ಬಾಲಿವುಡ್​ಗೆ ರಿಮೇಕ್​ ಆದ ಕನ್ನಡದ ಹಿಟ್​ ಚಿತ್ರ; ಅಲಾಯಾಗೆ ಸಿಕ್ತು ಚಾನ್ಸ್​

ನಿರ್ಮಾಪಕಿ ಏಕ್ತಾ ಕಪೂರ್​ ಯು-ಟರ್ನ್​ ಚಿತ್ರವನ್ನು ಹಿಂದಿಗೆ ರಿಮೇಕ್​ ಮಾಡುತ್ತಿರುವುದಾಗಿ ಸೋಮವಾರ ಘೋಷಣೆ ಮಾಡಿದ್ದಾರೆ. ಆರಿಫ್​ ಖಾನ್​ ಹೆಸರಿನ ಯುವ ನಿರ್ದೇಶಕ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.

ಬಾಲಿವುಡ್​ಗೆ ರಿಮೇಕ್​ ಆದ ಕನ್ನಡದ ಹಿಟ್​ ಚಿತ್ರ; ಅಲಾಯಾಗೆ ಸಿಕ್ತು ಚಾನ್ಸ್​
ಅಲಾಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 05, 2021 | 4:18 PM

‘ಜವಾನಿ ಜಾನೇಮನ್​’ ಸಿನಿಮಾ ಮೂಲಕ ಬಾಲಿವುಡ್​ಗೆ ಕಾಲಿಟ್ಟ ನಟಿ ಅಲಾಯಾ ಎಫ್​ ಈಗ ಮತ್ತೊಂದು ಸಿನಿಮಾ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕನ್ನಡದ ಯು-ಟರ್ನ್​ ಸಿನಿಮಾ ಹಿಂದಿಗೆ ರಿಮೇಕ್​ ಆಗುತ್ತಿದೆ. ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್​ ಮಾಡಿದ್ದ ಪಾತ್ರದಲ್ಲಿ ಅಲಾಯಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರದಲ್ಲಿ ಕಾಣಿಸಿಕೊಳ್ಳೋಕೆ ಅವರು ಸಾಕಷ್ಟು ಎಗ್ಸೈಟ್​ ಆಗಿದ್ದಾರೆ.

ನಿರ್ಮಾಪಕಿ ಏಕ್ತಾ ಕಪೂರ್​ ಯು-ಟರ್ನ್​ ಚಿತ್ರವನ್ನು ಹಿಂದಿಗೆ ರಿಮೇಕ್​ ಮಾಡುತ್ತಿರುವುದಾಗಿ ಸೋಮವಾರ ಘೋಷಣೆ ಮಾಡಿದ್ದಾರೆ. ಆರಿಫ್​ ಖಾನ್​ ಹೆಸರಿನ ಯುವ ನಿರ್ದೇಶಕ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಅಲಾಯಾ ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಶೀಘ್ರವೇ ಸೆಟ್ಟೇರಲಿದೆ.

ಪವನ್​ ಕುಮಾರ್​ ನಿರ್ದೇಶನದ ಈ ಸಿನಿಮಾ 2016ರಲ್ಲಿ ಕನ್ನಡದಲ್ಲಿ ತೆರೆಗೆ ಬಂದು ಹಿಟ್​ ಆಗಿತ್ತು. 2017ರಲ್ಲಿ ಮಲಯಾಳಂನಲ್ಲಿ ಈ ಸಿನಿಮಾ ರಿಮೇಕ್​ ಆಗಿತ್ತು. 2018ರಲ್ಲಿ ತೆಲುಗು-ತಮಿಳು ಸೇರಿ ಒಟ್ಟು 8 ಭಾಷೆಗಳಲ್ಲಿ ಚಿತ್ರ ತೆರೆಗೆ ಬಂದಿದೆ.

ಪವನ್​ ಕುಮಾರ್​ ನಿರ್ದೇಶನದಲ್ಲಿ ಮೂಡಿ ಬಂದ ಯು-ಟರ್ನ್​, ರಸ್ತೆ ಸುರಕ್ಷತೆಯ ವಿಚಾರವನ್ನು ಇಟ್ಟುಕೊಂಡು ಹೆಣೆದ ಸಿನಿಮಾ. ರಸ್ತೆಯಲ್ಲಿ ಸಂಚರಿಸುವಾಗ ಎಲ್ಲೆಂದರಲ್ಲಿ ಯು ಟರ್ನ್​ ತೆಗೆದುಕೊಳ್ಳುವವರಿಗೆ ಈ ಸಿನಿಮಾ ಎಚ್ಚರಿಕೆ ಸಂದೇಶ ನೀಡಿತ್ತು. ಪವನ್​ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ರೋಜರ್​ ನಾರಾಯಣ್​, ರಾಧಿಕಾ ಚೇತನ್​, ದಿಲೀಪ್​ ರಾಜ್​ ಮೊದಲಾದವರು ನಟಿಸಿದ್ದಾರೆ.

ಇದನ್ನೂ ಓದಿ: ರಿಮೇಕ್​ ವಿಚಾರದಲ್ಲಿ ದಾಖಲೆ ಬರೆದ ಪವನ್​ ಕುಮಾರ್​ ಯು-ಟರ್ನ್​ ಸಿನಿಮಾ

ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ