AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋತು ಸುಣ್ಣವಾದ ಶಾರುಖ್​ಗೆ ಈಗ ಓಟಿಟಿ ಅನಿವಾರ್ಯ; ಸತ್ಯ ಒಪ್ಪಿಕೊಂಡು ವಿಡಿಯೋ ಶೇರ್​ ಮಾಡಿದ ನಟ

ಶಾರುಖ್​ ಖಾನ್​ ಅವರ ಓಟಿಟಿ ಎಂಟ್ರಿಗೆ ಸಂಬಂಧಿಸಿದ ಒಂದು ವಿಡಿಯೋ ವೈರಲ್​ ಆಗಿದೆ. ಇದೇ ವಿಡಿಯೋವನ್ನು ಕರಣ್​ ಜೋಹರ್​ ಮುಂತಾದ ಬಾಲಿವುಡ್​ ಸೆಲೆಬ್ರಿಟಿಗಳು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಶೇರ್​ ಮಾಡಿಕೊಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಸೋತು ಸುಣ್ಣವಾದ ಶಾರುಖ್​ಗೆ ಈಗ ಓಟಿಟಿ ಅನಿವಾರ್ಯ; ಸತ್ಯ ಒಪ್ಪಿಕೊಂಡು ವಿಡಿಯೋ ಶೇರ್​ ಮಾಡಿದ ನಟ
ಶಾರುಖ್ ಖಾನ್
TV9 Web
| Edited By: |

Updated on: Sep 12, 2021 | 12:53 PM

Share

ಬಾಲಿವುಡ್​ ನಟ ಶಾರುಖ್​ ಖಾನ್​ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಆದರೂ ಕೂಡ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಗೆಲುವು ಸಿಗುತ್ತಿಲ್ಲ. ಮಾಡಿದ ಎಲ್ಲ ಸಿನಿಮಾಗಳೂ ಸಾಲು ಸಾಲಾಗಿ ಸೋಲು ಕಂಡಿವೆ. ಹಾಗಾಗಿ ‘ಜೀರೋ’ ಸಿನಿಮಾದ ಹೀನಾಯ ಸೋಲಿನ ಬಳಿಕ ಶಾರುಖ್​ ಬೇರೆ ಯಾವುದೇ ಚಿತ್ರದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ನಡುವೆ ಅವರು ‘ಪಠಾಣ್​’ ಚಿತ್ರದ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದರು. ತಮಿಳು ನಿರ್ದೇಶಕ ಅಟ್ಲಿ ಕುಮಾರ್​ ಜೊತೆಗೂ ಕೈ ಜೋಡಿಸಿರುವ ಬಗ್ಗೆ ಸುದ್ದಿ ಹರಿದಾಡಿತು. ಈಗ ಅದೆಲ್ಲವನ್ನೂ ಮೀರಿಸುವಂತಹ ಬ್ರೇಕಿಂಗ್​ ನ್ಯೂಸ್​ ಸಿಕ್ಕಿದೆ. ಶೀಘ್ರದಲ್ಲೇ ಶಾರುಖ್​ ಖಾನ್​ ಓಟಿಟಿಗೆ ಎಂಟ್ರಿ ನೀಡಲಿದ್ದಾರೆ!

ಇದು ಗಾಸಿಪ್​ ಅಲ್ಲ. ಸ್ವತಃ ಶಾರುಖ್​ ಖಾನ್​ ಕಡೆಯಿಂದಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ಇತ್ತೀಚೆಗೆ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ತನ್ನ ಸೋಶಿಯಲ್​ ಮೀಡಿಯಾದಲ್ಲಿ ಒಂದು ವಿಲಕ್ಷಣವಾದ ವಿಡಿಯೋ ಹಂಚಿಕೊಂಡಿದೆ. ಅದರಲ್ಲಿ ಶಾರುಖ್​ ಖಾನ್​ ನಟಿಸಿದ್ದಾರೆ. ಆ ವಿಡಿಯೋದಲ್ಲಿ ಇರುವುದು ಸ್ವತಃ ಶಾರುಖ್​ ಅವರ ರಿಯಲ್​ ಲೈಫ್​ ಕಥೆ!

ವಿಡಿಯೋದಲ್ಲಿ ಅಂಥದ್ದು ಏನಿದೆ? ಶಾರುಖ್​ ಮನೆ ಮುಂದೆ ನೂರಾರು ಅಭಿಮಾನಿಗಳು ಜೈಕಾರ ಹಾಕುತ್ತಿದ್ದಾರೆ. ಅದನ್ನು ನೋಡಿ ಶಾರುಖ್​ ಹೆಮ್ಮೆ ಪಡುತ್ತಾರೆ. ಆದರೆ ಭವಿಷ್ಯದಲ್ಲೂ ಇಷ್ಟೇ ಅಭಿಮಾನ ಉಳಿದುಕೊಂಡಿರುತ್ತದೆ ಎಂಬುದು ಯಾಕೋ ಅನುಮಾನ ಎಂದು ಪಕ್ಕದಲ್ಲಿರುವ ವ್ಯಕ್ತಿ ಹೇಳುತ್ತಾರೆ. ಯಾಕೆ ಎಂದು ಕೇಳಿದ್ದಕ್ಕೆ, ‘ಅಜಯ್​ ದೇವಗನ್, ಅಕ್ಷಯ್ ಕುಮಾರ್​, ಸಂಜಯ್​ ದತ್​, ಸೈಫ್​ ಅಲಿ ಖಾನ್​ ಮುಂತಾದ ಸ್ಟಾರ್​ ನಟರ ಸಿನಿಮಾ ಮತ್ತು ವೆಬ್​ ಸಿರೀಸ್​ಗಳು ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ಇವೆ. ನಿಮ್ಮದು ಇಲ್ಲ’ ಎಂದು ಆ ವ್ಯಕ್ತಿ ಉತ್ತರಿಸುತ್ತಾರೆ.

ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿರುವ ಶಾರುಖ್​ ಖಾನ್​ ಅವರು ‘ಓಂ ಶಾಂತಿ ಓಂ’ ಚಿತ್ರದಲ್ಲಿ ಫೇಮಸ್​ ಆದ​ ‘ಪಿಕ್ಚರ್​ ಇನ್ನೂ ಬಾಕಿ ಇದೆ ನನ್ನ ಸ್ನೇಹಿತರೇ..’ ಎಂಬ ಡೈಲಾಗ್ಅನ್ನು ಕ್ಯಾಪ್ಷನ್​ ರೂಪದಲ್ಲಿ ನೀಡಿದ್ದಾರೆ. ಆ ಮೂಲಕ ಅವರು ಓಟಿಟಿಗೆ ಎಂಟ್ರಿ ನೀಡುತ್ತಾರೆ ಎಂಬುದು ಖಚಿತವಾಗಿದೆ. ಆದರೆ ಅದು ಸಿನಿಮಾ ಮೂಲಕವೋ ಅಥವಾ ವೆಬ್​ ಸಿರೀಸ್​ ಮೂಲಕವೋ ಎಂಬುದು ಸ್ಪಷ್ಟವಾಗಿಲ್ಲ. ಇದೇ ವಿಡಿಯೋವನ್ನು ಕರಣ್​ ಜೋಹರ್​ ಮುಂತಾದ ಬಾಲಿವುಡ್​ ಸೆಲೆಬ್ರಿಟಿಗಳು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಶೇರ್​ ಮಾಡಿಕೊಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:

‘ಶಾರುಖ್​ ಖಾನ್​ರದ್ದು ಅತಿ ಕೆಟ್ಟ ಮತ್ತು ಸಹಿಸಲಾಗದ ನಟನೆ’; ಪತ್ನಿ ಗೌರಿ ಹೀಗೆ ಹೇಳಿದ್ದು ಯಾಕೆ?

Shah Rukh Khan: ‘ನೀವು ನಿರುದ್ಯೋಗಿ ಆಗಿಬಿಟ್ರಾ’ ಎಂದು ನೇರವಾಗಿ ಕೇಳಿದ ನೆಟ್ಟಿಗನಿಗೆ ಶಾರುಖ್​ ಖಾನ್​ ಕೊಟ್ಟ ಉತ್ತರ ಏನು?

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?