‘ಬಿಗ್​ ಬಾಸ್​ ಸೀಸನ್​ 8’ ಮರುಸೃಷ್ಟಿ; ಇದನ್ನು ನೋಡಿದ್ರೆ ನೀವು ನಗೋದು ಗ್ಯಾರಂಟಿ

ಪ್ರತಿಬಾರಿ ಹಬ್ಬದ ದಿನ ಕಲರ್ಸ್​ ಕನ್ನಡ ವಾಹಿನಿ ವಿಶೇಷ ಕಾರ್ಯಕ್ರಮಗಳೊಂದಿಗೆ ವೀಕ್ಷಕರ ಎದುರು ಬರುತ್ತದೆ. ಈ ಬಾರಿ ಅವರು ‘ಬಿಗ್​ ಗಣೇಶೋತ್ಸವ’ ಕಾರ್ಯಕ್ರಮದ ಹೆಸರಲ್ಲಿ ವೀಕ್ಷಕರ ಎದುರು ಬಂದಿದ್ದಾರೆ. ಈ

‘ಬಿಗ್​ ಬಾಸ್​ ಸೀಸನ್​ 8’ ಮರುಸೃಷ್ಟಿ; ಇದನ್ನು ನೋಡಿದ್ರೆ ನೀವು ನಗೋದು ಗ್ಯಾರಂಟಿ
‘ಬಿಗ್​ ಬಾಸ್​ ಸೀಸನ್​ 8’ ಮರುಸೃಷ್ಟಿ; ಇದನ್ನು ನೋಡಿದ್ರೆ ನೀವು ನಗೋದು ಗ್ಯಾರಂಟಿ

ಕನ್ನಡ ಬಿಗ್​ ಬಾಸ್​ ಪೂರ್ಣಗೊಂಡು ಇಂದಿಗೆ (ಸೆಪ್ಟೆಂಬರ್​ 8) ಒಂದು ತಿಂಗಳು ಪೂರ್ಣಗೊಂಡಿದೆ. ಆದಾಗ್ಯೂ ಈ ಶೋನ ಹವಾ ಕಡಿಮೆ ಆಗಿಲ್ಲ. ನಾನಾ ಕಾರಣಗಳಿಗೆ ಸೀಸನ್​ 8ರ ಸ್ಪರ್ಧಿಗಳು ಮತ್ತೆ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಿಗ್​ ಬಾಸ್​ ಮಿನಿ ಸೀಸನ್​ ಕೊನೆಯ ದಿನ ಸೀಸನ್​ 8ರ ಸ್ಪರ್ಧಿಗಳು ವೇದಿಕೆ ಏರಿದ್ದರು. ಈಗ ಬಿಗ್​ ಬಾಸ್​ ಸೀಸನ್​ 8ಅನ್ನು ಮರುಸೃಷ್ಟಿ ಮಾಡಲಾಗಿದೆ. ಇದನ್ನು ನೋಡಿ ಬಿಗ್​ ಬಾಸ್​ ವಿನ್ನರ್​ ಮಂಜು ಪಾವಗಡ ಸೇರಿ ಎಲ್ಲಾ ಸ್ಪರ್ಧಿಗಳು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಪ್ರತಿಬಾರಿ ಹಬ್ಬದ ದಿನ ಕಲರ್ಸ್​ ಕನ್ನಡ ವಾಹಿನಿ ವಿಶೇಷ ಕಾರ್ಯಕ್ರಮಗಳೊಂದಿಗೆ ವೀಕ್ಷಕರ ಎದುರು ಬರುತ್ತದೆ. ಈ ಬಾರಿ ಅವರು ‘ಬಿಗ್​ ಗಣೇಶೋತ್ಸವ’ ಕಾರ್ಯಕ್ರಮದ ಹೆಸರಲ್ಲಿ ವೀಕ್ಷಕರ ಎದುರು ಬಂದಿದ್ದಾರೆ. ಈ ವೇಳೆ ಬಿಗ್​ ಬಾಸ್​ ಸೀಸನ್​ 8ಅನ್ನು ಮರುಸೃಷ್ಟಿಸಲಾಗಿದೆ. ಇದರ ಪ್ರೋಮೋ ಈಗ ವೈರಲ್​ ಆಗಿದೆ.

‘ಮಜಾ ಭಾರತ’ ರಿಯಾಲಿಟಿ ಶೋ​ ಸ್ಪರ್ಧಿಗಳು ಈ ಮೊದಲು ಎಲ್ಲರನ್ನೂ ನಗಿಸಿದ್ದಾರೆ. ಈ ಬಾರಿ ಅವರು ಬಿಗ್​ ಬಾಸ್ ಸ್ಪರ್ಧಿಗಳ ಅವತಾರ ತಾಳಿದ್ದಾರೆ. ಮಂಜು ಪಾವಗಡ, ಶುಭಾ ಪೂಂಜಾ, ಚಕ್ರವರ್ತಿ ಚಂದ್ರಚೂಡ್​, ಪ್ರಶಾಂತ್​ ಸಂಬರಗಿ ಸೇರಿ ಬಹುತೇಕ ಸ್ಪರ್ಧಿಗಳ ಅವತಾರವನ್ನು ಹೊತ್ತು ಬಂದಿದ್ದಾರೆ ‘ಮಜಾ ಭಾರತ’ ಸ್ಪರ್ಧಿಗಳು. ಈಗ ಕಲರ್ಸ್​ ಕನ್ನಡ ವಾಹಿನಿ ಈ ಪ್ರೋಮೋ ಹಂಚಿಕೊಂಡಿದೆ. ಇದನ್ನು ನೋಡಿ ಸಾಕಷ್ಟು ಮಂದಿ ಮನಃಪೂರ್ವಕವಾಗಿ ನಕ್ಕಿದ್ದಾರೆ.

ಸೀಸನ್​ 8ರಲ್ಲಿ ಮಾವ ಎನ್ನುವ ಶಬ್ದ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಪ್ರಶಾಂತ್​ ಅವರನ್ನು ಮಂಜು ಪಾವಗಡ ಮಾವ ಎಂದು ಕರೆಯುತ್ತಿದ್ದರು. ಇದು ಪ್ರಶಾಂತ್​ ಕೋಪಕ್ಕೆ ಕಾರಣವಾಗಿತ್ತು. ಮಾವ ಎನ್ನುವ ಶಬ್ದಕ್ಕೆ ಬೇರೆಯದೇ ಅರ್ಥವಿದೆ ಎಂದು ವಾದಿಸಿದ್ದರು ಪ್ರಶಾಂತ್​. ಇದು ದೊಡ್ಡ ಜಗಳಕ್ಕೆ ಕಾರಣವಾಗಿತ್ತು. ಈ ಘಟನೆಯನ್ನು ಮಜಾ ಭಾರತ​ ಮಂದಿ ಮರು ಸೃಷ್ಟಿ ಮಾಡಿದ್ದಾರೆ. ಶುಕ್ರವಾರ (ಸೆಪ್ಟೆಂಬರ್ 10) ಮಧ್ಯಾಹ್ನ ಈ ಶೋ ಪ್ರಸಾರವಾಗಲಿದೆ.

ಇದನ್ನೂ ಓದಿ: ‘ನನ್ನ ಕೆಲಸ ಕಿತ್ತುಕೊಳ್ಳಬೇಡಿ’; ಮಂಜು ಪಾವಗಡಗೆ ಸುದೀಪ್ ಹೀಗೆ ಹೇಳಿದ್ದೇಕೆ?​

Read Full Article

Click on your DTH Provider to Add TV9 Kannada