Cash Withdrawal: ಎಸ್ಬಿಐ, ಪಿಎನ್ಬಿ, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ ನಗದು ವಿಥ್ಡ್ರಾ ಮಿತಿ ಇಂತಿವೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಗದು ವಿಥ್ಡ್ರಾ ನಿಯಮಾವಳಿಗಳ ವಿವರ ಇಲ್ಲಿದೆ.
Updated on: Aug 21, 2021 | 4:54 PM

How To Exchange Damaged Notes Withdraw From ATM Here Is The Step By Step Details

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ಈಗ ಹೋಮ್ ಬ್ರ್ಯಾಂಚ್ ಹೊರತಾದ ಕಡೆ ದಿನಕ್ಕೆ 25 ಸಾವಿರ ರೂಪಾಯಿ ಅನ್ನು ಸ್ವಂತ ಬಳಕೆಗಾಗಿ ಸೇವಿಂಗ್ಸ್ ಪಾಸ್ ಬುಕ್ ಜತೆಗೆ ವಿಥ್ಡ್ರಾ ಫಾರ್ಮ್ ಇದ್ದಲ್ಲಿ ಡ್ರಾ ಮಾಡಬಹುದು. ಇನ್ನು ಸ್ವಂತ ಬಳಕೆಗೆ ಚೆಕ್ ಬಳಸಿ ಒಂದು ದಿನಕ್ಕೆ ನಗದು ವಿಥ್ಡ್ರಾ ಮಿತಿ 1 ಲಕ್ಷ ಇದೆ. ಅದೇ ರೀತಿ ಮೂರನೇ ವ್ಯಕ್ತಿಯ- ಥರ್ಡ್ ಪಾರ್ಟಿಯಾದವರು (ಚೆಕ್ ಮೂಲಕ ಮಾತ್ರ) ಚೆಕ್ ಬಳಸಿ ನಗದು ವಿಥ್ಡ್ರಾ ಮಾಡುವುದಕ್ಕೆ ಮಿತಿ 50 ಸಾವಿರ ರೂಪಾಯಿ ಇದೆ.

Punjab National Bank Offering No Processing On All Kind Of Loans

ಆಗಸ್ಟ್ 1, 2021ರಿಂದ ಅನ್ವಯ ಆಗುವಂತೆ, ಐಸಿಐಸಿಐ ಬ್ಯಾಂಕ್ನ ಗ್ರಾಹಕರಿಗೆ ಹೋಮ್ ಬ್ರ್ಯಾಂಚ್ನಲ್ಲಿ ಗ್ರಾಹಕರಿಗೆ ತಿಂಗಳಿಗೆ 1 ಲಕ್ಷ ರೂಪಾಯಿ ವಿತ್ಡ್ರಾ ಮಾಡುವುದಕ್ಕೆ ಮಿತಿ ಇದೆ. ಹೋಮ್ ಬ್ರ್ಯಾಂಚ್ ಅಲ್ಲದ ಕಡೆ ಒಂದು ದಿನಕ್ಕೆ 25 ಸಾವಿರ ರೂಪಾಯಿ ತನಕ ವಿಥ್ಡ್ರಾ ಮಾಡುವುದಕ್ಕೆ ಯಾವುದೇ ಶುಲ್ಕ ಇಲ್ಲ. ಥರ್ಡ್ ಪಾರ್ಟಿ ವಹಿವಾಟಿಗೆ ಒಂದು ದಿನಕ್ಕೆ 25 ಸಾವಿರ ರೂಪಾಯಿ ಮಿತಿ ವಿಧಿಸಲಾಗಿದೆ.

ಎಚ್ಡಿಎಫ್ಸಿ ಬ್ಯಾಂಕ್ನ ಅಧಿಕೃತ ವೆಬ್ಸೈಟ್ನಲ್ಲಿ ಹೇಳಿಕೊಂಡಿರುವ ಪ್ರಕಾರ, 12 ಸಾವಿರದಷ್ಟು ಇರುವ ಎಟಿಎಂನಲ್ಲಿ ಯಾವಾಗಲಾದರೂ ಎಲ್ಲಾದರೂ ನಗದು ವಿಥ್ಡ್ರಾ ಮಾಡಬಹುದು. ಎಚ್ಡಿಎಫ್ಸಿ ಬ್ಯಾಂಕ್ ಎಟಿಎಂ ಹೊರತಾದ ಕಡೆಯೂ ಡ್ರಾ ಮಾಡಬಹುದು. ಎಚ್ಡಿಎಫ್ಸಿ ಬ್ಯಾಂಕ್ ಎಟಿಎಂನಲ್ಲಿ ದಿನಕ್ಕೆ 10 ಸಾವಿರ ರೂಪಾಯಿ ತನನಕ ವಿಥ್ಡ್ರಾ ಮಾಡಬಹುದು. 25 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಮೊತ್ತ್ವವನ್ನು ಡೆಬಿಟ್ ಕಾರ್ಡ್ ಬಳಸಿ ವಿಥ್ಡ್ರಾ ಮಾಡಬಹುದು (ಯಾವ ಕಾರ್ಡ್ ಬಳಸುತ್ತೀರಿ ಎಂಬುದರ ಆಧಾರಲ್ಲಿ). ಬ್ಯಾಂಕಿಂಗ್ ಅವಧಿಯಲ್ಲಿ ಯಾವುದೇ ಎಚ್ಡಿಎಫ್ಸಿ ಬ್ಯಾಂಕ್ ಶಾಖೆಗೆ ತೆರಳಿ ಮತ್ತು ವಿಥ್ಡ್ರಾ ಸ್ಲಿಪ್ ಅಥವಾ ಚೆಕ್ ಬಳಸಿ ವಿಥ್ಡ್ರಾ ಮಾಡಬಹುದು. ಡೆಪಾಸಿಟ್ ಸ್ಲಿಪ್ ಭರ್ತಿ ಮಾಡಿ ನಗದು ತುಂಬಬಹುದು. ಎಚ್ಡಿಎಫ್ಸಿ ಬ್ಯಾಂಕ್ನ ಯಾವುದೇ ಶಾಖೆ ಅಥವಾ ಎಟಿಎಂಗಳಲ್ಲಿ ನಗದು ಠೇವಣಿ ಮಾಡಬಹುದು.



















