

ಭಾರತೀಯ ಮಾರುಕಟ್ಟೆಯಲ್ಲಿ ಯುಪಿಐ ಬಲು ಜನಪ್ರಿಯವಾಗಿದೆ. ಯಾರೆಲ್ಲ ಭಾರತೀಯರ ಬಳಿ ಬ್ಯಾಂಕ್​ ಖಾತೆ ಇದೆಯೋ ಅವರೆಲ್ಲರ ಹತ್ತಿರವೂ ಯುಪಿಐ ಐ.ಡಿ. ಇದೆ. ಪೇ ಯುವರ್ ಕಾಂಟ್ಯಾಕ್ಟ್ ಮೂಲಕವಾಗಿ ನಮ್ಮ ಗ್ರಾಹಕರು ಯಾವುದೇ ಪೇಮೆಂಟ್ ಅಪ್ಲಿಕೇಷನ್​ಗಳಲ್ಲಿ ಮತ್ತು ಯಾವುದೇ ಖಾತೆಗೆ ಜೋಡಣೆಯಾದ ಯುಪಿಐಗೆ ಬೆನಿಫಿಷಿಯರಿ (ಫಲಾನುಭವಿ)ಯನ್ನು ಗುರುತಿಸಲು ಅನುಕೂಲ ಆಗುವಂತೆ ಮೊಬೈಲ್ ನಂಬರ್ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Tata Vehicles finance: ಕೊಟಕ್ ಮಹೀಂದ್ರಾ ಪ್ರೈಮ್​ನಿಂದ ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನದ ಮೇಲೆ ಸಾಲ ಸೌಲಭ್ಯ

(Kotak Mahindra Bank introduced pay your contact feature in mobile banking app)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ