ಈ ದಶಕದಲ್ಲಿ ಸರಾಸರಿಯಾಗಿ ಚಿನ್ನದ ದರವು 10 ಗ್ರಾಮ್ಗೆ 3200 ರೂಪಾಯಿ ಇದ್ದದ್ದು 4400 ರೂಪಾಯಿಗೆ ಏರಿತು. ಆ ಮೂಲಕ ಚಿನ್ನದ ಹೂಡಿಕೆದಾರರಿಗೆ ಶೇ 37.50ರಷ್ಟು ರಿಟರ್ನ್ ದೊರೆಯಿತು. ಟ್ಯಾಕ್ಸ್ಗುರು ತಿಳಿಸಿರುವಂತೆ, 1996ನೇ ಇಸವಿಯಲ್ಲಿ 10 ಗ್ರಾಮ್ ಚಿನ್ನ 5160 ಮುಟ್ಟಿತ್ತು. ಆಮೇಲೆ 1996ರಿಂದ 1998ನೇ ಇಸವಿಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡು, 10 ಗ್ರಾಮ್ಗೆ 5160ರಿಂದ 4045 ರೂಪಾಯಿಗೆ ಕುಸಿಯಿತು.