AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Warren Buffett: ವಾರೆನ್ ಬಫೆಟ್​ರಿಂದ 30 ಸಾವಿರ ಕೋಟಿ ರೂ. ದಾನ; ಈ ತನಕ ಪೂರ್ತಿಯಾಗಿದ್ದು ಕೊಟ್ಟ ಮಾತಿನ ಅರ್ಧದಷ್ಟೇ

ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್​ನ ಟ್ರಸ್ಟಿ ಜವಾಬ್ದಾರಿಗೆ ರಾಜೀನಾಮೆ ಘೋಷಿಸುವ ಸಂದರ್ಭದಲ್ಲೇ ವಾರೆನ್ ಬಫೆಟ್ 410 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಬರ್ಕ್​ಶೈರ್ ಹಾಥ್​ವೇ ಷೇರುಗಳನ್ನು ಐದು ಫೌಂಡೇಷನ್​ಗಳಿಗೆ ದೇಣಿಗೆ ನೀಡುವುದಾಗಿ ಹೇಳಿದ್ದಾರೆ

Warren Buffett: ವಾರೆನ್ ಬಫೆಟ್​ರಿಂದ 30 ಸಾವಿರ ಕೋಟಿ ರೂ. ದಾನ; ಈ ತನಕ ಪೂರ್ತಿಯಾಗಿದ್ದು ಕೊಟ್ಟ ಮಾತಿನ ಅರ್ಧದಷ್ಟೇ
ವಾರೆನ್ ಬಫೆಟ್ (ಸಂಗ್ರಹ ಚಿತ್ರ)
TV9 Web
| Edited By: |

Updated on:Jun 23, 2021 | 11:41 PM

Share

ಜಗದ್ವಿಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ಮತ್ತೊಂದು ದೇಣಿಗೆಯ ಘೋಷಣೆ ಮಾಡಿದ್ದಾರೆ. 410 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಬರ್ಕ್​ಶೈರ್ ಹಾಥ್​ವೇ ಷೇರುಗಳನ್ನು ಐದು ಫೌಂಡೇಷನ್​ಗಳಿಗೆ ದೇಣಿಗೆ ನೀಡುವುದಾಗಿ ಜೂನ್ 23ನೇ ತಾರೀಕಿನ ಬುಧವಾರದಂದು ವಾರೆನ್ ಬಫೆಟ್ ಘೋಷಣೆ ಮಾಡಿದ್ದಾರೆ. ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್​ನ ಟ್ರಸ್ಟಿ ಜವಾಬ್ದಾರಿಗೆ ರಾಜೀನಾಮೆ ಘೋಷಿಸುವ ಸಂದರ್ಭದಲ್ಲೇ ಈ ವಿಷಯವನ್ನೂ ಅವರು ತಿಳಿಸಿದ್ದಾರೆ. ಇವತ್ತಿಗೆ 410 ಕೋಟಿ ಡಾಲರ್ ಮೌಲ್ಯದ ಷೇರು ಅಂದರೆ, ಭಾರತದ ರೂಪಾಯಿ ಲೆಕ್ಕದಲ್ಲಿ 30.4 ಸಾವಿರ ಕೋಟಿಗೂ ಹೆಚ್ಚಿನ ಮೊತ್ತವಾಗುತ್ತದೆ.

ಈ ಬಗ್ಗೆ ಮಾತನಾಡಿರುವ ವಾರೆನ್ ಬಫೆಟ್, “ವರ್ಷಗಳಿಂದ ನಾನು ಟ್ರಸ್ಟಿ ಆಗಿದ್ದೇನೆ. ನಾನು ಹಣ ನೀಡುವ ಬಿಲ್​ ಮತ್ತು ಗೇಟ್ಸ್​ ಫೌಂಡೇಷನ್​ನಲ್ಲಿ ನಿಷ್ಕ್ರಿಯ ಟ್ರಸ್ಟಿ ಆಗಿದ್ದೇನೆ. ಹೇಗೆ ಬರ್ಕ್‌ಶೈರ್ ಹೊರತುಪಡಿಸಿ ಎಲ್ಲಾ ಕಾರ್ಪೊರೇಟ್ ಮಂಡಳಿಗಳಲ್ಲಿ ಮಾಡಿದಂತೆಯೇ ಈಗ ಈ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ,” ಎಂದು ಬಫೆಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2006ನೇ ಇಸವಿಯಲ್ಲಿ ತಮ್ಮ ಪಾಲಿನ ಎಲ್ಲ ಬರ್ಕ್​ಶೈರ್ ಷೇರುಗಳನ್ನು ದಾನ ಮಾಡುವುದಾಗಿ ಬಫೆಟ್ ಘೋಷಣೆ ಮಾಡಿದ್ದರು. ಪ್ರತಿ ವರ್ಷ ಬಿಲ್ ಮತ್ತ ಮೆಲಿಂಡಾ ಗೇಟ್ಸ್ ಫೌಂಡೇಷನ್, ಸೂಸಾನ್ ಥಾಮ್ಸನ್ ಬಫೆಟ್ ಫೌಂಡೇಷನ್, ಶೆರ್​ವುಡ್​ ಫೌಂಡೇಷನ್, ಹೊವಾರ್ಡ್ ಜಿ. ಬಫೆಟ್ ಫೌಂಡೇಷನ್ ಮತ್ತು NoVo ಫೌಂಡೇಷನ್​ಗೆ ಉಡುಗೊರೆಯಾಗಿ ನೀಡುತ್ತೇನೆ ಎಂದು ಹೇಳಿದ್ದರು. ಅವರು ಆಗ ಹೇಳಿದ್ದರು ಒಟ್ಟು ಲೆಕ್ಕದ ಅರ್ಧದಷ್ಟನನ್ನು ತಲುಪಿದಂತಾಗಿದೆ.

“ಈ ದಿನ ನ್ನ ಪಾಲಿನ ಮೈಲುಗಲ್ಲು,” ಎಂದು ಬಫೆಟ್ ಹೇಳಿದ್ದಾರೆ. “2006ರಲ್ಲಿ ನನ್ನ ನಿವ್ವಳ ಮೌಲ್ಯದ ಶೇ 99ರಷ್ಟನ್ನು, ಅಂದರೆ ಬಕ್​ಶೈರ್ ಷೇರಿನ ಎಲ್ಲವನ್ನೂ ದಾನದ ಉದ್ದೇಶಕ್ಕೆ ವಿತರಣೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ್ದೆ. ಈಗಿನ 4.1 ಬಿಲಿಯನ್ ಅಮೆರಿಕನ್ ಡಾಲರ್​ ವಿತರಣೆಯೊಂದಿಗೆ ನಾನು ಅರ್ಧ ದಾರಿಯಲ್ಲಿ ಇದ್ದೇನೆ,” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Jamshetji Tata: ಶತಮಾನದ ಟಾಪ್ 50 ದಾನಿಗಳಲ್ಲಿ ಜಮ್ಷೆಡ್​ ಜೀ ಟಾಟಾ ನಂಬರ್ 1; ನೀಡಿದ ದೇಣಿಗೆ 10,200 ಕೋಟಿ ಯುಎಸ್​ಡಿ

(Veteran Warren Buffett announced 4.1 billion USD donation to 5 foundations also resignation for Bill And Melinda foundation as trustee on June 23rd, Wednesday)

Published On - 11:24 pm, Wed, 23 June 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ