AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಗ ಕ್ಲಾಸ್​ನಿಂದ ಹೊರ ಬಂದ ನಟಿ ಮಲೈಕಾ ಅರೋರಾಗೆ ಎದುರಾಗಿದ್ದು ಟ್ರಾಫಿಕ್​ ಪೊಲೀಸ್​; ಮುಂದೇನಾಯ್ತು?

ಮಲೈಕಾ ಮುಂಬೈನಲ್ಲಿ ಯೋಗಾ ಕ್ಲಾಸ್​ಗೆ ತೆರಳಿದ್ದರು. ಅವರು ಯೋಗ ಕ್ಲಾಸ್​ನಿಂದ ಹೊರ ಬರುವಾಗ ಕಪ್ಪು ಬಣ್ಣದ ಶಾರ್ಟ್ಸ್​ ಹಾಗೂ ಸ್ಪೋರ್ಟ್ಸ್​ ಬ್ರಾ ಧರಿಸಿದ್ದರು.

ಯೋಗ ಕ್ಲಾಸ್​ನಿಂದ ಹೊರ ಬಂದ ನಟಿ ಮಲೈಕಾ ಅರೋರಾಗೆ ಎದುರಾಗಿದ್ದು ಟ್ರಾಫಿಕ್​ ಪೊಲೀಸ್​; ಮುಂದೇನಾಯ್ತು?
ಮಲೈಕಾ ಅರೋರಾ
TV9 Web
| Edited By: |

Updated on: Jul 05, 2021 | 9:27 PM

Share

ಸೆಲೆಬ್ರಿಟಿಗಳು ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ಕೊಡುತ್ತಾರೆ. ಹೀಗಾಗಿ, ನಿತ್ಯ ಜಿಮ್​ ಅಥವಾ ಯೋಗ ಕ್ಲಾಸ್​ಗೆ ತೆರಳಿ ಸಮಯ ವ್ಯಯಿಸುತ್ತಾರೆ. ಅದೇ ರೀತಿ ನಟಿ ಮಲೈಕಾ ಅರೋರಾ ಸೋಮವಾರ (ಜುಲೈ 5) ಯೋಗ ಕ್ಲಾಸ್​ಗೆ ತೆರಳಿದ್ದಾರೆ. ಹಿಂದಿರುಗಿ ಬರುವಾಗ ಇವರಿಗೆ ಟ್ರಾಫಿಕ್​ ಪೊಲೀಸ್​ ಎದುರಾಗಿದ್ದಾರೆ.

ಮಲೈಕಾ ಮುಂಬೈನಲ್ಲಿ ಯೋಗಾ ಕ್ಲಾಸ್​ಗೆ ತೆರಳಿದ್ದರು. ಅವರು ಯೋಗ ಕ್ಲಾಸ್​ನಿಂದ ಹೊರ ಬರುವಾಗ ಕಪ್ಪು ಬಣ್ಣದ ಶಾರ್ಟ್ಸ್​ ಹಾಗೂ ಸ್ಪೋರ್ಟ್ಸ್​ ಬ್ರಾ ಧರಿಸಿದ್ದರು. ಕೈಯಲ್ಲಿ ನೀರಿನ ಬಾಟಲಿ ಇತ್ತು. ಅವರು ಕಟ್ಟಡದಿಂದ ಹೊರ ಬರುತ್ತಿದ್ದಂತೆ ಟ್ರಾಫಿಕ್​ ಪೊಲೀಸ್​ ಒಬ್ಬರು ಅವರಿಗೆ ಎದುರಾಗಿದ್ದಾರೆ.

ಟ್ರಾಫಿಕ್​ ಪೊಲೀಸರನ್ನು ನೋಡಿದ ಮಲೈಕಾ ಕೊಂಚ ಅಚ್ಚರಿಗೊಂಡಿದ್ದಾರೆ. ಇವರ ಬಳಿಯೇ ಪೊಲೀಸ್​ ಬರೋದು ನೋಡಿ ಅವರ ಅಚ್ಚರಿ ದ್ವಿಗುಣವಾಗಿದೆ. ಈ ವೇಳೆ ಪೊಲೀಸ್ ಮಲೈಕಾ ಜತೆ​ ಫೋಟೋ ತೆಗೆಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದರೆ, ಮಲೈಕಾ ಇದಕ್ಕೆ ನೋ ಎಂದಿದ್ದಾರೆ. ನಂತರ ಅವರಿಗೆ ಏನನ್ನಿಸಿತೋ ಏನೋ ಪೊಲೀಸ್​ ಜತೆ ನಿಂತು ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಪೊಲೀಸ್​ ಮಾಸ್ಕ್​ ತೆಗೆದಿದ್ದನ್ನು ಕಂಡ ನಟಿ ಅಂತರ ಕಾಯ್ದುಕೊಂಡಿದ್ದಾರೆ. ನಂತರ ಕಾರನ್ನು ಏರಿ ನಟಿ ತೆರಳಿದ್ದಾರೆ.

ಬಾಲಿವುಡ್​ ನಟ ಅರ್ಜುನ್​ ಕಪೂರ್​ ಮತ್ತು ನಟಿ ಮಲೈಕಾ ಅರೋರಾ ಪರಸ್ಪರ ಪ್ರೀತಿಸುತ್ತಿದ್ದಾರೆ. ವಯಸ್ಸಿನಲ್ಲಿ ಮಲೈಕಾಗಿಂತ ಅರ್ಜುನ್​ 12 ವರ್ಷ ಚಿಕ್ಕವರಾದರೂ ಇದು ಅವರ ಪ್ರೀತಿಗೆ ಯಾವುದೇ ಅಡ್ಡಿ ಉಂಟು ಮಾಡಿಲ್ಲ. ಇತ್ತೀಚೆಗೆ ಅರ್ಜುನ್​ ಕಪೂರ್​ ಜನ್ಮದಿಚಾರಣೆ ಆಚರಿಸಿಕೊಂಡಿದ್ದರು. ಮಲೈಕಾ ಸಂಭ್ರಮದಿಂದ ಬರ್ತ್​ಡೇ ಆಚರಣೆ ಮಾಡಿಕೊಂಡಿದ್ದರು. ಮುಂಬೈನ ತಾಜ್​ ಹೋಟೆಲ್​ಗೆ ತೆರಳಿದ್ದು ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತು. ಈ ಫೋಟೋಗಳನ್ನು ಮಲೈಕಾ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಇನ್ನು, ಇತ್ತೀಚೆಗೆ ಮಲೈಕಾ ಮನೆ ಸಮೀಪವೇ ದುಬಾರಿ ಬೆಲೆಯ ವಿಲ್ಲಾ ಒಂದನ್ನು ಅರ್ಜುನ್​ ಕಪೂರ್​ ಖರೀದಿಸಿದ್ದರು. ಇದರ ಬೆಲೆ 20 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು.

ಇದನ್ನೂ ಓದಿ: ಜಾಕ್ವಲೀನ್​​​ ಫರ್ನಾಂಡಿಸ್​ ಜತೆ ಲಿವ್​ ಇನ್​ನಲ್ಲಿರೋಕೆ 175 ಕೋಟಿ ಮೌಲ್ಯದ ಫ್ಲ್ಯಾಟ್​ ಖರೀದಿಸಿದ ಬಾಯ್​ಫ್ರೆಂಡ್​

20 ಕೋಟಿ ಕೊಟ್ಟು ಪ್ರೇಯಸಿ ಮಲೈಕಾ ಅರೋರಾ ಮನೆ ಸಮೀಪವೇ ಸ್ಕೈ ವಿಲ್ಲಾ ಖರೀದಿಸಿದ ಅರ್ಜುನ್​ ಕಪೂರ್​

ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?