ವೇದಿಕೆ ಮೇಲೆ ಲವ್​ ಪ್ರಪೋಸ್​ ಮಾಡಿದ ಶಮಂತ್ ಬ್ರೋ ಗೌಡ; ಎದುರಿನಿಂದ ಬಂತು ನೋ ಅನ್ನೋ ಉತ್ತರ

TV9 Digital Desk

| Edited By: ಮದನ್​ ಕುಮಾರ್​

Updated on: Sep 10, 2021 | 7:30 AM

ಈ ಬಾರಿಯ ಗಣೇಶೋತ್ಸವಕ್ಕೆ ‘ಬಿಗ್​ ಗಣೇಶೋತ್ಸವ’ ಕಾರ್ಯಕ್ರಮದ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ ಬಿಗ್​ ಬಾಸ್​ ಸ್ಪರ್ಧಿಗಳು. ಬಿಗ್​ ಬಾಸ್​ 8ರ ಸ್ಪರ್ಧಿಗಳನ್ನು ಕರೆಸಲಾಗಿದ್ದು, ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ.

ವೇದಿಕೆ ಮೇಲೆ ಲವ್​ ಪ್ರಪೋಸ್​ ಮಾಡಿದ ಶಮಂತ್ ಬ್ರೋ ಗೌಡ; ಎದುರಿನಿಂದ ಬಂತು ನೋ ಅನ್ನೋ ಉತ್ತರ
ವೇದಿಕೆ ಮೇಲೆ ಲವ್​ ಪ್ರಪೋಸ್​ ಮಾಡಿದ ಶಮಂತ್ ಬ್ರೋ ಗೌಡ
Follow us

ಬಿಗ್​ ಬಾಸ್​ ಸೀಸನ್​ 8ರ ಸ್ಪರ್ಧಿಗಳು ಮಾಧ್ಯಮ ಹಾಗೂ ಸೋಶಿಯಲ್​ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ. ಬಿಗ್​ ಬಾಸ್​ ಪಯಣದಿಂದ ಇವರಿಗೆ ಸೋಶಿಯಲ್​ ಮೀಡಿಯಾ ಹಿಂಬಾಲಕರ ಸಂಖ್ಯೆ ಹೆಚ್ಚಿದೆ. ಹೀಗಾಗಿ, ಲೈವ್​ ಬರುವ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡುತ್ತಿದ್ದಾರೆ. ಇದರ ಜತೆಗೆ, ಕಲರ್ಸ್​ ಕನ್ನಡ ವಾಹಿನಿ ಆಯೋಜಿಸಿದ ಅನೇಕ ಕಾರ್ಯಕ್ರಮಗಳಲ್ಲಿ ಈ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಈಗ ಶಮಂತ್ ಬ್ರೋ ಗೌಡ ಅವರು ವೇದಿಕೆ ಮೇಲೆ ಒಬ್ಬರಿಗೆ ಪ್ರಪೋಸ್​ ಮಾಡಿದ್ದಾರೆ.

ಶಮಂತ್​ ಅವರು ಸೀಸನ್​ 8ರಲ್ಲಿ ಸಾಕಷ್ಟು ಹೈಲೈಟ್​ ಆಗಿದ್ದರು. ಅದೃಷ್ಟದ ಬಲದಿಂದ ಉಳಿದುಕೊಂಡಿದ್ದ ಅವರು ನಂತರ ಎಲ್ಲರ ಗಮನ ಸೆಳೆಯೋಕೆ ಯಶಸ್ವಿ ಆದರು. ಈ ಮಧ್ಯೆ ಕಣ್ಮಣಿ ಮೇಲೆ ಶಮಂತ್​ಗೆ ಪ್ರೀತಿ ಮೂಡಿತ್ತು. ಕಣ್ಮಣಿ ಎಂದರೆ ಮನೆಯ ಕ್ಯಾಮೆರಾಗಳು. ಕಣ್ಮಣಿ ಹೆಸರಲ್ಲಿ ಮಹಿಳೆ ಒಬ್ಬರಿಂದ ಮಾತನಾಡಿಸಲಾಗಿತ್ತು. ಕಿಚ್ಚ ಸುದೀಪ್​ ಬಿಗ್​ ಬಾಸ್​ ಶೋ ನಡೆಸಿಕೊಡಲು ಸಾಧ್ಯವಾಗದೆ ಇದ್ದಾಗ ಸ್ಪರ್ಧಿಗಳ ಜತೆ ಸಂವಾದ ನಡೆಸಿದ್ದು ಇದೇ ಕಣ್ಮಣಿ. ಆ ಧ್ವನಿ ಬಗ್ಗೆ ಶಮಂತ್​ ಸಾಕಷ್ಟು ಒಲವು ಹೊಂದಿದ್ದರು. ಅಲ್ಲದೆ, ಕಣ್ಮಣಿ ಬಗ್ಗೆ ವಿಶೇಷ ಸಾಲುಗಳನ್ನು ಕೂಡ ಅವರು ಬರೆದಿದ್ದರು. ಈಗ ಅವರು ಜಿಮ್ಮಿ ಜಲಜಾಗೆ ಪ್ರಪೋಸ್ ಮಾಡಿದ್ದಾರೆ.

ಈ ಬಾರಿಯ ಗಣೇಶೋತ್ಸವಕ್ಕೆ ‘ಬಿಗ್​ ಗಣೇಶೋತ್ಸವ’ ಕಾರ್ಯಕ್ರಮದ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ ಬಿಗ್​ ಬಾಸ್​ ಸ್ಪರ್ಧಿಗಳು. ಬಿಗ್​ ಬಾಸ್​ 8ರ ಸ್ಪರ್ಧಿಗಳನ್ನು ಕರೆಸಲಾಗಿದ್ದು, ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಈ ವೇಳೆ ಶಮಂತ್​ ಹಾಗೂ ಪ್ರಶಾಂತ್​ ಅವರನ್ನು ವೇದಿಕೆ ಮೇಲೆ ಕರೆಸಲಾಯಿತು. ನಿರೂಪಕಿಯಾಗಿದ್ದ ಅನುಪಮಾ ಗೌಡ ಅವರು, ಕ್ಯಾಮೆರಾಗೆ ಪ್ರಪೋಸ್​ ಮಾಡುವಂತೆ ಹೇಳಿದರು. ಶಮಂತ್ ಪ್ರಪೋಸ್​ಅನ್ನು ಕ್ಯಾಮೆರಾ ಒಪ್ಪಿಕೊಂಡಿಲ್ಲ. ಆದರೆ, ಪ್ರಶಾಂತ್​ ಪ್ರಪೋಸ್​ ಮಾಡುತ್ತಿದ್ದಂತೆ ಕ್ಯಾಮೆರಾ ಒಪ್ಪಿಕೊಂಡಿದೆ.

‘ಹಳೇ ಪ್ಲೇಯರ್ ಪ್ರಶಾಂತ್ ಲವ್ ಪ್ರೊಪೋಸ್‍ಗೆ ಒಪ್ಪಿಕೊಂಡ ಜಿಮ್ಮಿ ಜಲಜಾ’ ಎನ್ನುವ ಕ್ಯಾಪ್ಶನ್​ನೊಂದಿಗೆ ಕಲರ್ಸ್​ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಶುಕ್ರವಾರ (ಸೆಪ್ಟೆಂಬರ್​ 10) ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಇದನ್ನೂ ಓದಿ:ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಮಂಜು-ದಿವ್ಯಾ ಫೋಟೋ; ಬಿಗ್​ ಬಾಸ್​ ಬಳಿಕ ಏನಿದು ಕಹಾನಿ? 

‘ಬಿಗ್​ ಬಾಸ್​ ಸೀಸನ್​ 8’ ಮರುಸೃಷ್ಟಿ; ಇದನ್ನು ನೋಡಿದ್ರೆ ನೀವು ನಗೋದು ಗ್ಯಾರಂಟಿ

ತಾಜಾ ಸುದ್ದಿ

Related Stories

Click on your DTH Provider to Add TV9 Kannada