‘ದುಡ್ಡಿಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಆ ಕೆಲಸ ಮಾಡಿದೆ; ನಂತರ ಅದೇ ಜೀವನ ಆಯ್ತು’: ಮಲೈಕಾ ಅರೋರಾ

ನಟ ಅರ್ಜುನ್​ ಕಪೂರ್​ ಜೊತೆ ಮಲೈಕಾ ಅರೋರಾ ಡೇಟಿಂಗ್​ ಮಾಡುತ್ತಿದ್ದಾರೆ. ಅವರಿಬ್ಬರ ರಿಲೇಷನ್​ಶಿಪ್​ಗೆ ಸಾಕ್ಷಿಯಾಗಿ ಅವರ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಲವು ಫೋಟೋಗಳು ರಾರಾಜಿಸುತ್ತಿವೆ.

‘ದುಡ್ಡಿಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಆ ಕೆಲಸ ಮಾಡಿದೆ; ನಂತರ ಅದೇ ಜೀವನ ಆಯ್ತು’: ಮಲೈಕಾ ಅರೋರಾ
ಮಲೈಕಾ ಅರೋರಾ
Follow us
TV9 Web
| Updated By: ಮದನ್​ ಕುಮಾರ್​

Updated on: Aug 23, 2021 | 4:49 PM

ಬಣ್ಣದ ಲೋಕದಲ್ಲಿ ನಟಿ ಮಲೈಕಾ ಅರೋರಾ (Malaika Arora) ಖ್ಯಾತಿ ದೊಡ್ಡದು. ನಟಿಯಾಗಿ, ರೂಪದರ್ಶಿಯಾಗಿ, ಐಟಂ ಡ್ಯಾನ್ಸರ್​ ಆಗಿ, ರಿಯಾಲಿಟಿ ಶೋಗಳ ಜಡ್ಜ್​ ಆಗಿ ಅವರು ಯಶಸ್ಸು ಪಡೆದುಕೊಂಡಿದ್ದಾರೆ. ವಯಸ್ಸಿನಲ್ಲಿ ತಮಗಿಂತ 11 ವರ್ಷ ಕಿರಿಯನಾಗಿರುವ ಅರ್ಜುನ್​ ಕಪೂರ್​ (Arjun Kapoor) ಜೊತೆ ಡೇಟಿಂಗ್​ ನಡೆಸುತ್ತಿರುವ ಕಾರಣದಿಂದಲೇ ಮಲೈಕಾ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಈ ನಡುವೆ ಅವರು ಮತ್ತೆ ರಿಯಾಲಿಟಿ ಶೋ ಜಡ್ಜ್​ ಆಗಿ ಮರಳಿದ್ದಾರೆ. ‘ಎಂಟಿವಿ ಸೂಪರ್​ ಮಾಡೆಲ್​ ಆಫ್​ ದಿ ಇಯರ್​’ ಸೀಸನ್​ 2ರ ಜಡ್ಜ್​ ಆಗಿದ್ದಾರೆ.

ಇದು ಸಂಪೂರ್ಣ ಮಾಡೆಲಿಂಗ್​ಗೆ ಸಂಬಂಧಿಸಿದ ರಿಯಾಲಿಟಿ ಶೋ ಆಗಿರುವುದರಿಂದ ಜಡ್ಜ್​ ಸ್ಥಾನದಲ್ಲಿ ಕೂರಲು ಮಲೈಕಾ ಅರೋರಾ ಹೆಚ್ಚು ಸಮರ್ಥ ವ್ಯಕ್ತಿ ಎನಿಸಿಕೊಳ್ಳುತ್ತಾರೆ. ಈ ಕ್ಷೇತ್ರದಲ್ಲಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. 1990ರ ದಶಕದಲ್ಲಿ ಮಾಡೆಲಿಂಗ್ ಲೋಕಕ್ಕೆ ಅವರು ಕಾಲಿಟ್ಟಿದ್ದರು. ಇಂದಿಗೂ ಆ ಪಯಣ ಮುಂದುವರಿದಿದೆ. ಹಲವು ಬ್ರ್ಯಾಂಡ್​ಗಳಿಗೆ ಮಲೈಕಾ ರಾಯಭಾರಿ ಆಗಿದ್ದಾರೆ. ತಮ್ಮ ಮಾಡೆಲಿಂಗ್​ ಜರ್ನಿ ಹೇಗೆ ಶುರುವಾಯಿತು ಎಂಬ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಹೆಚ್ಚೇನೂ ಕನಸುಗಳನ್ನು ಇಟ್ಟುಕೊಂಡು ಅವರು ಮಾಡೆಲೆಂಗ್​ ಕ್ಷೇತ್ರಕ್ಕೆ ಕಾಲಿಟ್ಟಿರಲಿಲ್ಲ. ಕೇವಲ ಪಾಕೆಟ್​ ಮನಿ ಪಡೆಯಬೇಕು ಎಂಬ ಕಾರಣದಿಂದ ಅವರು ಮಾಡೆಲ್​ ಆಗಿದ್ದು. ‘ಅಷ್ಟು ಚಿಕ್ಕವಯಸ್ಸಿನಲ್ಲಿ ನನಗೆ ಇದೆಲ್ಲ ತುಂಬ ಕಷ್ಟವಾಗಿತ್ತು. ಬೇಗ ಹಣ ಮಾಡಬೇಕು ಎಂಬ ಉದ್ದೇಶದಿಂದ ಈ ಕೆಲಸ ಶುರುಮಾಡಿದೆ. ಅದೇ ನನ್ನ ಜೀವನ ಆಗುತ್ತದೆ ಎಂದು ಆಗ ಗೊತ್ತಿರಲಿಲ್ಲ’ ಎಂದು ಮಲೈಕಾ ಹೇಳಿದ್ದಾರೆ.

ಮಾಡೆಲಿಂಗ್​ ಮಾಡುತ್ತಿದ್ದ ಅವರಿಗೆ ನಂತರ ಸಿನಿಮಾಗಳಿಂದ ಆಫರ್​ ಬರಲು ಆರಂಭವಾಯಿತು. ಶಾರುಖ್​ ಖಾನ್​ ನಟನೆಯ ‘ದಿಲ್​ ಸೇ’ ಸಿನಿಮಾದ ‘ಚೈಯ್ಯ ಚೈಯ್ಯಾ..’ ಹಾಡಿನಲ್ಲಿ ಡ್ಯಾನ್ಸ್​ ಮಾಡಿದ ಬಳಿಕ ಮಲೈಕಾ ಖ್ಯಾತಿ ದೇಶದ ಮೂಲೆ ಮೂಲೆಗೂ ಹಬ್ಬಿತು. 1998ರಲ್ಲಿ ಸಲ್ಮಾನ್​ ಖಾನ್​ ಸಹೋದರ ಅರ್ಬಾಜ್​ ಖಾನ್​ ಜೊತೆ ಮಲೈಕಾ ಮದುವೆ ನಡೆಯಿತು. ಆದರೆ 2017ರಲ್ಲಿ ಅವರಿಬ್ಬರು ವಿಚ್ಛೇದನ ಪಡೆದುಕೊಂಡರು. ಈಗ ನಟ ಅರ್ಜುನ್​ ಕಪೂರ್​ ಜೊತೆ ಮಲೈಕಾ ಡೇಟಿಂಗ್​ ಮಾಡುತ್ತಿದ್ದಾರೆ. ತಮ್ಮಿಬ್ಬರ ಸಂಬಂಧವನ್ನು ಈ ಜೋಡಿ ಮುಚ್ಚಿಟ್ಟಿಲ್ಲ. ಅವರಿಬ್ಬರ ರಿಲೇಷನ್​ಶಿಪ್​ಗೆ ಸಾಕ್ಷಿಯಾಗಿ ಅವರ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಲವು ಫೋಟೋಗಳು ರಾರಾಜಿಸುತ್ತಿವೆ.

ಇದನ್ನೂ ಓದಿ:

ವೀಕೆಂಡ್ ಮೋಜು ಮಸ್ತಿಯಲ್ಲಿ ಮಲೈಕಾ ಅರೋರಾ-ಅರ್ಜುನ್​ ಕಪೂರ್​; ವೈರಲ್ ಆಯ್ತು ಫೋಟೋ

ತನಗಿಂತ 12 ವರ್ಷ ಕಿರಿಯ ನಟನ ಜೊತೆ ಸುತ್ತಾಡುತ್ತಿರುವ ಮಲೈಕಾ ಅರೋರಾ ಸೌಂದರ್ಯದ ಗುಟ್ಟು ರಟ್ಟು!

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ