Updated on:Aug 21, 2021 | 3:08 PM
ಮಲಯಾಳಿಗರಿಗೆ ಓಣಂ ಬಹಳ ಪ್ರಮುಖ ಮತ್ತು ಅತಿದೊಡ್ಡ ಹಬ್ಬವಾಗಿದೆ. ಈ ಹಬ್ಬದಂದು ಹೂವಿನಲ್ಲಿ ರಂಗೋಲಿ ಹಾಕುವುದೇ ವಿಶೇಷತೆ.
ಓಣಂ ಹಬ್ಬದ ದಿನದಂದ ಮನೆಯ ಅಂಗಳದಲ್ಲಿ ಹೂವಿನ ರಂಗೋಲಿ ಹಾಕುವ ಸಂಸ್ಕೃತಿ ಕೇರಳದಲ್ಲಿದೆ.
ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದಲ್ಲಿ ಪ್ರತಿವರ್ಷ ಆಗಸ್ಟ್- ಸೆಪ್ಟೆಂಬರ್ ತಿಂಗಳಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಅದೇ ರೀತಿ ಈ ಬಾರಿ ಇಂದು ಅಂದರೆ ಆಗಸ್ಟ್ 21ಕ್ಕೆ ಓಣಂ ಹಬ್ಬವನ್ನು ಆಚರಿಸಲಾಗುತ್ತಿದೆ.
ಕೇರಳದಲ್ಲಿ ಕೊರೊನಾ ಮೂರನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಹಬ್ಬದ ಸಂಭ್ರಮ ಮೊದಲಿನಂತೆ ಇಲ್ಲ. ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಬೇಕು ಅಂತ ಬಿಡಿಸಿದ ಹೂವಿನ ರಂಗೋಲಿಯಲ್ಲಿ ತಿಳಿಸಲಾಗಿದೆ.
ಓಣಂ ಹಬ್ಬದಲ್ಲಿ ಮಹಿಳೆಯರು ವಿವಿಧ ಬಣ್ಣದ ಹೂವುಗಳನ್ನು ತಂದು, ಮನೆಯ ಮುಂದೆ ಪೂಕಳಂ ಎನ್ನುವ ಸುಂದರ ಹೂವಿನ ರಂಗೋಲಿಯನ್ನು ಹಾಕುತ್ತಾರೆ.
Published On - 3:03 pm, Sat, 21 August 21