Narendra Modi in Aligarh ಉತ್ತರ ಪ್ರದೇಶದ ಡಬಲ್ ಎಂಜಿನ್ ಸರ್ಕಾರವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ
ಉತ್ತರ ಪ್ರದೇಶ ತನ್ನ ಗೂಂಡಾ -ರಾಜ್, ಮಾಫಿಯಾ-ರಾಜ್ ಮತ್ತು ದರೋಡೆಕೋರರ ಮುಕ್ತ ಓಟಕ್ಕಾಗಿ ಕುಖ್ಯಾತವಾಗಿತ್ತು, ಆದರೆ ಯೋಗಿ ಸರ್ಕಾರದ ಅಡಿಯಲ್ಲಿ, ಇದೆಲ್ಲವೂ ಸಂಪೂರ್ಣವಾಗಿ ನಿಂತುಹೋಗಿದೆ. ದರೋಡೆಕೋರರು, ಮಾಫಿಯಾಗಳು ಮತ್ತು ಗೂಂಡಾಗಳನ್ನು ಜೈಲಿನಲ್ಲಿರಿಸಲಾಗಿದೆ ಎಂದಿದ್ದಾರೆ ಮೋದಿ.
ಅಲಿಗಡ: ಉತ್ತರಪ್ರದೇಶದ ಅಲಿಗಡದಲ್ಲಿ (Aligarh) ರಾಜ ಮಹೇಂದ್ರ ಪ್ರತಾಪಸಿಂಹ ರಾಜ್ಯ ವಿಶ್ವವಿದ್ಯಾಲಯದ (Raja Mahendra Pratap Singh State University) ಅಡಿಗಲ್ಲು ಹಾಕಿದ ನಂತರ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಯೋಗಿ ಆದಿತ್ಯನಾಥ ಸರ್ಕಾರವನ್ನು ಶ್ಲಾಘಿಸಿದರು ಮತ್ತು ಉತ್ತರ ಪ್ರದೇಶವು ಅಭಿವೃದ್ಧಿ ಅಭಿಯಾನದಲ್ಲಿ ದೇಶವನ್ನು ಮುನ್ನಡೆಸುತ್ತಿದೆ ಎಂದು ಹೇಳಿದರು. ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಉತ್ತರ ಪ್ರದೇಶವು ರಾಜ್ಯ ಮತ್ತು ಕೇಂದ್ರದಲ್ಲಿನ ಡಬಲ್ ಎಂಜಿನ್ ಸರ್ಕಾರದಿಂದ ಹೆಚ್ಚು ಪ್ರಯೋಜನ ಪಡೆಯುತ್ತಿದೆ. ಉತ್ತರ ಪ್ರದೇಶವು ಭಾರತದ ಬೆಳವಣಿಗೆಗೆ ಒಂದು ಮಿತಿ ಮತ್ತು ಅಡ್ಡಿಯಾಗಿ ಪರಿಗಣಿಸಲ್ಪಟ್ಟ ಒಂದು ಕಾಲವಿತ್ತು, ಆದರೆ ಇಂದು ರಾಜ್ಯದಲ್ಲಿ ಮಾಡಲಾಗುತ್ತಿರುವ ಡಜನ್ಗಟ್ಟಲೆ ಯೋಜನೆಗಳಿಂದಾಗಿ, ಉತ್ತರ ಪ್ರದೇಶ ತನ್ನ ಇಮೇಜ್ ಅನ್ನು ಸಂಪೂರ್ಣವಾಗಿ ಬದಲಿಸಿದೆ ಮತ್ತು ಇಂದು ಭಾರತದ ಬೆಳವಣಿಗೆಗೆ ಉತ್ತೇಜನ ನೀಡುತ್ತಿದೆ.
“ಉತ್ತರ ಪ್ರದೇಶ ತನ್ನ ಗೂಂಡಾ -ರಾಜ್, ಮಾಫಿಯಾ-ರಾಜ್ ಮತ್ತು ದರೋಡೆಕೋರರ ಮುಕ್ತ ಓಟಕ್ಕಾಗಿ ಕುಖ್ಯಾತವಾಗಿತ್ತು, ಆದರೆ ಯೋಗಿ ಸರ್ಕಾರದ ಅಡಿಯಲ್ಲಿ, ಇದೆಲ್ಲವೂ ಸಂಪೂರ್ಣವಾಗಿ ನಿಂತುಹೋಗಿದೆ. ದರೋಡೆಕೋರರು, ಮಾಫಿಯಾಗಳು ಮತ್ತು ಗೂಂಡಾಗಳನ್ನು ಜೈಲಿನಲ್ಲಿರಿಸಲಾಗಿದೆ ಎಂದಿದ್ದಾರೆ ಮೋದಿ. ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞ ಮತ್ತು ಸಮಾಜ ಸುಧಾರಕರಾದ ರಾಜ ಮಹೇಂದ್ರ ಪ್ರತಾಪ ಸಿಂಹ ಅವರ ಸ್ಮರಣಾರ್ಥ ಮತ್ತು ಗೌರವಾರ್ಥವಾಗಿ ಉತ್ತರ ಪ್ರದೇಶ ಸರ್ಕಾರವು ವಿಶ್ವವಿದ್ಯಾಲಯವನ್ನು ಸ್ಥಾಪಿಸುತ್ತಿದೆ. ಇದನ್ನು ಲೋಧಾ ಗ್ರಾಮ ಮತ್ತು ಅಲಿಗಡದ ಕೋಲ್ ತೆಹಶಿಲ್ನ ಮುಸೆಪುರ್ ಕರೀಮ್ ಜಾರೌಲಿ ಗ್ರಾಮದಲ್ಲಿ ಒಟ್ಟು 92 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದೆ.
ಕಳೆದ ತಿಂಗಳು ನಿಧನರಾದ ಬಿಜೆಪಿ ನಾಯಕ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರನ್ನು ಸ್ಮರಿಸುವ ಮೂಲಕ ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. “ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುವಾಗ, ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ರಾಜ ಮಹೇಂದ್ರ ಪ್ರತಾಪ್ ಸಿಂಹ ಮತ್ತು ಇತರರ ಕೊಡುಗೆಗಳ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ” ಎಂದು ಅವರು ಹೇಳಿದರು. ರಾಜ ಮಹೇಂದ್ರ ಪ್ರತಾಪಸಿಂಹ ಅವರೇ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಭೂಮಿಯನ್ನು ಮಂಜೂರು ಮಾಡಿದ್ದರು.
“ಒಬ್ಬ ಪ್ರಧಾನ ಮಂತ್ರಿಯಾಗಿ, ನಾನು ಅಂತಹ ದೂರದೃಷ್ಟಿಯ ಹೆಸರಿನ ವಿಶ್ವವಿದ್ಯಾಲಯದ ಅಡಿಪಾಯವನ್ನು ಹಾಕುತ್ತಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಮೋದಿ. ರಕ್ಷಣಾ ಕಾರಿಡಾರ್ ಕುರಿತು ಮಾತನಾಡಿದ ಮೋದಿ ಭಾರತವು ಕೇವಲ ಆಮದುದಾರರಾಗಿದ್ದಾಗ ಹಿಂದೆ ಇದ್ದಂತೆ ಜಾಗತಿಕ ರಕ್ಷಣಾ ರಫ್ತುದಾರನಾಗಿ ತನ್ನ ಗುರುತನ್ನು ಮೂಡಿಸುವ ಗುರಿಯೊಂದಿಗೆ ಭಾರತ ಮುಂದುವರಿಯುತ್ತಿದೆ ಎಂದು ಹೇಳಿದರು.
ಅವರು ಅಲಿಗಡದ ಪ್ರಸಿದ್ಧ ಬೀಗಗಳು ಮತ್ತು ರಕ್ಷಣಾ ಕಾರಿಡಾರ್‌ಗಳ ನಡುವೆ ಒಂದು ಸಾದೃಶ್ಯವನ್ನು ಮಾಡಿದರು. ನಗರವು ಈಗ ದೇಶದ ಗಡಿಗಳ ರಕ್ಷಣೆಗೆ ಕೊಡುಗೆ ನೀಡುತ್ತಿದೆ ಎಂದು ಹೇಳಿದರು. ಪ್ರಧಾನಿ ಮೋದಿ ನಂತರ ರಕ್ಷಣಾ ಕಾರಿಡಾರ್‌ನ ಲಕ್ನೋ ನೋಡ್‌ನಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಅಭಿವೃದ್ಧಿಗೆ ₹ 9000 ಕೋಟಿ ಘೋಷಿಸಿದರು.
2017 ರಿಂದ ಇಲ್ಲಿ ಅಧಿಕಾರದಲ್ಲಿದ್ದ ವಿರೋಧ ಪಕ್ಷವಾದ ಸಮಾಜವಾದಿ ಪಕ್ಷವನ್ನು (ಎಸ್‌ಪಿ) ತರಾಟೆಗೆ ತೆಗೆದುಕೊಂಡ ಅವರು, ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ನಡೆದ ಹಗರಣಗಳನ್ನು ಜನರು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಚಾಲ್ತಿಯಲ್ಲಿದ್ದ “ಕಾನೂನುಬಾಹಿರ” ಕಾರ್ಯವನ್ನೂ ಅವರು ಸೂಚಿಸಿದರು. “ಆದಾಗ್ಯೂ, ಯೋಗೀಜಿ ಅಧಿಕಾರದಲ್ಲಿರುವುದರಿಂದ, ಅಪರಾಧಿಗಳು ಅಪರಾಧ ಮಾಡುವ ಮೊದಲು ಎರಡು ಬಾರಿ ಯೋಚಿಸುತ್ತಾರೆ” ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಧಾನಮಂತ್ರಿ ಅಲಿಗಡಕ್ಕೆ ಭೇಟಿ ನೀಡುವುದು ದೇಶದ ಅತ್ಯಂತ ಜನನಿಬಿಡ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಈಗಾಗಲೇ ಅಭಿಯಾನವನ್ನು ಆರಂಭಿಸಿದೆ. ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಗವರ್ನರ್ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಸೇರಿದಂತೆ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: Narendra Modi in Aligarh ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನರೇಂದ್ರ ಮೋದಿ
(Narendra Modi in Aligarh praises Yogi Adityanath Uttar Pradesh’s double-engine government)
Published On - 2:24 pm, Tue, 14 September 21