ಗುಜರಿ ವಸ್ತುಗಳಿಂದಲೇ ನಿರ್ಮಾಣವಾಯ್ತು 14 ಅಡಿ ಎತ್ತರದ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ!

ಆಂಧ್ರದ ಗುಂಟೂರು ಜಿಲ್ಲೆಯ ತೆನಾಲಿಯ ಕೆ. ವೆಂಕಟೇಶ್ವರ ರಾವ್ ಹಾಗೂ ಅವರ ಮಗ ರವಿಚಂದ್ರ ಈ ಪ್ರತಿಮೆಯನ್ನು ನಿರ್ಮಿಸಿದ್ದು, ಸೆ. 16ರಂದು ಬೆಂಗಳೂರಿನಲ್ಲಿ ಈ ವಿಶೇಷವಾದ ಪ್ರತಿಮೆಯನ್ನು ಬಿಜೆಪಿ ಕಾರ್ಪೋರೇಟರ್ ಮೋಹನ್ ರಾಜು ಪ್ರತಿಷ್ಠಾಪನೆ ಮಾಡಲಿದ್ದಾರೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಅಪ್ಪ-ಮಗ ಸೇರಿ ಗುಜರಿ ವಸ್ತುಗಳನ್ನು ಬಳಸಿ 14 ಅಡಿ ಎತ್ತರದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಸುಮಾರು 2 ಟನ್​ ಆಟೋಮೊಬೈಲ್ ಸ್ಕ್ರ್ಯಾಪ್​ನಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಆಂಧ್ರದ ಗುಂಟೂರು ಜಿಲ್ಲೆಯ ತೆನಾಲಿಯ ಕೆ. ವೆಂಕಟೇಶ್ವರ ರಾವ್ ಹಾಗೂ ಅವರ ಮಗ ರವಿಚಂದ್ರ ಈ ಪ್ರತಿಮೆಯನ್ನು ನಿರ್ಮಿಸಿದ್ದು, ಸೆ. 16ರಂದು ಬೆಂಗಳೂರಿನಲ್ಲಿ ಈ ವಿಶೇಷವಾದ ಪ್ರತಿಮೆಯನ್ನು ಬಿಜೆಪಿ ಕಾರ್ಪೋರೇಟರ್ ಮೋಹನ್ ರಾಜು ಪ್ರತಿಷ್ಠಾಪನೆ ಮಾಡಲಿದ್ದಾರೆ. 2 ತಿಂಗಳ ಕಾಲ ಶ್ರಮ ವಹಿಸಿ ಈ ಪ್ರತಿಮೆ ನಿರ್ಮಿಸಲಾಗಿದ್ದು, ಇದಕ್ಕಾಗಿ ಹೈದರಾಬಾದ್, ವಿಶಾಖಪಟ್ಟಣಂ, ಚೆನ್ನೈ, ಗುಂಟೂರಿನಿಂದ ಆಟೋಮೊಬೈಲ್ ತ್ಯಾಜ್ಯಗಳನ್ನು ಸಂಗ್ರಹಿಸಿ ತರಲಾಗಿತ್ತು. ಬೈಕ್ ಚೈನ್, ಗೇರ್ ವೀಲ್, ಕಬ್ಬಿಣದ ರಾಡುಗಳು, ಸ್ಕ್ರೂ, ನಟ್, ಬೋಲ್ಟ್​ಗಳನ್ನು ಬಳಸಿ ನರೇಂದ್ರ ಮೋದಿ ಅವರ ಪ್ರತಿಮೆ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ:  Narendra Modi in Aligarh ಉತ್ತರ ಪ್ರದೇಶದ ಡಬಲ್ ಎಂಜಿನ್ ಸರ್ಕಾರವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ಸೆ.23-25ರವರೆಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ; ಕ್ವಾಡ್ ಶೃಂಗಸಭೆಯಲ್ಲಿ ಭಾಗಿ

Click on your DTH Provider to Add TV9 Kannada