ಸೆ.23-25ರವರೆಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ; ಕ್ವಾಡ್ ಶೃಂಗಸಭೆಯಲ್ಲಿ ಭಾಗಿ

ಸೆಪ್ಟೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್​​ನಲ್ಲಿ ನಡೆಯಲಿರುವ ವಿಶ್ವಸಂಸ್ಥೆ 76ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಲಿದ್ದಾರೆ.

ಸೆ.23-25ರವರೆಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ; ಕ್ವಾಡ್ ಶೃಂಗಸಭೆಯಲ್ಲಿ ಭಾಗಿ
ಪ್ರಧಾನಿ ಮೋದಿ
Follow us
TV9 Web
| Updated By: Lakshmi Hegde

Updated on:Sep 14, 2021 | 12:05 PM

ಪ್ರಧಾನಿ ನರೇಂದ್ರ ಮೋದಿ (PM Narendra Modi)ಯವರು ಆರು ತಿಂಗಳ ನಂತರ ವಿದೇಶ ಪ್ರವಾಸಕ್ಕೆ ತೆರಳಲು ಸಿದ್ಧರಾಗುತ್ತಿದ್ದಾರೆ. ಸೆಪ್ಟೆಂಬರ್​ 23-25ರವರೆಗೆ ಮೂರು ದಿನಗಳ ಕಾಲ ಯುಎಸ್​ ಪ್ರವಾಸ ಮಾಡಲಿದ್ದು, ಸೆ.24ರಂದು ಅಮೆರಿಕ ಶ್ವೇತ ಭವನದಲ್ಲಿ ನಡೆಯಲಿರುವ ಕ್ವಾಡ್​ ನಾಯಕರ ಶೃಂಗಸಭೆ (ಕ್ವಾಡ್​​ ಭದ್ರತಾ ಸಂವಾದ-Quad summit) ಪಾಲ್ಗೊಳ್ಳಲಿದ್ದಾರೆ. ಹಾಗೇ, ವಿಶ್ವಸಂಸ್ಥೆ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್​ ಆಯೋಜಿಸಿರುವ  ಈ ಕ್ವಾಡ್​ ಶೃಂಗಸಭೆಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನೀಸ್ ಪ್ರಧಾನಿ ಯೋಶಿಹೈಡೆ ಸುಗಾ ಕೂಡ ಪಾಲ್ಗೊಳ್ಳಲಿದ್ದಾರೆ. 

ಕಳೆದ ವರ್ಷ ಕೊವಿಡ್​ 19 ಸಾಂಕ್ರಾಮಿಕ ಶುರುವಾದ ಮೇಲೆ ಪ್ರಧಾನಿ ಮೋದಿಯವರು ಇದು ಎರಡನೇ ಬಾರಿಗೆ ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಅದರಲ್ಲೂ ಅಮೆರಿಕದಲ್ಲಿ ಅಧ್ಯಕ್ಷರ ಬದಲಾವಣೆ ಆದ ಬಳಿಕ ಮೊದಲ ಬಾರಿಗೆ ಅಲ್ಲಿಗೆ ತೆರಳುತ್ತಿದ್ದಾರೆ. ಬೈಡನ್ ಹಾಗೂ ಮೋದಿ ಈಗಾಗಲೇ ಹಲವು ಬಾರಿ ಫೋನ್​​ನಲ್ಲಿ ಮಾತನಾಡಿಕೊಂಡಿದ್ದರೂ ಮುಖತಃ ಭೇಟಿ ಆಗಿರಲಿಲ್ಲ. ಈ ಮೂರು ದಿನಗಳ ಭೇಟಿ ವೇಳೆ ಅಮೆರಿಕದ ಹೊಸ ಅಧ್ಯಕ್ಷ ಜೋ ಬೈಡನ್ ಜತೆ ದ್ವಿಪಕ್ಷೀಯ ಮಾತುಕತೆಯನ್ನೂ ಪ್ರಧಾನಿ ಮೋದಿ ನಡೆಸಲಿದ್ದಾರೆ.

ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್​ ನಾಯಕರನ್ನೊಳಗೊಂಟ ಕ್ವಾಡ್​ ಶೃಂಗಸಭೆಯನ್ನು ಈ ಬಾರಿ ಮಾರ್ಚ್​ನಲ್ಲಿ ಜೋ ಬೈಡನ್​ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಿದ್ದರು. ಇದೀಗ ನಾಲ್ಕೂ ರಾಷ್ಟ್ರಗಳ ನಾಯಕರು ಮುಖತಃ ಭೇಟಿಯಾಗಿ ಸಭೆ ನಡೆಸುತ್ತಿದ್ದಾರೆ. ಈ ಶೃಂಗಸಭೆಯಲ್ಲಿ ನಾಯಕರು ಜಾಗತಿಕ ಸಮಸ್ಯೆಗಳಾದ,  ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಸಂಪರ್ಕ ಮತ್ತು ಮೂಲಸೌಕರ್ಯ, ಸೈಬರ್ ಭದ್ರತೆ, ಸಮುದ್ರ ಭದ್ರತೆ, ಮಾನವೀಯ ನೆರವು/ವಿಪತ್ತು ಪರಿಹಾರ, ಹವಾಮಾನ ಬದಲಾವಣೆ ಮತ್ತು ಶಿಕ್ಷಣದ ಬಗ್ಗೆ ಚರ್ಚಿಸಲಿದ್ದಾರೆ. ಪರಸ್ಪರ ದೃಷ್ಟಿಕೋನ, ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.  ಅದರೊಂದಿಗೆ ಪ್ರಮುಖವಾಗಿ ಕೊವಿಡ್​ 19 ಹೋರಾಟದ ಬಗ್ಗೆಯೂ ವ್ಯಾಪಕ ವಿಮರ್ಶೆ ನಡೆಯಲಿದೆ ಎನ್ನಲಾಗಿದೆ.

ಹಾಗೇ, ಸೆಪ್ಟೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್​​ನಲ್ಲಿ ನಡೆಯಲಿರುವ ವಿಶ್ವಸಂಸ್ಥೆ 76ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಲಿದ್ದಾರೆ. ಕೊವಿಡ್​ 19ನಿಂದ ಚೇತರಿಸಿಕೊಳ್ಳುವ ಮೂಲಕ ಸ್ಥಿತಿಸ್ಥಾಪಕತ್ವ ನಿರ್ಮಾಣ, ಸುಸ್ಥಿರತೆಯ ಪುನರ್​ನಿರ್ಮಾಣ, ಈ ಭೂಮಿಯ ಅಗತ್ಯಗಳಿಗೆ ಸ್ಪಂದನೆ, ಮಾನವ ಹಕ್ಕುಗಳನ್ನು ಗೌರವಿಸುವುದು, ವಿಶ್ವಸಂಸ್ಥೆಯ ಪುನರುಜ್ಜೀವನ ಈ ಬಾರಿಯ ಸಾಮಾನ್ಯ ಸಭೆಯ ಥೀಮ್ ಆಗಿದೆ.

ಇದನ್ನೂ ಓದಿ: Bihar Panchayat Polls: ಪೆಟ್ರೋಲ್ ದರ ಏರಿಕೆ ಪ್ರತಿಭಟಿಸಿ ನಾಮಪತ್ರ ಸಲ್ಲಿಸಲು ಎಮ್ಮೆಯೇರಿ ಬಂದ ಅಭ್ಯರ್ಥಿ

Met Gala 2021: ಸದಾ ಮೈಮಾಟದಿಂದ ಸೆಳೆಯುತ್ತಿದ್ದ ಸುಂದರಿ ಕಿಮ್​ ಇಂದು ಹೀಗೇಕೆ ಆದ್ರು? ಇದು ಸಿನಿಮಾ ಅಲ್ಲ ರಿಯಲ್​

(PM Narendra Modi to attend Quad summit in Washington)

Published On - 12:04 pm, Tue, 14 September 21