ಅನಧಿಕೃತ ಧಾರ್ಮಿಕ ಕೇಂದ್ರ ತೆರವು ವಿಚಾರ: ಎಷ್ಟು ದರ್ಗಾ, ಮಸೀದಿ ತೆರವು ಮಾಡಿದ್ದೀರಿ?- ಸಂಸದ ಪ್ರತಾಪ್ ಸಿಂಹ ಗರಂ

Mysuru News: ನಿಮ್ಮ ಕೈಲಿ ಆಗದಿದ್ರೆ ಹೇಳಿ ನಾವೇ ಬೀದಿಗಿಳಿಯುತ್ತೇವೆ. ನಮ್ಮ ಮೇಲೆ ಕೇಸ್ ದಾಖಲಿಸಿದರೂ ಯೋಚನೆ ಇಲ್ಲ. ಆದ್ರೆ ಹಿಂದೂ ದೇಗುಲ ಮಾತ್ರ ಟಾರ್ಗೆಟ್ ಆಗಬಾರದು ಎಂದು ಕೆಡಿಪಿ ಸಭೆಯಲ್ಲಿ ಬಿಜೆಪಿ ಸಂಸದ ಪ್ರತಾಪ ಸಿಂಹ ಎಚ್ಚರಿಕೆ ನೀಡಿದ್ದಾರೆ.

ಅನಧಿಕೃತ ಧಾರ್ಮಿಕ ಕೇಂದ್ರ ತೆರವು ವಿಚಾರ: ಎಷ್ಟು ದರ್ಗಾ, ಮಸೀದಿ ತೆರವು ಮಾಡಿದ್ದೀರಿ?- ಸಂಸದ ಪ್ರತಾಪ್ ಸಿಂಹ ಗರಂ
ಪ್ರತಾಪ್​ ಸಿಂಹ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Sep 08, 2021 | 7:47 PM

ಮೈಸೂರು: ಮೈಸೂರಿನಲ್ಲಿ ಅನಧಿಕೃತ ಧಾರ್ಮಿಕ ಕೇಂದ್ರ ತೆರವು ವಿಚಾರವಾಗಿ ಕೆಡಿಪಿ ಸಭೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಸಂಸದರು ಗರಂ ಆಗಿದ್ದಾರೆ. ಕೆಡಿಪಿ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಧರ್ಮ ಟಾರ್ಗೆಟ್ ಮಾಡಿ ತೆರವು ಮಾಡುತ್ತಿದ್ದೀರಿ. ಹಿಂದೂ ದೇವಸ್ಥಾನಗಳನ್ನ ಮಾತ್ರ ತೆರವು ಮಾಡುತ್ತಿದ್ದೀರಿ. ಈವರೆಗೂ ಎಷ್ಟು ದರ್ಗಾ, ಮಸೀದಿ ತೆರವು ಮಾಡಿದ್ದೀರಿ? ಎಷ್ಟು ಅನಧಿಕೃತ ದರ್ಗಾ, ಮಸೀದಿ ತೆರವು ಮಾಡಿದ್ದೀರಿ? ಹಿಂದೂಗಳು ಕತ್ತಿ ಹಿಡಿಯಲ್ಲವೆಂದು ಹೀಗೆ ಮಾಡ್ತಿದ್ದೀರಾ? ಅವರು ಚೂರಿ ಚುಚ್ತಾರೆ ಎಂದು ನಿಮಗೆ ನಡುಕವಾಗುತ್ತ ಎಂದು ಪ್ರತಾಪ್ ಸಿಂಹ ಆಕ್ರೋಶ ಹೊರಹಾಕಿದ್ದಾರೆ.

ಅನಧಿಕೃತ ದರ್ಗಾಗಳ ತೆರವಿಗೆ ನಿಮಗೆ ನಡುಕವಾಗುತ್ತಾ? ಇರ್ವಿನ್ ರಸ್ತೆ ಅಗಲೀಕರಣಕ್ಕೆ ಮಸೀದಿ ತಡೆಯಾಗಿದೆ. ಮಸೀದಿ ಗೋಪುರವನ್ನ ತೆರವು ಮಾಡಲು ಆಗಿಲ್ಲ ನಿಮಗೆ. ದೇವರಾಜ ಅರಸು ರಸ್ತೆಯಲ್ಲಿ ಅನಧಿಕೃತ ದರ್ಗಾ ಇದೆ. ಆ ಅನಧಿಕೃತ ದರ್ಗಾ ಯಾವಾಗ ತೆರವು ಮಾಡುತ್ತೀರಾ? ಹಿಂದೂ ದೇಗುಲ ಮುಟ್ಟುವ ಮೊದಲು ದರ್ಗಾ ತೆರವು ಮಾಡಿ. ಇದು ಮನವಿಯಲ್ಲ ಎಚ್ಚರಿಕೆ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ನಿಮ್ಮ ಕೈಲಿ ಆಗದಿದ್ರೆ ಹೇಳಿ ನಾವೇ ಬೀದಿಗಿಳಿಯುತ್ತೇವೆ. ನಮ್ಮ ಮೇಲೆ ಕೇಸ್ ದಾಖಲಿಸಿದರೂ ಯೋಚನೆ ಇಲ್ಲ. ಆದ್ರೆ ಹಿಂದೂ ದೇಗುಲ ಮಾತ್ರ ಟಾರ್ಗೆಟ್ ಆಗಬಾರದು ಎಂದು ಕೆಡಿಪಿ ಸಭೆಯಲ್ಲಿ ಬಿಜೆಪಿ ಸಂಸದ ಪ್ರತಾಪ ಸಿಂಹ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವ 2021: ಈ ಬಾರಿಯ ದಸರಾ ಬಗ್ಗೆ ವಿವರಣೆ ನೀಡಿದ ಸಚಿವ ಎಸ್​ಟಿ ಸೋಮಶೇಖರ್

ಇದನ್ನೂ ಓದಿ: Mysuru Dasara 2021: ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಆನೆಗಳ ಪಟ್ಟಿ ಹೀಗಿದೆ

Published On - 7:46 pm, Wed, 8 September 21

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ