Coronavirus cases in India: ದೇಶದಲ್ಲಿ 25,404 ಹೊಸ ಕೊವಿಡ್ ಪ್ರಕರಣ ಪತ್ತೆ, 339 ಮಂದಿ ಸಾವು

Covid 19: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 12,062 ರಷ್ಟು ಕಡಿಮೆಯಾಗಿದೆ. ಪ್ರಸ್ತುತ, ಸಕ್ರಿಯ ಪ್ರಕರಣಗಳ ಸಂಖ್ಯೆ 3,62,207 ರಷ್ಟಿದೆ. ಕೊವಿಡ್ -19 ರಿಂದ ಚೇತರಿಸಿಕೊಂಡ ಒಟ್ಟು ಜನರ ಸಂಖ್ಯೆ ಈಗ 32484159 ಕ್ಕೆ ತಲುಪಿದೆ, ಹಿಂದಿನ ದಿನ 37,127 ಹೆಚ್ಚು ಮಂದಿ ಚೇತರಿಸಿಕೊಂಡಿದ್ದಾರೆ.

Coronavirus cases in India: ದೇಶದಲ್ಲಿ 25,404 ಹೊಸ ಕೊವಿಡ್ ಪ್ರಕರಣ ಪತ್ತೆ, 339 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 14, 2021 | 10:59 AM

ದೆಹಲಿ: ಭಾರತದಲ್ಲಿಕಳೆ 24 ಗಂಟೆಗಳಲ್ಲಿ 25,404 ಹೊಸ ಕೊವಿಡ್ ಪ್ರಕರಣಗಳು ವರದಿ ಆಗಿದ್ದು ದೇಶದ ಒಟ್ಟಾರೆ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 33,289,579 ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಸತತ ಮೂರನೇ ದಿನ ದೈನಂದಿನ ಪ್ರಕರಣಗಳ ಸಂಖ್ಯೆ 30,000 ಕ್ಕಿಂತ ಕಡಿಮೆ ಆಗಿದೆ. ಸೋಮವಾರ 27,254 ಹೊಸ ಪ್ರಕರಣಗಳು ವರದಿ ಆಗಿತ್ತು. ಕಳೆದ 24 ಗಂಟೆಗಳ ಅವಧಿಯಲ್ಲಿ ಕೊವಿಡ್ -19 ನಿಂದಾಗಿ 339 ಜನರು ಸಾವನ್ನಪ್ಪಿದ್ದಾರೆ, ಸಾವಿನ ಸಂಖ್ಯೆ 4,43,213 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 12,062 ರಷ್ಟು ಕಡಿಮೆಯಾಗಿದೆ. ಪ್ರಸ್ತುತ, ಸಕ್ರಿಯ ಪ್ರಕರಣಗಳ ಸಂಖ್ಯೆ 3,62,207 ರಷ್ಟಿದೆ. ಕೊವಿಡ್ -19 ರಿಂದ ಚೇತರಿಸಿಕೊಂಡ ಒಟ್ಟು ಜನರ ಸಂಖ್ಯೆ ಈಗ 32484159 ಕ್ಕೆ ತಲುಪಿದೆ, ಹಿಂದಿನ ದಿನ 37,127 ಹೆಚ್ಚು ಮಂದಿ ಚೇತರಿಸಿಕೊಂಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಕೊವಿಡ್ -19 ಗಾಗಿ 14,30,891 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ವರ್ಷ ಜನವರಿ 16 ರಂದು ಆರಂಭವಾದ ರಾಷ್ಟ್ರವ್ಯಾಪಿ ಲಸಿಕೆ ಕಾರ್ಯಕ್ರಮದ ಅಡಿಯಲ್ಲಿ ಇಲ್ಲಿಯವರೆಗೆ 75.22 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.

ಕೇರಳದಲ್ಲಿ 15,058 ಹೊಸ ಕೊವಿಡ್ ಪ್ರಕರಣಗಳು, 28,439 ಚೇತರಿಕೆಗಳು ಮತ್ತು 99 ಸಾವುಗಳು ದಾಖಲಾಗಿವೆ. ಕೊವಿಡ್ -19 ರ ದೃಷ್ಟಿಯಿಂದ, ಜಿಲ್ಲೆಯಲ್ಲಿ ‘ಪಿತ್ರಿ ಪಕ್ಷ ಮೇಳ’ವನ್ನು ಆಯೋಜಿಸಲಾಗುವುದಿಲ್ಲ. ರಾಜ್ಯ ಮತ್ತು ಹೊರಗಿನ ಭಕ್ತರು ಭೇಟಿ ನೀಡುವುದನ್ನು ತಪ್ಪಿಸಬೇಕು. ದೊಡ್ಡ ಗುಂಪುಗಳಲ್ಲಿ ಬರುವ ಜನರ ಮೇಲೆ ನಿಷೇಧವಿರುತ್ತದೆ. ಹೊರಗಿನಿಂದ ಬರುವ ಜನರಿಗೆ ಕೊವಿಡ್ ಪರೀಕ್ಷೆ ಕಡ್ಡಾಯ ಎಂದುಗಯಾ ಜಿಲ್ಲಾ ಆಡಳಿತ ಹೇಳಿದೆ.

ಜಾರ್ಖಂಡ್ ಇಂದು ಆರು ಹೊಸ ಕೊವಿಡ್ -19 ಪ್ರಕರಣಗಳು, 16 ಚೇತರಿಕೆ ಮತ್ತು ಶೂನ್ಯ ಸಾವುಗಳನ್ನು ವರದಿ ಮಾಡಿದೆ. ಸಕ್ರಿಯ ಪ್ರಕರಣಗಳು 117 ಆಗಿದ್ದು ರಾಜ್ಯದಲ್ಲಿ ಚೇತರಿಕೆ ದರ 98.49 ಆಗಿದೆ.

ಥಾಣೆ 249 ಹೊಸ ಕೊವಿಡ್ -19 ಪ್ರಕರಣಗಳು, 8 ಸಾವುಗಳು ಥಾಣೆಯಲ್ಲಿ 249 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,54,893 ಕ್ಕೆ ತಲುಪಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಈ ಹೊಸ ಪ್ರಕರಣಗಳು ಸೋಮವಾರ ವರದಿಯಾಗಿವೆ ಎಂದು ಅವರು ಹೇಳಿದರು. ವೈರಲ್ ಸೋಂಕಿನಿಂದ ಇನ್ನೂ ಎಂಟು ಜನರು ಸಾವನ್ನಪ್ಪಿದ್ದಾರೆ, ಇದು ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯನ್ನು 11,351 ಕ್ಕೆ ಏರಿದೆ ಅವರು ಹೇಳಿದರು. ಥಾಣೆಯಲ್ಲಿ ಕೊವಿಡ್ ಸಾವಿನ ಪ್ರಮಾಣವು 2.04 ಶೇಕಡದಲ್ಲಿತ್ತು. ನೆರೆಯ ಪಾಲ್ಘರ್ ಜಿಲ್ಲೆಯಲ್ಲಿ ಕೊವಿಡ್ -19 ಪ್ರಕರಣಗಳ ಸಂಖ್ಯೆ 1,35,147 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 3,272 ಕ್ಕೆ ತಲುಪಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:  ‘ದೇಶದಲ್ಲಿ ಕೊರೊನಾ ವೈರಸ್​ 3ನೇ ಅಲೆ ಪ್ರಾರಂಭ; ಮಕ್ಕಳಿಗೆ ಇಲ್ಲ ಅಪಾಯ, ಮಾರಣಾಂತಿಕವೂ ಅಲ್ಲ

(India reports 25,404 new Covid cases and 339 more deaths in last 24 hours as per health ministry)

Published On - 10:42 am, Tue, 14 September 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್