AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Megha Shetty: ‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿ ಸಿನಿಮಾಗಾಗಿ ಕಾಯ್ತಾ ಇದೀರಾ?; ಇಲ್ಲಿದೆ ಗುಡ್​ ನ್ಯೂಸ್

ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಮೇಘಾ ಶೆಟ್ಟಿಗೆ ಇದು ಮೊದಲ ಸಿನಿಮಾ. ಗೋಲ್ಡನ್​ ಸ್ಟಾರ್​ ಗಣೇಶ್​ ಜತೆ ತೆರೆ ಹಂಚಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಅವರು ಕಾಲಿಡುತ್ತಿದ್ದಾರೆ.

Megha Shetty: ‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿ ಸಿನಿಮಾಗಾಗಿ ಕಾಯ್ತಾ ಇದೀರಾ?; ಇಲ್ಲಿದೆ ಗುಡ್​ ನ್ಯೂಸ್
ಮೇಘಾ ಶೆಟ್ಟಿ (ಕೃಪೆ: ಇನ್​​ಸ್ಟಾಗ್ರಾಮ್)
ರಾಜೇಶ್ ದುಗ್ಗುಮನೆ
|

Updated on:Sep 17, 2021 | 4:56 PM

Share

ಮೇಘಾ ಶೆಟ್ಟಿ ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಹೆಚ್ಚು ಜನರಿಗೆ ತಲುಪಿದ್ದಾರೆ. ಅವರಿಗೆ ಈ ಧಾರಾವಾಹಿಯಿಂದ ದೊಡ್ಡ ಅಭಿಮಾನಿ ಬಳಗ ಹಾಗೂ ಖ್ಯಾತಿ ಸಿಕ್ಕಿದೆ. ಈಗ ಅವರು ಗಣೇಶ್​ ನಟನೆಯ ‘ತ್ರಿಬಲ್​ ರೈಡಿಂಗ್​’ ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಡುತ್ತಿದ್ದಾರೆ. ಖುಷಿ ಸುದ್ದಿ ಎಂದರೆ, ‘ತ್ರಿಬಲ್​ ರೈಡಿಂಗ್​’ ಸಿನಿಮಾ ಶೂಟಿಂಗ್ ಇಂದು (ಸೆಪ್ಟೆಂಬರ್​ 17)​ ಪೂರ್ಣಗೊಂಡಿದೆ. ಈಗಾಗಲೇ ಡಬ್ಬಿಂಗ್​​ ಕೆಲಸಗಳೂ ಪೂರ್ಣಗೊಂಡಿದ್ದು, ಕೆಲವೇ ಕೆಲವು ಕೆಲಸಗಳು ಮಾತ್ರ ಬಾಕಿ ಇವೆ. ಈ ಮೂಲಕ ಅವರನ್ನು ಶೀಘ್ರವೇ ಅಭಿಮಾನಿಗಳು ಬೆಳ್ಳಿ ಪರದೆ ಮೇಲೆ ಕಣ್ತುಂಬಿಕೊಳ್ಳಬಹುದು.

ಈಗಾಗಲೇ ಚಿತ್ರತಂಡ ಟಾಕಿ ಪೋರ್ಷನ್​ ಶೂಟಿಂಗ್​​ ಪೂರ್ಣಗೊಳಿಸಿಕೊಂಡಿತ್ತು. ಸಾಂಗ್​ ಒಂದರ ಶೂಟಿಂಗ್​ ಮಾತ್ರ ಬಾಕಿ ಇತ್ತು. ಅದನ್ನು ಇಂದು ಚಿತ್ರತಂಡ ಮುಗಿಸಿದೆ. ಗಣೇಶ್​ ಜತೆ ‘ತ್ರಿಬಲ್​ ರೈಡಿಂಗ್​’ ಹೋಗಿದ್ದು ಹೇಗಿತ್ತು ಎನ್ನುವ ಬಗ್ಗೆ ಮೇಘಾ ಶೆಟ್ಟಿ ಟಿವಿ9 ಕನ್ನಡ ಡಿಜಿಟಲ್​ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಹಾಡಿನ ಚಿತ್ರೀಕರಣ ಬಾಕಿ ಇತ್ತು. ಅದನ್ನು ಮುಗಿಸಿದ್ದೇವೆ. ಅದ್ಭುತವಾದ ಟೀಮ್​, ಸಿನಿಮಾ ಮತ್ತು ಹಾಡು ಎರಡೂ ರಿಚ್ ಆಗಿ ಮೂಡಿ ಬಂದಿದೆ’ ಎಂದಿದ್ದಾರೆ.

ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಮೇಘಾ ಶೆಟ್ಟಿಗೆ ಇದು ಮೊದಲ ಸಿನಿಮಾ. ಗೋಲ್ಡನ್​ ಸ್ಟಾರ್​ ಗಣೇಶ್​ ಜತೆ ತೆರೆ ಹಂಚಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಅವರು ಕಾಲಿಡುತ್ತಿದ್ದಾರೆ. ಈ ಬಗ್ಗೆ ಮೇಘಾಗೆ ಖುಷಿ ಇದೆ. ‘ನನ್ನ ಮೊದಲ ಸಿನಿಮಾ ಗಣೇಶ್ ಜತೆ​. ಅವರ ಜತೆ ಕೆಲಸ ಮಾಡೋದು ತುಂಬಾನೇ ಖುಷಿಯ ವಿಚಾರ. ಅವರು ತುಂಬಾನೇ ಅದ್ಭುತವಾಗಿ ಮಾತನಾಡುತ್ತಾರೆ, ಅಷ್ಟೇ ಹಂಬಲ್​ ಕೂಡ’ ಎನ್ನುತ್ತಾರೆ ಅವರು.

ಧಾರಾವಾಹಿ ಹಾಗೂ ಸಿನಿಮಾ ಎರಡರ ಶೂಟಿಂಗ್​ನಲ್ಲೂ ಮೇಘಾ ಭಾಗಿಯಾಗಿದ್ದಾರೆ. ಇದೆರಡಕ್ಕೂ ಇರುವ ವ್ಯತ್ಯಾಸದ ಬಗ್ಗೆ ಅವರು ಮಾತನಾಡಿದ್ದಾರೆ. ‘ಧಾರಾವಾಹಿಗಳಲ್ಲಿ ಒಂದೇ ದಿನ ಸಾಕಷ್ಟು ದೃಶ್ಯಗಳನ್ನು ಶೂಟ್​ ಮಾಡುತ್ತೇವೆ. ಆದರೆ, ಸಿನಿಮಾ ಆ ರೀತಿ ಅಲ್ಲ. ಸಿನಿಮಾದಲ್ಲಿ ಹೇಳುವ ವಿಚಾರ ಸಾಕಷ್ಟು ಇರುತ್ತದೆ. ಹೀಗಾಗಿ, ಒಮ್ಮೊಮ್ಮೆ ಒಂದು ದಿನಕ್ಕೆ ಒಂದೇ ದೃಶ್ಯ ಮಾಡಲು ಸಾಧ್ಯ’ ಎಂದರು ಮೇಘಾ.

‘ತ್ರಿಬಲ್​ ರೈಡಿಂಗ್’ಗೆ ಮೂವರು ನಾಯಕಿಯರು. ಮೇಘಾ ಜತೆಗೆ ರಚನಾ ಇಂದರ್, ಅದಿತಿ ಪ್ರಭುದೇವ ಕೂಡ ನಟಿಸುತ್ತಿದ್ದಾರೆ. ಸಾಧು ಕೋಕಿಲ, ಕುರಿ ಪ್ರತಾಪ್​, ರವಿಶಂಕರ್, ರಂಗಾಯಣ ರಘು ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಶ್ರೀಮಹೇಶ್​ ಗೌಡ ಸಿನಿಮಾ ನಿರ್ದೇಶನ ಮಾಡಿದ್ದಾರೆ. ವೈ.ಎಂ. ರಾಮ್​ಗೋಪಾಲ್​ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಇದನ್ನೂ ಓದಿ: ವೀಕ್ಷಕರ ಬಳಿ ಕ್ಷಮೆ ಕೇಳಿದ ‘ಜೊತೆ ಜೊತೆಯಲಿ’ ನಟಿ ಮೇಘಾ ಶೆಟ್ಟಿ

ಮೇಘಾ ಶೆಟ್ಟಿ ಮನೆಗೆ ಬಂತು ಎರಡು ಐಷಾರಾಮಿ ಕಾರು; ಖುಷಿ ಹಂಚಿಕೊಂಡ ನಟಿ

Published On - 4:55 pm, Fri, 17 September 21

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?