ನಂಜನಗೂಡು ದೇಗುಲ ತೆರವು ವಿಚಾರ: ದೇವಾಲಯ ಮರುನಿರ್ಮಾಣಕ್ಕೆ ಗ್ರಾಮಸ್ಥರ ತಯಾರಿ
Mysuru: ಸುಪ್ರೀಂಕೋರ್ಟ್ ಆದೇಶ ಪಾಲನೆ ಅನಿವಾರ್ಯ ಆಗಿದೆ. ದೇವಸ್ಥಾನ ತೆರವು ವಿಚಾರವನ್ನು ನನ್ನ ಗಮನಕ್ಕೆ ತಂದು ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಮೈಸೂರು: ದೇಗುಲ ತೆರವುಗೊಳಿಸಿದ ದೇಗುಲದ ಜಾಗದ ಪಕ್ಕದಲ್ಲೇ ಹುಚ್ಚಗನಿಯಲ್ಲಿ ಮಹದೇವಮ್ಮ ದೇಗುಲ ಮರುನಿರ್ಮಾಣಕ್ಕೆ ಜನರು ಯೋಜನೆ ಹಾಕಿಕೊಂಡಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಚ್ಚಗನಿಯಲ್ಲಿ ದೇಗುಲ ತೆರವುಗೊಳಿಸಲಾಗಿತ್ತು. ಈ ಬಗ್ಗೆ, ಸಿದ್ದರಾಮಯ್ಯ ಟ್ವೀಟ್ ಮಾಡಿ ವಿರೋಧ ವ್ಯಕ್ತಪಡಿಸಿದ್ದರು. ಜನರು ಕೂಡ ಅಸಮಾಧಾನ ಹೊರಹಾಕಿದ್ದರು. ದೇಗುಲ ತೆರವುಗೊಳಿಸಿದ್ದ ಜಿಲ್ಲಾಡಳಿತದ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ. ಗ್ರಾಮಸ್ಥರು, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಗುಲ ಮರುನಿರ್ಮಾಣಕ್ಕೆ ಗ್ರಾಮಸ್ಥ ಜಾಗ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಳಸ ಪ್ರತಿಷ್ಠಾಪಿಸಿ ಹೋಮ, ಪೂಜೆ ಮಾಡಿದ್ದಾರೆ.
ನಂಜನಗೂಡಿನ ದೇವಸ್ಥಾನ ತೆರವು ಮಾಡಿದ ವಿಚಾರವಾಗಿ ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ಪ್ರತಿಕ್ರಿಯೆ ನೀಡಿದ್ದಾರೆ. ಧಾರ್ಮಿಕ ಕಟ್ಟಡ ವಿಚಾರವಾಗಿ ಸಿಎಸ್ ಒತ್ತಡ ಹೇರುತ್ತಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಅರ್ಥೈಸಿ ಹೇಳಿರಬಹುದು. ಸುಪ್ರೀಂಕೋರ್ಟ್ ಆದೇಶ ಪಾಲನೆ ಅನಿವಾರ್ಯ ಆಗಿದೆ. ದೇವಸ್ಥಾನ ತೆರವು ವಿಚಾರವನ್ನು ನನ್ನ ಗಮನಕ್ಕೆ ತಂದು ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಈ ಮಧ್ಯೆ, ಸಿದ್ದರಾಮಯ್ಯ ಟ್ವೀಟ್ ನನಗೆ ಬೇಸರ ತರಿಸಿದೆ. ಬಹುಶಃ ಇಂತಹ ಬೇಜವಾಬ್ದಾರಿ ಹೇಳಿಕೆ ಅವರದ್ದಾಗಿರುವುದಿಲ್ಲ. ಅವರ ಹೆಸರಲ್ಲಿ ಬೇರೆ ಯಾರೋ ಟ್ವೀಟ್ ಮಾಡಿರಬಹುದು. ಸಿಎಂ ಆಗಿದ್ದವರು ಅವರಿಗೆ ನ್ಯಾಯಾಲಯದ ಆದೇಶದ ಅರಿವಿದೆ. ಇಲ್ಲಿ ಕೇವಲ ನಂಜನಗೂಡು ದೇವಸ್ಥಾನ ತೆರವು ವಿಚಾರ ಮಾತ್ರ ಹೈಲೈಟ್ ಮಾಡಲಾಗುತ್ತಿದೆ. ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ತಿಳಿಸಿದ್ದಾರೆ. ಪ್ರತಾಪ್ ಸಿಂಹ ಕೂಡ ಈ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ.
Concerned officials have not followed due process. An alternate site should have been provided if the demolition was deemed necessary.@BJP4Karnataka govt is responsible for this act against Hindu sentiments. An alternate arrangements should be made immediately to restore.
2/2 pic.twitter.com/5PooC7TEzY
— Siddaramaiah (@siddaramaiah) September 11, 2021
ಹಿಂದೂ ದೇಗುಲಗಳ ರಕ್ಷಣೆಗೆ ಪ್ರತ್ಯೇಕ ಕಾಯ್ದೆಯ ಅವಶ್ಯಕತೆ ಇದೆ. ಬೇರೆ ಧರ್ಮಗಳಲ್ಲಿ ಪ್ರತ್ಯೇಕ ಕಾಯ್ದೆ ಇದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಬೇಕಿದೆ. ಈ ಮೂಲಕ ದೇಗುಲಗಳ ರಕ್ಷಣೆ ಸಾಧ್ಯ ಆಗಲಿದೆ. ಈ ಬಗ್ಗೆ ಶಾಸಕರ ಸಭೆಯಲ್ಲಿ ನಾನು ಸಿಎಂ ಗಮನಕ್ಕೆ ತರುತ್ತೇನೆ. ನಾನು ಸಾಕಷ್ಟು ದೇಗುಲಗಳನ್ನು ಉಳಿಸಿದ್ದೇನೆ ಎಂದು ಶಾಸಕ ಹರ್ಷವರ್ಧನ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಅನಧಿಕೃತ ಧಾರ್ಮಿಕ ಕೇಂದ್ರ ತೆರವು ವಿಚಾರ: ಎಷ್ಟು ದರ್ಗಾ, ಮಸೀದಿ ತೆರವು ಮಾಡಿದ್ದೀರಿ?- ಸಂಸದ ಪ್ರತಾಪ್ ಸಿಂಹ ಗರಂ
ಇದನ್ನೂ ಓದಿ: Mysuru Dasara 2021: ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ವೀರನಹೊಸಹಳ್ಳಿಯಿಂದ ನಾಳೆ ಗಜಪಯಣ ಆರಂಭ