​ಕನ್ನಡದ ಡಾಲಿ, ತೆಲುಗಿನಲ್ಲಿ ಜಾಲಿ; ಧನಂಜಯ ಹುಟ್ಟುಹಬ್ಬಕ್ಕೆ ‘ಪುಷ್ಪ’ ಚಿತ್ರತಂಡದಿಂದ ಫಸ್ಟ್​ಲುಕ್​ ರಿಲೀಸ್​

Jolly Reddy First Look: ‘ಪುಷ್ಪ’ ಸಿನಿಮಾದಲ್ಲಿನ ಧನಂಜಯ ಅವರ ಲುಕ್​ ಮತ್ತು ಪಾತ್ರದ ಹೆಸರು ಇದುವರೆಗೂ ಬಹಿರಂಗ ಆಗಿರಲಿಲ್ಲ. ಈಗ ಹೊಸ ಪೋಸ್ಟರ್​ ಮೂಲಕ ಅಭಿಮಾನಿಗಳಿಗೆ ಎಲ್ಲ ಮಾಹಿತಿಯನ್ನು ಬಿಟ್ಟುಕೊಂಡಿದೆ ‘ಪುಷ್ಪ’ ಚಿತ್ರತಂಡ.

​ಕನ್ನಡದ ಡಾಲಿ, ತೆಲುಗಿನಲ್ಲಿ ಜಾಲಿ; ಧನಂಜಯ ಹುಟ್ಟುಹಬ್ಬಕ್ಕೆ ‘ಪುಷ್ಪ’ ಚಿತ್ರತಂಡದಿಂದ ಫಸ್ಟ್​ಲುಕ್​ ರಿಲೀಸ್​
​ಕನ್ನಡದ ಡಾಲಿ, ತೆಲುಗಿನಲ್ಲಿ ಜಾಲಿ; ಧನಂಜಯ ಹುಟ್ಟುಹಬ್ಬಕ್ಕೆ ‘ಪುಷ್ಪ’ ಚಿತ್ರತಂಡದಿಂದ ಫಸ್ಟ್​ಲುಕ್​ ರಿಲೀಸ್​
Follow us
TV9 Web
| Updated By: ಮದನ್​ ಕುಮಾರ್​

Updated on:Aug 23, 2021 | 6:57 PM

ಕನ್ನಡದ ಕಲಾವಿದ ಧನಂಜಯ (Daali Dhananjay) ಅವರು ಈಗ ಬಹುಭಾಷಾ ನಟ. ಸ್ಯಾಂಡಲ್​ವುಡ್​ನಲ್ಲಿ ಡಾಲಿ ಆಗಿ ಮಿಂಚಿದ ಅವರು ಈಗ ಟಾಲಿವುಡ್​ನಲ್ಲಿ ಜಾಲಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ, ‘ಪುಷ್ಪ’ (Pushpa) ಸಿನಿಮಾದಲ್ಲಿ ಅವರ ಪಾತ್ರದ ಹೆಸರು ಜಾಲಿ ರೆಡ್ಡಿ (Jolly Reddy) ಎಂಬುದು ಈಗ ಬಹಿರಂಗ ಆಗಿದೆ. ಇಂದು (ಆ.23) ಧನಂಜಯ ಬರ್ತ್​ಡೇ. ಆ ಪ್ರಯುಕ್ತ ಅವರು ನಟಿಸುತ್ತಿರುವ ವಿವಿಧ ಸಿನಿಮಾ ತಂಡಗಳು ಹೊಸ ಹೊಸ ಪೋಸ್ಟರ್​ಗಳನ್ನು ಬಿಡುಗಡೆ ಮಾಡಿವೆ. ಆ ಪೈಕಿ ಅಲ್ಲು ಅರ್ಜುನ್​ (Allu Arjun) ನಾಯಕತ್ವದ ‘ಪುಷ್ಪ’ ಸಿನಿಮಾದಲ್ಲಿನ ಧನಂಜಯ ಅವರ ಗೆಟಪ್​ ಗಮನ ಸೆಳೆಯುತ್ತಿದೆ.

ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್​ ಅವರ ಬತ್ತಳಿಕೆಯಿಂದ ಬರುತ್ತಿರುವ ‘ಪುಷ್ಪ’ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಈ ನಿರೀಕ್ಷೆಗೆ ಪಾತ್ರವರ್ಗ ಕೂಡ ಕಾರಣ. ಅಲ್ಲು ಅರ್ಜುನ್​ ಅವರು ಪುಷ್ಪರಾಜ್​ ಎಂಬ ಲಾರಿ ಡ್ರೈವರ್​ ಪಾತ್ರದಲ್ಲಿ ಕಾಣಿಸಿಕೊಂಡರೆ, ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ವಿಲನ್ ಪಾತ್ರದಲ್ಲಿ ಧನಂಜಯ ಅವರು ಅಭಿನಯಿಸುತ್ತಿದ್ದಾರೆ. ಇದುವರೆಗೂ ಧನಂಜಯ ಅವರ ಲುಕ್​ ಬಹಿರಂಗ ಆಗಿರಲಿಲ್ಲ. ಪಾತ್ರದ ಹೆಸರನ್ನು ಕೂಡ ರಹಸ್ಯವಾಗಿ ಇಡಲಾಗಿತ್ತು. ಈಗ ಹೊಸ ಪೋಸ್ಟರ್​ ಮೂಲಕ ಅಭಿಮಾನಿಗಳಿಗೆ ಎಲ್ಲ ಮಾಹಿತಿಯನ್ನು ಬಿಟ್ಟುಕೊಟ್ಟಿದೆ ‘ಪುಷ್ಪ’ ಚಿತ್ರತಂಡ.

ಖ್ಯಾತ ನಿರ್ಮಾಣ ಸಂಸ್ಥೆಯಾದ ‘ಮೈತ್ರೀ ಮೂವೀ ಮೇಕರ್ಸ್​’ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಧನಂಜಯ ಅವರ ಫಸ್ಟ್​ಲುಕ್​ ಪೋಸ್ಟರ್​ ಅನ್ನು ತನ್ನ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ಬಿಡುಗಡೆ ಮಾಡಿದೆ. ‘ನಮ್ಮ ಜಾಲಿ ರೆಡ್ಡಿ ಆಗಿರುವ ಧನಂಜಯ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಚಿತ್ರತಂಡದಿಂದ ವಿಶ್​ ಮಾಡಲಾಗಿದೆ.

ಕನ್ನಡದ ‘ಟಗರು’ ಸಿನಿಮಾದಲ್ಲಿ ‘ಡಾಲಿ’ ಎಂಬ ವಿಲನ್​ ಪಾತ್ರವನ್ನು ಮಾಡಿದ ಬಳಿಕ ಧನಂಜಯ ಅವರಿಗೆ ಅದೃಷ್ಟ ಖುಲಾಯಿಸಿತು. ಹೀರೋ-ವಿಲನ್​ ಎಂಬ ಬೇಧವನ್ನು ತೋರಿದೇ, ತಮ್ಮ ನಟನೆಗೆ ಸ್ಕೋಪ್​ ಇರುವಂತಹ ಎಲ್ಲ ಪಾತ್ರಗಳನ್ನೂ ಧನಂಜಯ ನಿಭಾಯಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಎಲ್ಲ ಭಾಷೆಗಳಿಂದಲೂ ಆಫರ್​ಗಳು ಬರುತ್ತಿವೆ. ಕನ್ನಡದಲ್ಲಿ ಮಾನ್ಸೂನ್​ ರಾಗ, ರತ್ನನ್​ ಪ್ರಪಂಚ, ಡಾಲಿ, ಬೈರಾಗಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಧನಂಜಯ ನಟಿಸುತ್ತಿದ್ದಾರೆ. ಬಹುನಿರೀಕ್ಷಿತ ‘ಪುಷ್ಪ’ ಚಿತ್ರ ಎರಡು ಪಾರ್ಟ್​ಗಳಲ್ಲಿ ತಯಾರಾಗುತ್ತಿದ್ದು, ಈ ವರ್ಷ ಡಿಸೆಂಬರ್​ಗೆ ಮೊದಲ ಪಾರ್ಟ್​ ಬಿಡುಗಡೆ ಆಗಲಿದೆ.

ಇದನ್ನೂ ಓದಿ:

ಧನಂಜಯ​ಗೆ ಜನ್ಮದಿನದ ಶುಭಾಶಯ ಕೋರಿದ ದುಲ್ಖರ್​ ಸಲ್ಮಾನ್​; ಎಂಪಿ ಜಯರಾಜ್​ ಲುಕ್​ ಅನಾವರಣ

Dhananjay: ಧನಂಜಯ್ ಬತ್ತಳಿಕೆ ಸೇರಿತು ಹೊಸ ಸಿನಿಮಾ; ಕುತೂಹಲ ಮೂಡಿಸುವ ಪೋಸ್ಟರ್ ಇಲ್ಲಿದೆ

Published On - 6:51 pm, Mon, 23 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ