ಮಹಿಳಾ ಉದ್ಯೋಗಿಗಳಿಗೆ ರಜಸ್ಸು ರಜೆ ಸೌಲಭ್ಯ ನೀಡಿದ Zomato ಕಂಪನಿ
ದೆಹಲಿ: ಪ್ರತಿಷ್ಠಿತ ಫುಡ್ ಡೆಲಿವರಿ ಕಂಪನಿ ಜುಮ್ಯಾಟೋ ಮುಟ್ಟಿನ ಸಮಸ್ಯೆ ಎದುರಿಸುತ್ತಿರೋ ತನ್ನ ಮಹಿಳಾ ಉದ್ಯೋಗಿಗಳಿಗೆ ರಜೆ ಪಡೆಯುವ ಸೌಲಭ್ಯವನ್ನ ಕಲ್ಪಿಸಿಕೊಟ್ಟಿದೆ. ಈ ಸೌಲಭ್ಯವನ್ನ ತೃತೀಯ ಲಿಂಗಿ ಉದ್ಯೋಗಿಗಳಿಗೂ ವಿಸ್ತರಿಸಲಾಗಿದೆ. ವರ್ಷಕ್ಕೆ 10 ರಜಾ ದಿನಗಳನ್ನ ನೀಡಿರುವ ಕಂಪನಿಯು ಪ್ರತಿ ಋತುಚಕ್ರಕ್ಕೂ ಒಂದು ರಜೆ ಪಡೆಯುವ ಅವಕಾಶ ಕಲ್ಪಿಸಿಕೊಟ್ಟಿದೆ. ಮಹಿಳೆಯರು ಕೀಳರಿಮೆ, ಪೇಚಿಗೆ ಸಿಲುಕುವ ಅವಶ್ಯಕತೆಯಿಲ್ಲ ಈ ಕುರಿತು ಮಾತನಾಡಿರುವ ಕಂಪನಿಯ ಮುಖ್ಯಸ್ಥ ದೀಪಿಂದರ್ ಗೋಯಲ್ ಮಹಿಳೆಯರು ಹಾಗೂ ಪುರುಷರ ದೈಹಿಕ ಸಾಮರ್ಥ್ಯ ವಿಭಿನ್ನವಾಗಿದೆ. ಜೊತೆಗೆ, ಮುಟ್ಟಿನ […]
ದೆಹಲಿ: ಪ್ರತಿಷ್ಠಿತ ಫುಡ್ ಡೆಲಿವರಿ ಕಂಪನಿ ಜುಮ್ಯಾಟೋ ಮುಟ್ಟಿನ ಸಮಸ್ಯೆ ಎದುರಿಸುತ್ತಿರೋ ತನ್ನ ಮಹಿಳಾ ಉದ್ಯೋಗಿಗಳಿಗೆ ರಜೆ ಪಡೆಯುವ ಸೌಲಭ್ಯವನ್ನ ಕಲ್ಪಿಸಿಕೊಟ್ಟಿದೆ. ಈ ಸೌಲಭ್ಯವನ್ನ ತೃತೀಯ ಲಿಂಗಿ ಉದ್ಯೋಗಿಗಳಿಗೂ ವಿಸ್ತರಿಸಲಾಗಿದೆ.
ವರ್ಷಕ್ಕೆ 10 ರಜಾ ದಿನಗಳನ್ನ ನೀಡಿರುವ ಕಂಪನಿಯು ಪ್ರತಿ ಋತುಚಕ್ರಕ್ಕೂ ಒಂದು ರಜೆ ಪಡೆಯುವ ಅವಕಾಶ ಕಲ್ಪಿಸಿಕೊಟ್ಟಿದೆ.
ಮಹಿಳೆಯರು ಕೀಳರಿಮೆ, ಪೇಚಿಗೆ ಸಿಲುಕುವ ಅವಶ್ಯಕತೆಯಿಲ್ಲ ಈ ಕುರಿತು ಮಾತನಾಡಿರುವ ಕಂಪನಿಯ ಮುಖ್ಯಸ್ಥ ದೀಪಿಂದರ್ ಗೋಯಲ್ ಮಹಿಳೆಯರು ಹಾಗೂ ಪುರುಷರ ದೈಹಿಕ ಸಾಮರ್ಥ್ಯ ವಿಭಿನ್ನವಾಗಿದೆ. ಜೊತೆಗೆ, ಮುಟ್ಟಿನ ಬಗ್ಗೆ ಮಹಿಳೆಯರು ಯಾವುದೇ ರೀತಿಯ ಕೀಳರಿಮೆ ಅಥವಾ ಪೇಚಿಗೆ ಸಿಲುಕುವ ಅವಶ್ಯಕತೆಯಿಲ್ಲ. ಹಾಗಾಗಿ, ಈ ನಿರ್ಧಾರವನ್ನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಈ ರಜೆಯ ದುರ್ಬಳಕೆ ಮಾಡದಂತೆ ಸಹ ಸಲಹೆ ನೀಡಿದ್ದಾರೆ.