AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zomato: ಜೊಮ್ಯಾಟೋ ಸಹ ಸಂಸ್ಥಾಪಕ ಗೌರವ್ ಗುಪ್ತ ರಾಜೀನಾಮೆ; ಷೇರು ಮೌಲ್ಯ ಕುಸಿತ

Gaurav Gupta : ಗೌರವ್ ಗುಪ್ತ ಜೊಮ್ಯಾಟೋ ಸಿಒಒ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಜೊಮ್ಯಾಟೋ ಷೇರುಗಳ ಮೌಲ್ಯ ಶೇ. 1ರಷ್ಟು ಕುಸಿತ ಕಂಡಿದೆ. ಗೌರವ್ ಗುಪ್ತ ಜೊಮ್ಯಾಟೋದ ವಿತರಣಾ ಮುಖ್ಯಸ್ಥರಾಗಿದ್ದರು.

Zomato: ಜೊಮ್ಯಾಟೋ ಸಹ ಸಂಸ್ಥಾಪಕ ಗೌರವ್ ಗುಪ್ತ ರಾಜೀನಾಮೆ; ಷೇರು ಮೌಲ್ಯ ಕುಸಿತ
ಜೊಮ್ಯಾಟೋ ಸಿಒಒ ಗೌರವ್ ಗುಪ್ತ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Sep 14, 2021 | 3:22 PM

ಮುಂಬೈ: ಭಾರತದ ಪ್ರಮುಖ ಫುಡ್ ಡೆಲಿವರಿ ಕಂಪನಿಯಾದ ಜೊಮ್ಯಾಟೋದ (Zomato) ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ (ಸಿಒಒ) ಗೌರವ್ ಗುಪ್ತ (Gaurav Gupta) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಜೊಮ್ಯಾಟೋದೊಂದಿಗಿನ 6 ವರ್ಷಗಳ ಸಂಬಂಧವನ್ನು ಅವರು ಕಡಿದುಕೊಂಡಿದ್ದಾರೆ. ಜೊಮ್ಯಾಟೋದಿಂದ ಮನೆ ಬಾಗಿಲಿಗೆ ದಿನಸಿ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಸೇವೆಯನ್ನು ಸೆ. 17ರಿಂದ ಸ್ಥಗಿತಗೊಳಿಸಲಾಗುವುದು ಎಂದು ಘೋಷಿಸಿದ ಬೆನ್ನಲ್ಲೇ ಜೊಮ್ಯಾಟೋ ಸಹ ಸಂಸ್ಥಾಪಕ ಗೌರವ್ ಗುಪ್ತ ರಾಜೀನಾಮೆ ನೀಡಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಜೊಮ್ಯಾಟೋ ಕಂಪನಿ ಸೆ. 17ರಿಂದ ಮನೆ ಬಾಗಿಲಿಗೆ ದಿನಸಿ ವಸ್ತುಗಳನ್ನು ತಲುಪಿಸುತ್ತಿದ್ದ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದರು. ಆನ್​ಲೈನ್​ ಫುಡ್ ಡೆಲಿವರಿ ಪ್ಲಾಟ್​ಫಾರ್ಮ್ ಜೊಮ್ಯಾಟೊ ಕಂಪನಿ ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ದಿನಸಿ ಸಾಮಗ್ರಿಗಳನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ಇದು ಗ್ರಾಹಕರಲ್ಲಿ ಬೇಸರ ಹಾಗೂ ಅಸಮಾಧಾನ ಮೂಡಿಸುತ್ತಿದೆ. ಹೀಗಾಗಿ, ಮನೆಬಾಗಿಲಿಗೆ ದಿನಸಿ ಪೂರೈಕೆ ಮಾಡುವ ಸೇವೆಯನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಜೊಮ್ಯಾಟೊ ಕಂಪನಿ ಘೋಷಿಸಿತ್ತು.

ಕಳೆದ ಜುಲೈನಲ್ಲಿ ಜೊಮ್ಯಾಟೊ ಫುಡ್ ಡೆಲಿವರಿ ಜೊತೆಗೆ ಮನೆ ಬಾಗಿಲಿಗೆ ದಿನಸಿ ವಸ್ತುಗಳನ್ನು ತಲುಪಿಸುವ ಸೇವೆಯನ್ನು ಆರಂಭಿಸಲಾಗಿತ್ತು. ಕೇವಲ 45 ನಿಮಿಷಗಳಲ್ಲಿ ಗ್ರಾಹಕರಿಗೆ ದಿನಸಿ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಆ ವಲಯದಲ್ಲಿ ಯಶಸ್ಸು ಕಾರಣಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜೊಮ್ಯಾಟೋ ದಿನಸಿ ಡೆಲಿವರಿ ಸೇವೆಯಿಂದ ಹಿಂದೆ ಸರಿದಿತ್ತು. ಅದರ ಬೆನ್ನಲ್ಲೇ ಜೊಮ್ಯಾಟೋ ಸಿಒಒ ಗೌರವ್ ಗುಪ್ತ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಗೌರವ್ ಗುಪ್ತ ಜೊಮ್ಯಾಟೋ ಸಿಒಒ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಜೊಮ್ಯಾಟೋ ಷೇರುಗಳ ಮೌಲ್ಯ ಶೇ. 1ರಷ್ಟು ಕುಸಿತ ಕಂಡಿದೆ. ಗೌರವ್ ಗುಪ್ತ ಜೊಮ್ಯಾಟೋದ ವಿತರಣಾ ಮುಖ್ಯಸ್ಥರಾಗಿದ್ದರು. ತಮ್ಮ ರಾಜೀನಾಮೆ ಬಗ್ಗೆ ಖಚಿತಪಡಿಸಿರುವ ಗೌರವ್ ಗುಪ್ತ, ನಾನು ನನ್ನ ಜೀವನದ ಮತ್ತೊಂದು ಅಧ್ಯಾಯವನ್ನು ಆರಂಭಿಸುತ್ತಿದ್ದೇನೆ. 6 ವರ್ಷಗಳ ಕಾಲ ಜೊಮ್ಯಾಟೋದ ಮುಖ್ಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವುದು ತೃಪ್ತಿ ತಂದಿದೆ. ನಾನು ಇನ್ನು ಮುಂದೆ ಕೂಡ ಜೊಮ್ಯಾಟೋವನ್ನು ಮೊದಲಿನಂತೆಯೇ ಪ್ರೀತಿಸುತ್ತೇನೆ. 6 ರ್ಷಗಳ ಹಿಂದೆ ಜೊಮ್ಯಾಟೋ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಬಹುದು ಎಂಬ ನಿರೀಕ್ಷೆಯೇ ಇಲ್ಲದೆ ಈ ಕಂಪನಿಯನ್ನು ಆರಂಭಿಸಲಾಗಿತ್ತು. ಈ 6 ವರ್ಷಗಳ ಪ್ರಯಾಣ, ಸವಾಲುಗಳನ್ನು ಮರೆಯಲು ಸಾಧ್ಯವಿಲ್ಲ. ನಾವು ಈಗ ಸಾಧನೆ ಮಾಡಿರುವ ಬಗ್ಗೆ ಬಹಳ ಹೆಮ್ಮೆಯಿದೆ. ಜೊಮ್ಯಾಟೋ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿದೆ ಎಂಬ ವಿಶ್ವಾಸವಿದೆ. ಜೊಮ್ಯಾಟೋದೊಂದಿಗಿನ ನನ್ನ ಸಂಬಂಧ ಕೊನೆಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Zomato Listing: ಝೊಮ್ಯಾಟೋ ಲಿಸ್ಟಿಂಗ್ ನಂತರ ಮೂರೇ ಟ್ರೇಡಿಂಗ್ ಸೆಷನ್​ನಲ್ಲಿ ಶೇ 95ರಷ್ಟು ಏರಿಕೆ

ಮಹಿಳಾ ಉದ್ಯೋಗಿಗಳಿಗೆ ರಜಸ್ಸು ರಜೆ ಸೌಲಭ್ಯ ನೀಡಿದ Zomato ಕಂಪನಿ

(Zomato co-founder COO Gaurav Gupta Quits as Zomato company exits e-grocery business)

Published On - 3:17 pm, Tue, 14 September 21