ಸಿದ್ದಾರ್ಥ್​ ಶುಕ್ಲಾ ಶ್ರದ್ದಾಂಜಲಿ ಸಭೆ: ಅಭಿಮಾನಿಗಳಿಗೂ ಆಹ್ವಾನ ನೀಡಿದ ತಾಯಿ; ಇಲ್ಲಿದೆ ಮೀಟಿಂಗ್​ ಲಿಂಕ್​

TV9 Digital Desk

| Edited By: ಮದನ್​ ಕುಮಾರ್​

Updated on: Sep 06, 2021 | 1:31 PM

ಸಿದ್ದಾರ್ಥ್​ ಶುಕ್ಲಾ ಕುಟುಂಬದವರು ಆಯೋಜಿಸುತ್ತಿರುವ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಲು ಎಲ್ಲ ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ. ಜೂಮ್​ ಮೀಟಿಂಗ್​ ಮೂಲಕ ಎಲ್ಲರೂ ಪಾಲ್ಗೊಳ್ಳಬಹುದು.

ಸಿದ್ದಾರ್ಥ್​ ಶುಕ್ಲಾ ಶ್ರದ್ದಾಂಜಲಿ ಸಭೆ: ಅಭಿಮಾನಿಗಳಿಗೂ ಆಹ್ವಾನ ನೀಡಿದ ತಾಯಿ; ಇಲ್ಲಿದೆ ಮೀಟಿಂಗ್​ ಲಿಂಕ್​
ಸಿದ್ದಾರ್ಥ್​ ಶುಕ್ಲಾ

ಕಿರುತೆರೆಯ ಖ್ಯಾತ ನಟ ಸಿದ್ದಾರ್ಥ್​ ಶುಕ್ಲಾ ನಿಧನದಿಂದಾಗಿ ಅವರ ಇಡೀ ಅಭಿಮಾನಿ ಬಳಗ ಶೋಕ ಸಾಗರದಲ್ಲಿ ಮುಳುಗಿದೆ. 40ರ ಪ್ರಾಯದಲ್ಲಿ ಸಿದ್ದಾರ್ಥ್ ಅವರು ಹೀಗೆ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಫಿಟ್ನೆಸ್​ಗೆ ಹೆಚ್ಚು ಮಹತ್ವ ನೀಡುತ್ತಿದ್ದ ಅವರು ಹೃದಯಾಘಾತಕ್ಕೆ ಒಳಗಾದರು ಎಂಬುದನ್ನು ಅಭಿಮಾನಿಗಳಿಗೆ ನಂಬಲಾಗುತ್ತಿಲ್ಲ. ಸೆ.2ರ ಮುಂಜಾನೆ ಸಿದ್ದಾರ್ಥ್ ನಿಧನರಾದರು. ಇಂದಿಗೆ (ಸೆ.6) ನಾಲ್ಕು ದಿನ ಕಳೆದಿದೆ. ಈಗ ಅವರ ಕುಟುಂಬದವರು ಶ್ರದ್ಧಾಂಜಲಿ ಸಭೆ ನಡೆಸುತ್ತಿದ್ದಾರೆ. ವಿಶೇಷ ಎಂದರೆ ಈ ಸಭೆಗೆ ಅಭಿಮಾನಿಗಳಿಗೂ ಆಹ್ವಾನ ನೀಡಲಾಗಿದೆ.

ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ನಟಿಸಿದ ಸಿದ್ದಾರ್ಥ್​ ಶುಕ್ಲಾಗೆ ಅಪಾರ ಅಭಿಮಾನಿಗಳಿದ್ದಾರೆ. ಬಿಗ್​ ಬಾಸ್​ ಸೀಸನ್​ 13ರಲ್ಲಿ ಸ್ಪರ್ಧಿಸಿ ಗೆದ್ದ ಬಳಿಕವಂತೂ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಿತು. ಅವರೆಲ್ಲರೂ ಸಿದ್ದಾರ್ಥ್​ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಈಗ ಸಿದ್ದಾರ್ಥ್​ ಕುಟುಂಬದವರು ಆಯೋಜಿಸುತ್ತಿರುವ ಶ್ರದ್ಧಾಂಜಲಿ ಸಭೆಗೆ ಭಾಗವಹಿಸಲು ಎಲ್ಲ ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ. ಜೂಮ್​ ಮೀಟಿಂಗ್​ ಮೂಲಕ ಎಲ್ಲರೂ ಪಾಲ್ಗೊಳ್ಳಬಹುದು.

ನಟ ಕರಣ್​ವೀರ್​ ಬೊಹ್ರಾ ಅವರು ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮಾಹಿತಿ ನೀಡಿದ್ದು, ಜೂಮ್​ ಮೀಟಿಂಗ್​ನ ಲಿಂಕ್​ ಕೂಡ ಹಂಚಿಕೊಂಡಿದ್ದಾರೆ. ‘ಇಂದು ಸಂಜೆ 5 ಗಂಟೆಗೆ ಎಲ್ಲರೂ ಒಂದಾಗಿ ಸಿದ್ದಾರ್ಥ್​ ಶುಕ್ಲಾಗೆ ಶ್ರದ್ಧಾಂಜಲಿ ಸಲ್ಲಿಸೋಣ. ಅವರ ತಾಯಿ ರೀಟಾ, ಸಹೋದರಿಯರಾದ ನೀತು, ಪ್ರೀತಿ ಈ ಸಭೆ ಆಯೋಜಿಸುತ್ತಿದ್ದಾರೆ’ ಎಂದು ಕರಣ್​ವೀರ್​ ಬೊಹ್ರಾ ಪೋಸ್ಟ್​ ಮಾಡಿದ್ದಾರೆ.

ಸಿದ್ದಾರ್ಥ್​ ಶುಕ್ಲಾ ಜೊತೆ ನಟಿ ಶೆಹನಾಜ್​ ಗಿಲ್​ ಹೆಚ್ಚು ಆಪ್ತವಾಗಿದ್ದರು. ಇಬ್ಬರ ನಡುವೆ ಪ್ರೀತಿ ಇತ್ತು ಎಂಬುದು ಕೂಡ ಈಗ ರಹಸ್ಯವಾಗಿ ಉಳಿದಿಲ್ಲ. ಸಿದ್ದಾರ್ಥ್​ ನಿಧನದ ಬಳಿಕ ಶೆಹನಾಜ್​ ಅವರು ಮಾನಸಿಕವಾಗಿ ಕುಸಿದುಹೋಗಿದ್ದಾರೆ. ಅವರು ಈ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ.

‘ಇಂದು ಶೆಹನಾಜ್​ ಅವರನ್ನು ನೋಡಿದರೆ ಜೀವ ನಡುಗುತ್ತದೆ. ಸಿದ್ದಾರ್ಥ್​ ಮತ್ತು ಶೆಹನಾಜ್​ ರೀತಿ ಪ್ರೇಮಿಗಳಾಗಿರಬೇಕು ಅಂತ ಅನೇಕರು ಬಯಸುತ್ತಾರೆ. ಅವರ ಸಂಬಂಧ ಅಷ್ಟು ಚೆನ್ನಾಗಿತ್ತು. ಶೆಹನಾಜ್​ ಮತ್ತು ಸಿದ್ದಾರ್ಥ್​ ಸಂಬಂಧವು ಗಂಡ-ಹೆಂಡತಿ ಸಂಬಂಧಕ್ಕಿಂತ ಏನೂ ಕಡಿಮೆ ಆಗಿರಲಿಲ್ಲ. ಅದನ್ನು ಬರೀ ಸ್ನೇಹ ಎನ್ನಲು ಸಾಧ್ಯವಿಲ್ಲ. ಗರ್ಲ್​ಫ್ರೆಂಡ್​-ಭಾಯ್​ಫ್ರೆಂಡ್​ ಸಂಬಂಧ ಎನ್ನಲೂ ಆಗುವುದಿಲ್ಲ. ರೋಮಿಯೋ-ಜೂಲಿಯಟ್​ ರೀತಿ ಶೆಹನಾಜ್​-ಸಿದ್ದಾರ್ಥ್​ ಸಂಬಂಧವನ್ನು ಕೂಡ ಜನರು ಕೊನೆಯವರೆಗೆ ನೆನಪಿಟ್ಟುಕೊಳ್ಳುತ್ತಾರೆ’ ಎಂದು ಮಾಜಿ ಬಿಗ್​ ಬಾಸ್​ ಸ್ಪರ್ಧಿ ಪವಿತ್ರಾ ಪೂನಿಯಾ ಹೇಳಿದ್ದಾರೆ.

ಇದನ್ನೂ ಓದಿ:

ಮದುವೆ ತಯಾರಿಯಲ್ಲಿದ್ದ ಸಿದ್ದಾರ್ಥ್​ ಶುಕ್ಲಾ ಮತ್ತು ಶೆಹನಾಜ್​ ಗಿಲ್​​ ; ಮೂರು ತಿಂಗಳಿರುವಾಗಲೇ ನಡೆಯಿತು ದುರಂತ

ಸಿದ್ದಾರ್ಥ್​ ಶುಕ್ಲಾ ಸಾವಿನ ಬಗ್ಗೆ ನಗುತ್ತಾ ಮಾತನಾಡಿದ್ದ ಸಲ್ಮಾನ್​ ಖಾನ್​: ಶಾಕಿಂಗ್​ ವಿಡಿಯೋ ವೈರಲ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada