ಅಲ್ಲು ಅರ್ಜುನ್​ಗೆ ಸರಿಸಾಟಿಯಾಗಿ ನಿಲ್ಲೋಕೆ ಹೊರಟ ರಶ್ಮಿಕಾ ಮಂದಣ್ಣ; ಇದಕ್ಕೆ ಅವರು ಮಾಡ್ತಿರೋದೇನು?

TV9 Digital Desk

| Edited By: Rajesh Duggumane

Updated on: Sep 05, 2021 | 8:20 PM

ಅಲ್ಲು ಅರ್ಜುನ್​ ಹಾಗೂ ರಶ್ಮಿಕಾ ‘ಪುಷ್ಪ’ ಸಿನಿಮಾದಲ್ಲಿ ಒಟ್ಟಾಗಿ ತೆರೆಹಂಚಿಕೊಳ್ಳುತ್ತಿದ್ದಾರೆ. ಟಾಲಿವುಡ್​ನ ಖ್ಯಾತ ನಿರ್ದೇಶಕ ಸುಕುಮಾರ್​ ಆ್ಯಕ್ಷನ್​ಕಟ್​ ಹೇಳುತ್ತಿರುವ ಈ ಚಿತ್ರ ಎರಡು ಪಾರ್ಟ್​​​ಗಳಲ್ಲಿ ತೆರೆಗೆ ಬರುತ್ತಿದೆ.

ಅಲ್ಲು ಅರ್ಜುನ್​ಗೆ ಸರಿಸಾಟಿಯಾಗಿ ನಿಲ್ಲೋಕೆ ಹೊರಟ ರಶ್ಮಿಕಾ ಮಂದಣ್ಣ; ಇದಕ್ಕೆ ಅವರು ಮಾಡ್ತಿರೋದೇನು?
ರಶ್ಮಿಕಾ ಮಂದಣ್ಣ - ಅಲ್ಲು ಅರ್ಜುನ್
Follow us

ಅಲ್ಲು ಅರ್ಜುನ್​ ಡಾನ್ಸ್​ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು ಹಾಕುವ ಸ್ಟೆಪ್​ ಕಲಿಯೋದು ಅಷ್ಟು ಸುಲಭದ ಮಾತಲ್ಲ. ಅಲ್ಲು ಜತೆ ತೆರೆ ಹಂಚಿಕೊಳ್ಳುವ ನಟಿಯರಿಗೆ ಸ್ಟೆಪ್​ ಮ್ಯಾಚ್​ ಮಾಡೋದು ಹೇಗೆ ಎನ್ನುವ ಆತಂಕ ಇದ್ದೇ ಇರುತ್ತದೆ. ಡಾನ್ಸ್​ ಮಾಡುವುದರಲ್ಲಿ ಅಲ್ಲು ಅಷ್ಟು ನಿಸ್ಸೀಮರು. ಈಗ ರಶ್ಮಿಕಾಗೂ ಇದೇ ಚಿಂತೆ ಕಾಡಿದೆ. ಅಲ್ಲುಗೆ ಸರಿಸಾಟಿಯಾಗಿ ನಿಲ್ಲೋಕೆ ಅವರು ಡಾನ್ಸ್ ಕ್ಲಾಸ್​ಗೆ ತೆರಳುತ್ತಿದ್ದಾರೆ ಅನ್ನೋದು ವಿಶೇಷ.

ಅಲ್ಲು ಅರ್ಜುನ್​ ಹಾಗೂ ರಶ್ಮಿಕಾ ‘ಪುಷ್ಪ’ ಸಿನಿಮಾದಲ್ಲಿ ಒಟ್ಟಾಗಿ ತೆರೆಹಂಚಿಕೊಳ್ಳುತ್ತಿದ್ದಾರೆ. ಟಾಲಿವುಡ್​ನ ಖ್ಯಾತ ನಿರ್ದೇಶಕ ಸುಕುಮಾರ್​ ಆ್ಯಕ್ಷನ್​ಕಟ್​ ಹೇಳುತ್ತಿರುವ ಈ ಚಿತ್ರ ಎರಡು ಪಾರ್ಟ್​​​ಗಳಲ್ಲಿ ತೆರೆಗೆ ಬರುತ್ತಿದೆ. ಸುಕುಮಾರ್​ ಸಿನಿಮಾದಲ್ಲಿ ಕಥೆ ಜತೆಗೆ ಡಾನ್ಸ್​ಗೂ ಹೆಚ್ಚಿನ ಆದ್ಯತೆ ಇರುತ್ತದೆ. ಈ ಮೊದಲು ಕೂಡ ಇದು ಸಾಕಷ್ಟು ಬಾರಿ ಸಾಬೀತಾಗಿದೆ. ಈಗ ಪುಷ್ಪದಲ್ಲೂ ಅಲ್ಲು ಹಾಗೂ ರಶ್ಮಿಕಾ ಒಟ್ಟಾಗಿ ಡಾನ್ಸ್​ ಮಾಡಲಿದ್ದಾರೆ. ಅಲ್ಲು ಹೆಜ್ಜೆಗೆ ಮ್ಯಾಚ್​ ಮಾಡೋಕೆ ರಶ್ಮಿಕಾ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ರಶ್ಮಿಕಾ ಸದ್ಯ ಡಾನ್ಸ್ ಕ್ಲಾಸ್​ಗೆ ತೆರಳುತ್ತಿದ್ದಾರೆ. ಸಿನಿಮಾದಲ್ಲಿ ಬರುವ ಸಾಂಗ್​ ಒಂದಕ್ಕಾಗಿ ರಶ್ಮಿಕಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಅಲ್ಲು ಹೆಜ್ಜೆ ಜತೆ ಮ್ಯಾಚ್​ ಮಾಡಿಕೊಳ್ಳಲು ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಮಹೇಶ್​ ಬಾಬು ನಟನೆಯ ‘ಸರಿಲೇರು ನೀಕೆವ್ವರು’ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಬರುವ ಸಾಂಗ್​ ಒಂದರಲ್ಲಿ ರಶ್ಮಿಕಾ ಸಖತ್​ ಆಗಿ ಸ್ಟೆಪ್​ ಹಾಕಿದ್ದರು. ಈ ಮೂಲಕ ತಾವು ಉತ್ತಮ ಡಾನ್ಸರ್​ ಎಂಬುದನ್ನೂ ಸಾಬೀತು ಮಾಡಿದ್ದರು ರಶ್ಮಿಕಾ. ಈಗ ಅಲ್ಲು ಸಿನಿಮಾದಲ್ಲಿ ಅವರ ಡಾನ್ಸ್​ ಹೇಗಿರಲಿದೆ ಅನ್ನೋದು ಸದ್ಯದ ಕುತೂಹಲ.

ಪುಷ್ಪ ಸಿನಿಮಾ ಎರಡು ಪಾರ್ಟ್​ಗಳಲ್ಲಿ ರಿಲೀಸ್​ ಆಗುತ್ತಿದೆ. ಮೊದಲ ಪಾರ್ಟ್​ ಇದೇ ಕ್ರಿಸ್​ಮಸ್​ಗೆ ತೆರೆಗೆ ಬರುತ್ತಿದೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಒಟ್ಟಿಗೆ ಬಿಡುಗಡೆ ಆಗುತ್ತಿದೆ. ಫಹಾದ್ ಫಾಸಿಲ್ ಈ ಸಿನಿಮಾದಲ್ಲಿ ನೆಗೆಟಿವ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ಅವರ ಲುಕ್ ರಿಲೀಸ್​ ಮಾಡಿತ್ತು.

ಇದನ್ನೂ ಓದಿ: ತೆಲುಗಿನಲ್ಲಿ ಮೊದಲ ಚಿತ್ರದ ರಿಲೀಸ್​ಗೂ ಮುನ್ನವೇ ಹೆಚ್ಚಿದೆ ಕನ್ನಡತಿ ಶ್ರೀಲೀಲಾ ಹವಾ; ರಶ್ಮಿಕಾ, ಪೂಜಾ, ಕೃತಿ ಕಥೆಯೇನು?

ಜಿಮ್​ನಲ್ಲಿ ಒಟ್ಟಾಗಿ ವರ್ಕೌಟ್​ ಮಾಡಿದ ರಶ್ಮಿಕಾ ಮಂದಣ್ಣ-ವಿಜಯ್​ ದೇವರಕೊಂಡ; ಫೋಟೋ ವೈರಲ್

ತಾಜಾ ಸುದ್ದಿ

Related Stories

Click on your DTH Provider to Add TV9 Kannada