ಮತ್ತೊಂದು ಹುಡುಗಿ ಜತೆ ಆಪ್ತತೆ; ಮುರಿದು ಬಿತ್ತು ಶಮಿತಾ ಶೆಟ್ಟಿ-ರಾಕೇಶ್ ಬಾಪಟ್ ಸಂಬಂಧ
ಶಿಲ್ಪಾ ಪತಿ ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣ ದಂಧೆಯಲ್ಲಿ ಬಂಧನಕ್ಕೆ ಒಳಗಾದ ಕೆಲವೇ ದಿನಗಳಲ್ಲಿ ಶಮಿತಾ ಬಿಗ್ ಬಾಸ್ ಮನೆ ಪ್ರವೇಶಿಸಿದರು. ಈ ವಿಚಾರದಲ್ಲಿ ಸಾಕಷ್ಟು ನೊಂದಿದ್ದರೂ ಅವರು ಬಿಗ್ ಬಾಸ್ ಮನೆಗೆ ಬಂದಿದ್ದು ಸಾಕಷ್ಟು ಅಚ್ಚರಿ ಮೂಡಿಸಿತ್ತು.
ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಹಾಗೂ ರಾಕೇಶ್ ಬಾಪಟ್ ಬಿಗ್ ಬಾಸ್ ಒಟಿಟಿಯಲ್ಲಿ ಆಪ್ತವಾಗಿದ್ದರು. ಇವರ ಕೆಮಿಸ್ಟ್ರಿ ಅನೇಕರಿಗೆ ಇಷ್ಟವಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ ಹುಟ್ಟಿಕೊಂಡಿತು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಕೆಲವೇ ದಿನಗಳಲ್ಲಿ ಲೆಕ್ಕಾಚಾರ ತಲೆಕೆಳಗಾಗಿದೆ. ಶಮಿತಾ ಹಾಗೂ ರಾಕೇಶ್ ನಡುವೆ ಹುಟ್ಟಿಕೊಂಡಿದ್ದ ಆಪ್ತತೆ ಈಗ ಸುಟ್ಟು ಕರಕಲಾಗಿದೆ.
ಶಿಲ್ಪಾ ಪತಿ ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣ ದಂಧೆಯಲ್ಲಿ ಬಂಧನಕ್ಕೆ ಒಳಗಾದ ಕೆಲವೇ ದಿನಗಳಲ್ಲಿ ಶಮಿತಾ ಬಿಗ್ ಬಾಸ್ ಮನೆ ಪ್ರವೇಶಿಸಿದರು. ಈ ವಿಚಾರದಲ್ಲಿ ಸಾಕಷ್ಟು ನೊಂದಿದ್ದರೂ ಅವರು ಬಿಗ್ ಬಾಸ್ ಮನೆಗೆ ಬಂದಿದ್ದು ಸಾಕಷ್ಟು ಅಚ್ಚರಿ ಮೂಡಿಸಿತ್ತು. ಬಿಗ್ ಬಾಸ್ ಮನೆಗೆ ಬಂದ ನಂತರದಲ್ಲಿ ಶಮಿತಾ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದಾರೆ. ರಾಕೇಶ್ ಬಾಪಟ್ ಜತೆ ಸಲುಗೆಯಿಂದ ಇದ್ದಿದ್ದಕ್ಕೆ ಮತ್ತಷ್ಟು ಚರ್ಚೆಗೆ ಒಳಗಾದರು.
ರಾಕೇಶ್ ಬಾಪಟ್ ಹಾಗೂ ಶಮಿತಾ ಪರಸ್ಪರ ಕಿಸ್ ಮಾಡಿಕೊಂಡಿದ್ದರು. ಈ ವಿಡಿಯೋಗಳು ಸಾಕಷ್ಟು ವೈರಲ್ ಆಗಿತ್ತು. ಆದರೆ, ಇವರ ನಡುವೆ ಮೂರನೇ ವ್ಯಕ್ತಿ ಆಗಮನವಾಗಿದೆ. ಇದರಿಂದ ಮನ ನೊಂದಿರುವ ಶಮಿತಾ ಅವರು ರಾಕೇಶ್ರಿಂದ ಅಂತರ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.
ದಿವ್ಯಾ ಅಗರ್ವಾಲ್ ಜತೆ ರಾಕೇಶ್ ಆಪ್ತವಾಗಿದ್ದಾರೆ. ಇದು ಶಮಿತಾ ಕಣ್ಣು ಕುಕ್ಕಿದೆ. ಈ ವಿಚಾರವಾಗಿ ರಾಕೇಶ್ ಜತೆ ಶಮಿತಾ ಮಾತಿಗೆ ಇಳಿದಿದ್ದರು. ಇದನ್ನು ರಾಕೇಶ್ ಸಮರ್ಥಿಸಿಕೊಂಡಿದ್ದರು. ‘ದಿವ್ಯಾ ಅವರನ್ನು ಕಂಡರೆ ನನಗೆ ಇಷ್ಟವಿಲ್ಲ. ಆದರೆ, ಒಂದೇ ಮನೆಯಲ್ಲಿ ಇದ್ದಾಗ ಅವಳನ್ನು ಅವಾಯ್ಡ್ ಮಾಡೋಕೆ ಸಾಧ್ಯವಿಲ್ಲ’ ಎಂದಿದ್ದರು. ಆದರೆ, ಇಷ್ಟಕ್ಕೇ ನಿಂತಿಲ್ಲ. ದಿವ್ಯಾ ಜತೆ ರಾಕೇಶ್ ಆಪ್ತರಾಗಿ ನಡೆದುಕೊಂಡಿದ್ದಾರೆ. ಇದು ಸಹಜವಾಗಿಯೇ ಶಮಿತಾ ಕೋಪಕ್ಕೆ ಕಾರಣವಾಗಿದೆ.
‘ರಾಕೇಶ್ ನನ್ನ ಪರವಾಗಿ ನಿಲ್ಲುತ್ತಿಲ್ಲ. ಅವನು ನನಗೆ ಹೇಳಿ ಮಾಡಿಸಿದ ಹುಡುಗನಲ್ಲ. ನಾನು ಆತನಿಗೆ ಮತ್ತಿನೆಂದೂ ಕ್ಲೋಸ್ ಆಗುವುದಿಲ್ಲ. ನಾನು ತಪ್ಪಾದ ವ್ಯಕ್ತಿಯನ್ನು ನಂಬಿ ಮೋಸ ಹೋದೆ’ ಎಂದಿದ್ದಾರೆ ಶಮಿತಾ.
ಇದನ್ನೂ ಓದಿ: ತನ್ನ ಪರವಾಗಿ ನಿಲ್ಲುವ ಸಂಗಾತಿ ಬೇಕು ಆದರೆ ರಾಕೇಶ್ ಅಂತಹ ವ್ಯಕ್ತಿ ಅಲ್ಲ ಎಂದು ಹೇಳಿ ಶಾಕ್ ಕೊಟ್ಟ ಶಮಿತಾ ಶೆಟ್ಟಿ
ಮೊದಲ ಬಾಯ್ಫ್ರೆಂಡ್ ಮೃತಪಟ್ಟಿದ್ದು ಹೇಗೆ? ಅಳುತ್ತಲೇ ಶಮಿತಾ ಶೆಟ್ಟಿ ಬಿಚ್ಚಿಟ್ರು ಶಾಕಿಂಗ್ ವಿಚಾರ
Published On - 4:52 pm, Sat, 11 September 21