ಮೈಸೂರು ದಸರಾ ಮಹೋತ್ಸವ 2021: ಈ ಬಾರಿಯ ದಸರಾ ಬಗ್ಗೆ ವಿವರಣೆ ನೀಡಿದ ಸಚಿವ ಎಸ್​ಟಿ ಸೋಮಶೇಖರ್

ಮೈಸೂರು ದಸರಾ ಮಹೋತ್ಸವ 2021: ಈ ಬಾರಿಯ ದಸರಾ ಬಗ್ಗೆ ವಿವರಣೆ ನೀಡಿದ ಸಚಿವ ಎಸ್​ಟಿ ಸೋಮಶೇಖರ್
ಮೈಸೂರು ದಸರಾ ಆನೆಗಳು (ಸಾಂದರ್ಭಿಕ ಚಿತ್ರ)

Mysuru Dasara Festival 2021: ಸೆಪ್ಟೆಂಬರ್ 16 ರಂದು ಅಂಬಾವಿಲಾಸ ಅರಮನೆಗೆ ಗಜಪಡೆ ಆಗಮನ ಆಗಲಿದೆ. ದಸರಾ ಜಂಬೂ ಸವಾರಿಯಲ್ಲಿ 8 ಆನೆಗಳು ಭಾಗಿ ಆಗಲಿವೆ ಎಂದು ಸೋಮಶೇಖರ್ ಮಾಹಿತಿ ನೀಡಿದ್ದಾರೆ.

TV9kannada Web Team

| Edited By: ganapathi bhat

Sep 08, 2021 | 3:53 PM

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ- 2021 ಸಂಬಂಧಿಸಿ ಮೈಸೂರಿನಲ್ಲಿ ಸಚಿವ ಎಸ್.ಟಿ‌. ಸೋಮಶೇಖರ್ ಹೇಳಿಕೆ ನೀಡಿದ್ದಾರೆ. ಸೆಪ್ಟೆಂಬರ್ 13 ಕ್ಕೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಿಂದ ಗಜಪಯಣಕ್ಕೆ ಚಾಲನೆ ನೀಡಲಾಗುವುದು. ಸೆಪ್ಟೆಂಬರ್ 16 ರಂದು ಅಂಬಾವಿಲಾಸ ಅರಮನೆಗೆ ಗಜಪಡೆ ಆಗಮನ ಆಗಲಿದೆ. ದಸರಾ ಜಂಬೂ ಸವಾರಿಯಲ್ಲಿ 8 ಆನೆಗಳು ಭಾಗಿ ಆಗಲಿವೆ ಎಂದು ಸೋಮಶೇಖರ್ ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 7 ರಂದು ಮೈಸೂರು ದಸರಾ ಉದ್ಘಾಟನೆ ನಡೆಯಲಿದೆ. ಉದ್ಘಾಟಕರು ಯಾರು ಎಂದು ಸಿಎಂ ನಿರ್ಧರಿಸುತ್ತಾರೆ ಎಂದು ಅವರು ಹೇಳಿದ್ದಾರೆ.

50 ಲಕ್ಷ ರೂಪಾಯಿ ಆನೆಗಳ ಪೋಷಣೆಗೆ ಮೀಸಲಿಡಲಾಗಿದೆ. 9 ದಿನವೂ ಅರಮನೆ ಒಳಗೆ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ. ನಂಜನಗೂಡಿನ ದೇಗುಲ ಒಳಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಆಗಲಿದೆ. ಅಕ್ಟೋಬರ್​ 15 ರಂದು ಜಂಬೂ ಸವಾರಿ ನಡೆಯಲಿದೆ. ಈ ಬಾರಿ ನಗರದ ಒಳಗೆ 100 ಕಿಲೋ ಮೀಟರ್ ದೀಪಾಲಂಕಾರ ಮಾಡಲಾಗುವುದು. ಮೈಸೂರು ನಗರದ 157 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗುವುದು. ದಸರಾದಲ್ಲಿ ಮೂರು ಸ್ತಬ್ಧಚಿತ್ರಗಳಿಗೆ ಈ ಬಾರಿ ಅವಕಾಶ ನೀಡಲಾಗುತ್ತದೆ. ಚಾಮುಂಡೇಶ್ವರಿ ಉತ್ಸವಮೂರ್ತಿ ದರ್ಶನಕ್ಕೆ ಅವಕಾಶ ಇರಲಿದೆ. ಹೆಚ್ಚಿನ ಜನ ಭಾಗಿಯಾಗಲು ಅವಕಾಶ ನೀಡಲು ಮನವಿ ಮಾಡಲಾಗಿದೆ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ‌. ಸೋಮಶೇಖರ್ ವಿವರಣೆ ನೀಡಿದ್ಧಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸಹ- 2021ಯ ಜಂಬೂಸವಾರಿಗೆ ಆಯ್ಕೆಯಾದ ಆನೆಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಬಾರಿ ದಸರಾದಲ್ಲಿ 8 ಆನೆಗಳು ಭಾಗಿಯಾಗಲಿವೆ. ಮೈಸೂರು ದಸರಾ ಮಹೋತ್ಸವ ಸಂಬಂಧಿಸಿ ಮೈಸೂರಿನಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗಿದೆ. ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಮೈಸೂರಿನ ಅರಮನೆ ಸಭಾಂಗಣದಲ್ಲಿ ಸಭೆ ನಡೆದಿದೆ. ಸಂಸದ ಪ್ರತಾಪ್​​ಸಿಂಹ, ಶಾಸಕರಾದ ಜಿ.ಟಿ. ದೇವೇಗೌಡ, ಎಸ್.ಎ. ರಾಮದಾಸ್, ಹರ್ಷವರ್ಧನ್, ನಿರಂಜನ್ ಕುಮಾರ್, ಮೇಯರ್ ಸುನಂದಾ ಪಾಲನೇತ್ರ, ಡಿಸಿ ಡಾ. ಬಗಾದಿ ಗೌತಮ್, ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಮತ್ತು ಇತರ ಅಧಿಕಾರಿಗಳು ಭಾಗಿ ಆಗಿದ್ದಾರೆ.

ಇದನ್ನೂ ಓದಿ: Mysuru Dasara 2021: ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಆನೆಗಳ ಪಟ್ಟಿ ಹೀಗಿದೆ

ಇದನ್ನೂ ಓದಿ: Mysuru Dasara 2021: ಅಂದು ಪುಂಡಾನೆ, ಇಂದು ದಸರಾ ಜಂಬೂಸವಾರಿಯ ಆಕರ್ಷಣೆ; ಇದು ಅಶ್ವತ್ಥಾಮನ ಜೀವನಗಾಥೆ 

Follow us on

Related Stories

Most Read Stories

Click on your DTH Provider to Add TV9 Kannada