ನಟ ಆರ್. ಮಾಧವನ್ ಇಂಗ್ಲಿಷ್ ಉಚ್ಚಾರಣೆ ಕೇಳಿದ್ರಾ?; ವೈರಲ್ ಆಯ್ತು ಹಳೆಯ ವಿಡಿಯೋ
ಮಾಧವನ್ ಕಾರು ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹೀರಾತಿನಲ್ಲಿ ಅವರ ಇಂಗ್ಲಿಷ್ ಅದ್ಭುತವಾಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ.
ನಟ ಆರ್. ಮಾಧವನ್ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲು ಜಾಹೀರಾತು ಇಂಡಸ್ಟ್ರಿಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ಅವರು ಈ ಮೊದಲು ಸಾಕಷ್ಟು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಈಗ ಅವರ ಹಳೆಯ ಜಾಹೀರಾತಿನ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಾಧವನ್ ಇಂಗ್ಲಿಷ್ ಉಚ್ಚಾರಣೆ ಕೇಳಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
ಮಾಧವನ್ ಕಾರು ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹೀರಾತಿನಲ್ಲಿ ಅವರ ಇಂಗ್ಲಿಷ್ ಅದ್ಭುತವಾಗಿದೆ. ಲೇಡಿ ಲವ್ ಬಗ್ಗೆ ಮಾತನಾಡುವ ಮಾಧವನ್, ‘ನನ್ನ ಪ್ರಿಯತಮೆ ಡೈಮಂಡ್ ಅಥವಾ ದೊಡ್ಡ ಮನೆ ಬಗ್ಗೆ ಚಿಂತೆ ನಡೆಸಿಲ್ಲ. ಅವಳು ವಿಶ್ವವನ್ನು ನೋಡಬೇಕು ಎಂದು ಬಯಸಲಿಲ್ಲ. ನಿಖಿಲ್ ನೀನೆ ನನಗೆ ವಿಶ್ವ ಎಂದಳು. ಲಕ್ಸುರಿ ಕಾರನ್ನು ಖರೀದಿಸಿ ಆಕೆಗೆ ಕೀ ನೀಡಿದರೆ, ‘ನಾನು ನನ್ನ ಈ ಸಣ್ಣಕಾರಿನಲ್ಲೇ ಖುಷಿಯಾಗಿದ್ದೇನೆ’ ಎನ್ನುವುದೇ. ಆಕೆ ಸುಳ್ಳುಗಾರ್ತಿ’ ಎಂದು ಮಾಧವನ್ ತಮ್ಮ ಅದ್ಭುತ ಇಂಗ್ಲಿಷ್ ಮೂಲಕ ಜಾಹೀರಾತನ್ನು ಪ್ರಸ್ತುತ ಪಡಿಸಿದ್ದಾರೆ.
View this post on Instagram
ಈ ವಿಡಿಯೋ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಇದು ಬ್ರಿಟಿಷ್ ಉಚ್ಚಾರಣೆ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಅದ್ಭುತ ಇಂಗ್ಲಿಷ್ ಆ್ಯಕ್ಸೆಂಟ್ ಎಂದು ಶ್ಲಾಘಿಸಿದ್ದಾರೆ.
ಮಾಧವನ್ ಅವರ ಪತ್ನಿ ಸರಿತಾ ಅವರು ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಕೊವಿಡ್ನ ಈ ಕಡುಕಷ್ಟದ ಸಂದರ್ಭದಲ್ಲಿ ಶಾಲೆಗಳು ಬಂದ್ ಆಗಿವೆ. ಹಾಗಾಗಿ, ಸರಿತಾ ಅವರು ಬಡಮಕ್ಕಳಿಗೆ ಆನ್ಲೈನ್ ಮೂಲಕ ಪಾಠ ಹೇಳಿಕೊಡುತ್ತಿದ್ದಾರೆ. ಈ ವಿಡಿಯೋವನ್ನು ಮಾಧವನ್ ಇತ್ತೀಚೆಗೆ ಶೇರ್ ಮಾಡಿಕೊಂಡಿದ್ದರು. ಪತ್ನಿ ಮಾಡುತ್ತಿರುವ ಈ ಕೆಲಸದ ಮುಂದೆ ತಾವು ಅಸಮರ್ಥ ಎನಿಸುತ್ತಿದೆ ಎಂದು ಹೇಳಿದ್ದರು.
ಏಪ್ರಿಲ್ನಲ್ಲಿ ಮಾಧವನ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಆಗಿತ್ತು. ಈಗ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಆದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ ಮನೆಯಲ್ಲೇ ಇದ್ದಾರೆ. ದೇವರ ದಯೆಯಿಂದ ನಾವೆಲ್ಲ ಈಗ ಸದೃಢ ಮತ್ತು ಸುರಕ್ಷತೆಯಿಂದ ಇದ್ದೇವೆ ಎಂದು ಅವರು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು.
ಸಿನಿಮಾ ವಿಚಾರಕ್ಕೆ ಬರುವುದಾದರೆ ಮಾಧವನ್ ನಟನೆ ಮತ್ತು ನಿರ್ದೇಶನದ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಭಾರಿ ಕೌತುಕ ಮೂಡಿಸಿದೆ. ಟ್ರೇಲರ್ನಲ್ಲಿ ಮಾಧವನ್ ಅವರ ಕೆಲಸ ಕಂಡು ಎಲ್ಲರೂ ಶಹಭಾಷ್ ಎಂದಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೇಲರ್ ನೋಡಿರುವ ನರೇಂದ್ರ ಮೋದಿ, ಅಮಿತಾಬ್ ಬಚ್ಚನ್, ಪ್ರಿಯಾಂಕಾ ಚೋಪ್ರಾ, ಹೃತಿಕ್ ರೋಷನ್, ಅಭಿಷೇಕ್ ಬಚ್ಚನ್ ಮುಂತಾದವರು ಫಿದಾ ಆಗಿದ್ದಾರೆ.
Madhavan: ಹೆಂಡತಿ ಎದುರು ನಾನು ಅಸಮರ್ಥ; ನಟ ಮಾಧವನ್ ಬಹಿರಂಗವಾಗಿ ಹೀಗೆ ಹೇಳಲು ಕಾರಣ ಏನು?