Tata Vehicles finance: ಕೊಟಕ್ ಮಹೀಂದ್ರಾ ಪ್ರೈಮ್​ನಿಂದ ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನದ ಮೇಲೆ ಸಾಲ ಸೌಲಭ್ಯ

ಕೊಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್ ಜತೆಗೂಡಿ ಟಾಟಾ ಮೋಟಾರ್ಸ್​ನಿಂದ ಪ್ರಯಾಣಿಕರ ವಾಹನಗಳಿಗಾಗಿ ಮೂರು ಹಣಕಾಸು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿ ನೀಡಲಾಗಿದೆ.

Tata Vehicles finance: ಕೊಟಕ್ ಮಹೀಂದ್ರಾ ಪ್ರೈಮ್​ನಿಂದ ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನದ ಮೇಲೆ ಸಾಲ ಸೌಲಭ್ಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 23, 2021 | 7:45 PM

ಕೊಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್ ಜತೆಗೂಡಿ ಟಾಟಾ ಮೋಟಾರ್ಸ್​ನಿಂದ ಪ್ರಯಾಣಿಕರ ವಾಹನಗಳಿಗಾಗಿ ಮೂರು ಹಣಕಾಸು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ರೆಡ್​ ಕಾರ್ಪೆಟ್, ಪ್ರೈಮ್ ವಿಶ್ವಾಸ್ ಹಾಗೂ ನಗರ ಹಾಗೂ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ (ವೇತನದಾರರು, ಸ್ವ- ಉದ್ಯೋಗಿಗಳು ಮತ್ತು ಯಾವುದೇ ಆದಾಯದ ದಾಖಲೆ ಅಗತ್ಯ ಇಲ್ಲ) ಕಡಿಮೆ ಇಎಂಐ ಯೋಜನೆ ಕೂಡ ಇದೆ. ಜತೆಗೆ ಮಾಡೆಲ್​ಗಳ ಅಧಾರದಲ್ಲಿ ಆಯ್ಕೆಗೆ ತಕ್ಕಂತೆ ಅವಧಿ ಇದೆ. ಕೊರೊನಾ ಸಂದರ್ಭದಲ್ಲಿ ಗ್ರಾಹಕರ ಮೇಲೆ ಆರ್ಥಿಕ ಹೊರೆ ಬೀಳಬಾರದು ಎಂಬ ಕಾರಣಕ್ಕೆ ಈ ಯೋಜನೆ ರೂಪಿಸಲಾಗಿದೆ.

ರೆಡ್ ಕಾರ್ಪೆಟ್ ಯೋಜನೆ ಯಾರಿಗೆ ಆದಾಯ ಪ್ರೂಫ್ ಇರುತ್ತದೋ ಅಂಥವರಿಗಾಗಿ ಇರುವಂಥ ಯೋಜನೆ ಇದು. ಆನ್​ಲೈನ್ ರೋಡ್ ದರದ ಶೇ 90ರಷ್ಟು ಮೊತ್ತದ ತನಕ ಹಣಕಾಸು ಸೌಲಭ್ಯ ಸಿಗುತ್ತದೆ. ಸಾಲ ಮರುಪಾವತಿ 7 ವರ್ಷದ ತನಕ ಇದೆ. 11 ಲಕ್ಷ ರೂಪಾತಿ ತನಕದ ಸಾಲಕ್ಕೆ ಫಿಕ್ಸೆಡ್ ಆಬ್ಲಿಗೇಷನ್ ಟು ಇನ್​ಕಮ್ ರೇಷಿಯೋ (FOIR) ಇಲ್ಲ. ಸಾಲದ ಭಾಗಶಃ ಮರುಪಾವತಿ ಮತ್ತು ಪೂರ್ವ ಪಾವತಿಗೆ ಆಕರ್ಷಕ ಆಫರ್​ಗಳಿವೆ.

ಪ್ರೈಮ್ ವಿಶ್ವಾಸ್ ಪ್ರಾಡಕ್ಟ್ ಈ ಯೋಜನೆ ಇರುವುದು ಯಾವುದೇ ಆದಾಯದ ಪ್ರೂಫ್ ಇಲ್ಲದವರಿಗಾಗಿ. ಎಕ್ಸ್​ ಶೋರೂಮ್ ಬೆಲೆಯ ಶೇ 90ರ ತನಕ ಸಾಲ ದೊರೆಯುತ್ತದೆ. ಸಾಲ ಮರುಪಾವತಿ ಅವಧಿ 5 ವರ್ಷಗಳ ತನಕ ಇದೆ. ಕೃಷಿ ಭೂಮಿ ಅಥವಾ ಆಸ್ತಿ ಮಾಲೀಕತ್ವ ಮಾನದಂಡದ ಆಧಾರದಲ್ಲಿ ನೀಡಲಾಗುತ್ತದೆ.

ಕಡಿಮೆ ಇಎಂಐ ಯೋಜನೆ ಸ್ವ ಉದ್ಯೋಗಿಗಳು, ವೇತನದಾರ ಗ್ರಾಹಕರು ಇಬ್ಬರಿಗೂ ಇದು ದೊರೆಯುತ್ತದೆ. ಶೇ 50ರ ತನಕ ಕಡಿಮೆ ಇಎಂಐ- ಮೊದಲ ಮೂರು ತಿಂಗಳು ಹೀಗೆ ಇಎಂಐ ಕಡಿಮೆ ಆಗುವುದರಿಂದ ಆರಂಭದಲ್ಲಿ ಒತ್ತಡ ಕಡಿಮೆ ಆಗುತ್ತದೆ. ಒಂದು ಲಕ್ಷಕ್ಕೆ ರೂ. 999ರಿಂದ ಆರಂಭವಾಗುತ್ತದೆ. ಮೊದಲ ಮೂರು ತಿಂಗಳು ಇದೇ ಮೊತ್ತ ಇರುತ್ತದೆ. ಆನ್​ ರೋಡ್​ ದರದ ಶೇ 80ರ ತನಕ ಸಾಲ ಸಿಗುತ್ತದೆ.

ವಿವಿಧ ಹಣಕಾಸು ಯೋಜನೆಯ ಅನುಕೂಲ ಪಡೆಯುವುದಕ್ಕೆ ಗ್ರಾಹಕರು ತಮ್ಮ ಹತ್ತಿರದ ಟಾಟಾ ಮೋಟಾರ್ಸ್ ಡೀಲರ್ ಅಥವಾ ಕೊಟಕ್ ಮಹೀಂದ್ರಾ ಪ್ರೈಮ್ ಶಾಖೆ ಭೇಟಿ ನೀಡಬೇಕು ಅಥವಾ https://cars.tatamotors.com/ ಇಲ್ಲಿಗೆ ಭೇಟಿ ನೀಡಬೇಕು. ಕ್ಲಿಕ್ ಟು ಡ್ರೈವ್, ಟಾಟಾ ಮೋಟಾರ್ಸ್ ಎಂಡ್ ಟು ಎಂಡ್ ಆನ್​ಲೈನ್ ಪ್ಲಾಟ್​ಫಾರ್ಮ್​ನಲ್ಲಿ ಗ್ರಾಹಕರು ಟೆಸ್ಟ್​ ಡ್ರೈವ್ ಮನವಿ, ಬುಕ್ಕಿಂಗ್ ಮಾಡಬಹುದು ಮತ್ತು ತಮ್ಮ ಆದ್ಯತೆಯ ಹಣಕಾಸು ಸೌಲಭ್ಯವನ್ನು ಸಹ ಆರಿಸಬಹುದು.

ಇದನ್ನೂ ಓದಿ: Tata passenger vehicles: ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನಗಳ ಬೆಲೆ ಮೇ 8ರಿಂದ ಏರಿಕೆ

(Tata Motors collaborates with Kotak Mahindra Prime to offer three financing solutions for its passenger vehicle customers. Here is the complete details)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ