Akshay Kumar: ಅಕ್ಷಯ್ ಕುಮಾರ್ ತಾಯಿಯ ಸ್ಥಿತಿ ಗಂಭೀರ; ಇಂಗ್ಲೆಂಡ್​ನಿಂದ ಶೂಟಿಂಗ್ ಬಿಟ್ಟು ಬಂದ ನಟ

ಕಳೆದೊಂದು ತಿಂಗಳಿನಿಂದ ತಮ್ಮ ಸಿಂಡ್ರೆಲಾ ಸಿನಿಮಾ ಶೂಟಿಂಗ್​ಗಾಗಿ ಇಂಗ್ಲೆಂಡ್​ ಪ್ರವಾಸದಲ್ಲಿದ್ದ ಅಕ್ಷಯ್ ಕುಮಾರ್ ತಾಯಿಯ ಆರೋಗ್ಯ ವಿಚಾರಿಸಲು ಇಂದು ಮುಂಜಾನೆ ಮುಂಬೈಗೆ ವಾಪಾಸಾಗಿದ್ದಾರೆ.

Akshay Kumar: ಅಕ್ಷಯ್ ಕುಮಾರ್ ತಾಯಿಯ ಸ್ಥಿತಿ ಗಂಭೀರ; ಇಂಗ್ಲೆಂಡ್​ನಿಂದ ಶೂಟಿಂಗ್ ಬಿಟ್ಟು ಬಂದ ನಟ
ಮುಂಬೈಗೆ ಬಂದಿಳಿದ ಅಕ್ಷಯ್ ಕುಮಾರ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 06, 2021 | 8:44 PM

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ತಾಯಿಯ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದೊಂದು ತಿಂಗಳಿನಿಂದ ತಮ್ಮ ಸಿಂಡ್ರೆಲಾ ಸಿನಿಮಾ ಶೂಟಿಂಗ್​ಗಾಗಿ ಇಂಗ್ಲೆಂಡ್​ ಪ್ರವಾಸದಲ್ಲಿದ್ದ ಅಕ್ಷಯ್ ಕುಮಾರ್ ಇಂದು ಮುಂಜಾನೆ ಮುಂಬೈಗೆ ವಾಪಾಸಾಗಿದ್ದಾರೆ. ಸಿನಿಮಾದ ಶೂಟಿಂಗನ್ನು ಅರ್ಧಕ್ಕೇ ನಿಲ್ಲಿಸಿ ಮುಂಬೈಗೆ ಬಂದಿರುವ ನಟ ಅಕ್ಷಯ್ ಕುಮಾರ್ ಹೀರಾನಂದಾನಿ ಆಸ್ಪತ್ರೆಗೆ ತೆರಳಿ ತಾಯಿಯ ಆರೋಗ್ಯ ವಿಚಾರಿಸಿದ್ದಾರೆ.

ಅಕ್ಷಯ್ ಕುಮಾರ್ ತಮ್ಮ ತಾಯಿ ಅರುಣಾ ಭಾಟಿಯಾ ಅವರೊಂದಿಗೆ ಬಹಳ ಆಪ್ತ ಸಂಬಂಧ ಹೊಂದಿದ್ದರು. ಹೀಗಾಗಿ, ಅಮ್ಮ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಯುತ್ತಿದ್ದಂತೆ ಇಂಗ್ಲೆಂಡ್​ನಿಂದ ವಾಪಾಸ್ ಬಂದಿದ್ದಾರೆ. ಕೆಲವು ದಿನಗಳಿಂದ ಅರುಣಾ ಭಾಟಿಯಾ ಅವರಿಗೆ ಅನಾರೋಗ್ಯ ಕಾಡುತ್ತಿತ್ತು. ಹೀಗಾಗಿ, ಎರಡು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ತನ್ನ ಅಗತ್ಯವಿಲ್ಲದ ಸಿಂಡ್ರೆಲಾ ಸಿನಿಮಾದ ಬೇರೆ ಸೀನ್​ಗಳನ್ನು ಶೂಟ್ ಮಾಡಿಕೊಳ್ಳಲು ಅಕ್ಷಯ್ ಕುಮಾರ್ ತಮ್ಮ ಸಿನಿಮಾದ ನಿರ್ಮಾಪಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಇಡೀ ಚಿತ್ರತಂಡ ಕೆಲವು ವಾರಗಳಿಂದ ಇಂಗ್ಲೆಂಡ್​ನಲ್ಲಿ ಶೂಟಿಂಗ್​ನಲ್ಲಿ ಬ್ಯುಸಿಯಾಗಿದೆ. ಹೀಗಾಗಿ, ತಾಯಿಯ ಆರೋಗ್ಯ ನೋಡಿಕೊಂಡು ಬೇಗ ವಾಪಾಸ್ ಬರುವುದಾಗಿ ಅವರು ನಿರ್ದೇಶಕರಿಗೆ ತಿಳಿಸಿ ತುರ್ತಾಗಿ ಮುಂಬೈಗೆ ವಾಪಾಸಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವರ್ಷ ಸಾಲು ಸಾಲು ಚಿತ್ರಗಳ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ಅಕ್ಷಯ್ ಕುಮಾರ್ ಅವರ ಕೆಲವು ಸಿನಿಮಾಗಳು ಈಗಾಗಲೇ ರಿಲೀಸ್ ಆಗಿವೆ. ಈಗಾಗಲೇ ಸಾರಾ ಅಲಿ ಖಾನ್ ಮತ್ತು ಧನುಷ್ ಜೊತೆಗೆ ಅತ್ರಂಗಿ ರೇ ಸಿನಿಮಾದ ಶೂಟಿಂಗ್ ಮುಗಿಸಿರುವ ಅಕ್ಷಯ್ ಕುಮಾರ್ ಬಚ್ಚನ್ ಪಾಂಡೆ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಹಾಗೇ, ಪೃಥ್ವಿರಾಜ್ ಚೌಹಾಣ್ ಅವರ ಜೀವನಕಥೆಯನ್ನು ಆಧರಿಸಿದ ಪೃಥ್ವಿರಾಜ್ ಸಿನಿಮಾದಲ್ಲಿ ಕೂಡ ಅಕ್ಷಯ್ ಕುಮಾರ್ ನಟಿಸಲಿದ್ದಾರೆ. ಬಳಿಕ ರೋಹಿತ್ ಶೆಟ್ಟಿಯ ಸೂರ್ಯವಂಶಿ ಸಿನಿಮಾ ಈ ವರ್ಷ ರಿಲೀಸ್ ಆಗುವ ಸಾಧ್ಯತೆಯಿದೆ. ಇದಿಷ್ಟೇ ಅಲ್ಲದೆ ರಕ್ಷಾಬಂಧನ ಮತ್ತು ರಾಮ್ ಸೇತು ಸಿನಿಮಾಗಳನ್ನು ಕೂಡ ಅಕ್ಷಯ್ ಕುಮಾರ್ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Akshay Kumar: ಅಕ್ಷಯ್ ಕುಮಾರ್ ಆಡಿದ ಒಂದೇ ಮಾತಿಗೆ ಬಾಯ್ಮುಚ್ಚಿದ ಕಪಿಲ್ ಶರ್ಮಾ

Sidharth Shukla: ಸಿದ್ಧಾರ್ಥ್ ಶುಕ್ಲಾ ನಿಧನಕ್ಕೆ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಬಾಲಿವುಡ್ ತಾರೆಯರ ಸಂತಾಪ

(Akshay Kumar Flies back TO Mumbai From UK as Because his Mother Health is Critical and in ICU)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ