End of Work From Home: ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆತರಲು ಕಂಪೆನಿಗಳಿಂದ ನಾನಾ ಸವಲತ್ತು, ಸೌಕರ್ಯ
ಉದ್ಯೋಗಿಗಳನ್ನು ಮರಳಿ ಕಚೇರಿಗಳಿಗೆ ಕರೆತರುವ ಉದ್ದೇಶದಿಂದ ವಿವಿಧ ಸವಲತ್ತು, ಸೌಕರ್ಯಗಳನ್ನು ಕಂಪೆನಿಗಳಿಂದ ನೀಡಲಾಗುತ್ತಿದೆ.
ಇಂಥದ್ದೊಂದು ಸನ್ನಿವೇಶವನ್ನು ಊಹಿಸಿಕೊಳ್ಳಿ, ಅಮೆರಿಕ ಮೂಲದ ಜಾಗತಿಕ ರಿಯಲ್ ಎಸ್ಟೇಟ್ ಡೇಟಾ ಕಂಪೆನಿಯು Random ಆಗಿ ಆಯ್ಕೆಯಾದ, ಲಸಿಕೆ ಹಾಕಿಸಿಕೊಂಡ ತಲಾ ಒಬ್ಬ ಉದ್ಯೋಗಿಗೆ ಕಚೇರಿಗೆ ಹಿಂತಿರುಗುತ್ತಿದ್ದಂತೆ ನಿತ್ಯವೂ ಸಾವಿರಾರು ಡಾಲರ್‌ಗಳನ್ನು ನೀಡುತ್ತಿದೆ. ಆಫರ್‌ನ ಭಾಗವಾಗಿ ಕಂಪೆನಿ ಮಾಲೀಕತ್ವದ ಖಾಸಗಿ ಜೆಟ್‌ನಲ್ಲಿ ಅದ್ಭುತ ಸ್ಥಳಗಳಿಗೆ ರಜಾದಿನಗಳ ಪ್ರವಾಸವನ್ನೂ ಒಳಗೊಂಡಿದೆ. ಗೋಲ್ಡ್‌ಮನ್ ಸ್ಯಾಕ್ಸ್‌ನ ಪ್ರಧಾನ ಕಚೇರಿಯಲ್ಲಿ ಕಚೇರಿಯಿಂದಲೇ ಕೆಲಸ ಮಾಡುವವರಿಗೆ ಬೆಳಗಿನ ಉಪಾಹಾರ, ಊಟ ಮತ್ತು ಐಸ್ ಕ್ರೀಮ್ ಇದೆ. ಬಿಜಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ವರದಿ ಪ್ರಕಾರ, ಅನೇಕರು ಉದ್ಯೋಗ ಕೇಂದ್ರಗಳಿಗೆ ಹಿಂತಿರುಗಿ ಮತ್ತು ತಮ್ಮ ಮೇಜಿನ ಬಳಿ ಹೆಚ್ಚು ಹೊತ್ತು ಕೆಲಸ ಮಾಡುವ ಬದಲಿಗೆ ತ್ಯಜಿಸುತ್ತಾರೆ ಎಂದು ಸಮೀಕ್ಷೆಗಳಿಂದ ತಿಳಿದು ಬಂದ ನಂತರ, ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆತರಲು ಈ ಸವಲತ್ತುಗಳನ್ನು ನೀಡಲಾಗಿದೆ.
ಪ್ರೋತ್ಸಾಹಧನ ಮಾತ್ರ ಉತ್ತೇಜಿಸುವ ಅಂಶವಲ್ಲ ಅಮೆರಿಕದಲ್ಲಿ ಇರುವ ಕಂಪೆನಿಗಳಂತೆಯೇ ಭಾರತದ ಕಂಪೆನಿಗಳು ಕೂಡ ಕಚೇರಿಗೆ ಹಿಂತಿರುಗಿದವರಿಗೆ ಉಡುಗೊರೆಗಳು ಮತ್ತು ಉಚಿತ ಆಫರ್ಗಳೊಂದಿಗೆ ತೆರೆಯುತ್ತಿದೆ. ಮತ್ತು ಅಮೆರಿಕದಂತೆಯೇ ಭಾರತೀಯ ಕಂಪೆನಿಗಳಿಗೂ ಉದ್ಯೋಗಿಗಳನ್ನು ಉಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಇತ್ತೀಚೆಗೆ ಐಟಿ ಕಂಪೆನಿಗಳು ದುಬಾರಿಯಾದ ಕಾರುಗಳು ಅಥವಾ ವಿಲಕ್ಷಣ ಸ್ಥಳಗಳಲ್ಲಿ ರಜಾದಿನಗಳಂತಹ ಆಕರ್ಷಕ ಸವಲತ್ತುಗಳನ್ನು ನೀಡುವ ಜೊತೆಗೆ ಎರಡು ಪಟ್ಟು ಸಂಬಳದಲ್ಲಿ ಜನರನ್ನು ನೇಮಿಸಿಕೊಂಡಿದೆ. ಆದರೆ ಉದ್ಯೋಗಿಗಳು ತಮ್ಮ ಕೆಲಸಗಳಿಗೆ ಹಿಂತಿರುಗಲು ಪ್ರೋತ್ಸಾಹಧನವೊಂದೇ ಆಕರ್ಷಕವಾಗಿ ಉಳಿದಿಲ್ಲ.
ಸ್ಥಳಾಂತರ ಭತ್ಯೆ Aon ಸಮೀಕ್ಷೆಯ ಪ್ರಕಾರ, ಕೆಲವು ಕಂಪೆನಿಗಳು ಕೊರೊನಾ ಸಮಯದಲ್ಲಿ ಬೇರೆ ನಗರಕ್ಕೆ ಸ್ಥಳಾಂತರಗೊಂಡ ಉದ್ಯೋಗಿಗಳಿಗೆ ಸಾರಿಗೆ ಸೌಲಭ್ಯಗಳು, ಸ್ಥಳಾಂತರ ಭತ್ಯೆಗಳಂತಹ ಸವಲತ್ತುಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಹೈದರಾಬಾದ್ ಮೂಲದ ಹೆಡ್ಜ್ ಫಂಡ್ ಕಂಪೆನಿಯು ತನ್ನ ಉದ್ಯೋಗಿಗಳಿಗೆ ಒಂದು ಬಾರಿ ಆಕರ್ಷಕ ಸ್ಥಳಾಂತರ ಭತ್ಯೆಯ ಪ್ರೋತ್ಸಾಹವನ್ನು ಅಕ್ಟೋಬರ್ನಿಂದ ಮತ್ತೆ ಕಚೇರಿಗೆ ಬರಲು ಭರವಸೆ ನೀಡಿದೆ. ದೂರದಿಂದ ಕೆಲಸ ಮಾಡುವುದು (Remote Working) ಇನ್ನು ಮುಂದೆ ಆಯ್ಕೆಯಾಗಿರಲ್ಲ ಎಂದು ಹೇಳಿದೆ. ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆಸಿಕೊಳ್ಳುವಂತೆ ತೆಲಂಗಾಣ ಸರ್ಕಾರವು ಐಟಿ ಕಂಪೆನಿಗಳಿಗೆ ಸೂಚನೆ ನೀಡುತ್ತಿದ್ದು, ಬೇಡಿಕೆಯನ್ನು ಹೆಚ್ಚಿಸಲು ಇದು ಕಾರಣವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಎಲ್ಲ ಉದ್ಯೋಗಿಗಳಿಗೆ ವಿರಾಮ ಘೋಷಣೆ ಇನ್ಫೋಸಿಸ್, ಟಿಸಿಎಸ್ ಮತ್ತು ವಿಪ್ರೋದಂತಹ ದೊಡ್ಡ ಟೆಕ್ ಕಂಪೆನಿಗಳು ಒಂದೋ ಪ್ರಾರಂಭವಾಗಿವೆ ಅಥವಾ ಉದ್ಯೋಗಿಗಳನ್ನು ಹಂತಹಂತವಾದ ರೀತಿಯಲ್ಲಿ ಕಚೇರಿಗೆ ಕರೆಸಿಕೊಳ್ಳುವ ಪ್ರಕ್ರಿಯೆಯಲ್ಲಿವೆ. ಮೀಶೋ ಎಂಬ ಸಾಮಾಜಿಕ ವಾಣಿಜ್ಯ ನವೋದ್ಯಮ (ಸ್ಟಾರ್ಟ್ ಅಪ್) ಇತ್ತೀಚೆಗೆ ನವೆಂಬರ್ 4 ಮತ್ತು 14ರ ನಡುವೆ ದೀಪಾವಳಿಯ ನಂತರ ಎಲ್ಲ ಉದ್ಯೋಗಿಗಳಿಗೆ ವಿರಾಮವನ್ನು ಘೋಷಿಸಿದೆ. ಇದರಿಂದಾಗಿ ಅವರು ಬಿಡುವಿಲ್ಲದ ಹಬ್ಬದ ಮಾರಾಟದ ಸೀಸನ್ ನಂತರ ಕೆಲಸದಿಂದ ಸಂಪೂರ್ಣವಾಗಿ ಹೊರಗೆ ಉಳಿಯಬಹುದು. ಆದರೂ ಇತರರು ತಮ್ಮ ಶಕ್ತಿಯನ್ನು ಸುರಕ್ಷಿತ ಮತ್ತು ನೈರ್ಮಲ್ಯದ ಕೆಲಸದ ವಾತಾವರಣವನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸುತ್ತಿದ್ದಾರೆ. ನಿರ್ದಿಷ್ಟ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಉದ್ಯೋಗಿಗಳ ಮಾನಸಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತಾರೆ.
(Perks And Benefits Offering To Employees By Companies To Bring Back Employees To Office)
Published On - 7:53 pm, Mon, 6 September 21