‘ಕನ್ನಡತಿ’ ರಮೋಲಾ ಸೊಂಟ ಬಳುಕಿಸುವ ಪರಿಗೆ ಅಭಿಮಾನಿಗಳು ಫಿದಾ

ಬೆಲ್ಲಿ ಡ್ಯಾನ್ಸ್​ ಮಾಡೋದು ಅಷ್ಟು ಸುಲಭ ಅಲ್ಲ. ಅದಕ್ಕೆ ತುಂಬಾನೇ ಪ್ರ್ಯಾಕ್ಟಿಸ್​ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಶ್ರದ್ಧೆ ಬೇಕು. ಸೊಂಟ ಬಳುಕಬೇಕು. ರಮೋಲಾಗೆ ಬೆಲ್ಲಿ ಡ್ಯಾನ್ಸ್​ ಮಾಡುವ ಕಲೆ ಕರಗತವಾಗಿದೆ.

‘ಕನ್ನಡತಿ’ ರಮೋಲಾ ಸೊಂಟ ಬಳುಕಿಸುವ ಪರಿಗೆ ಅಭಿಮಾನಿಗಳು ಫಿದಾ
‘ಕನ್ನಡತಿ’ ರಮೋಲಾ ಸೊಂಟ ಬಳುಕಿಸುವ ಪರಿಗೆ ಅಭಿಮಾನಿಗಳು ಫಿದಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 17, 2021 | 8:25 PM

ಕಿರುತೆರೆ ನಟಿ ರಮೋಲಾ ‘ಕನ್ನಡತಿ’ ಧಾರಾವಾಹಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಅವರು ಮಾಡುವ ನೆಗೆಟಿವ್​ ಪಾತ್ರ ವೀಕ್ಷಕರಿಗೆ ಇಷ್ಟವಾಗಿದೆ. ಆದರೆ, ಅವರು ನಿಜಜೀವನದಲ್ಲಿ ಆ ರೀತಿ ಇಲ್ಲ. ಅವರು ಹೇಗೆ ಅನ್ನೋದು ‘ಬಿಗ್​ ಬಾಸ್​ ಮಿನಿ ಸೀಸನ್​’ ಮೂಲಕ ವೀಕ್ಷಕರಿಗೆ ಗೊತ್ತಾಗಿದೆ. ಅವರಲ್ಲಿ ನಾನಾ ರೀತಿಯ ಟ್ಯಾಲೆಂಟ್​ ಕೂಡ ಇದೆ. ಅದರಲ್ಲಿ ಬೆಲ್ಲಿ ಡ್ಯಾನ್ಸ್​ ಕೂಡ ಒಂದು.

ಬೆಲ್ಲಿ ಡ್ಯಾನ್ಸ್​ ಮಾಡೋದು ಅಷ್ಟು ಸುಲಭ ಅಲ್ಲ. ಅದಕ್ಕೆ ತುಂಬಾನೇ ಪ್ರ್ಯಾಕ್ಟಿಸ್​ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಶ್ರದ್ಧೆ ಬೇಕು. ಸೊಂಟ ಬಳುಕಬೇಕು. ರಮೋಲಾಗೆ ಬೆಲ್ಲಿ ಡ್ಯಾನ್ಸ್​ ಮಾಡುವ ಕಲೆ ಕರಗತವಾಗಿದೆ. ಅವರು, ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಒಂದನ್ನು ಹಾಕಿದ್ದಾರೆ. ಅದರಲ್ಲಿ ಅವರು ಅದ್ಭುತವಾಗಿ ರೀಲ್ಸ್​ ಮಾಡಿ ತೋರಿಸಿದ್ದಾರೆ. ಅವರು ಸೊಂಟ ಬಳುಕಿಸುವ ರೀತಿ ನೋಡಿ ಸಾಕಷ್ಟು ಜನರು ಮೆಚ್ಚಿಕೊಂಡಿದ್ದಾರೆ.

ರಮೋಲಾ ತೆರೆಮೇಲೆ ಮಾಡುತ್ತಿರುವ ಪಾತ್ರಕ್ಕೂ ಅವರ ನಿಜ ಜೀವನಕ್ಕೂ ಒಂದು ಸ್ವಲ್ಪವೂ ಸಾಮ್ಯತೆ ಇಲ್ಲ. ಅವರು ಇಲ್ಲಿವರೆಗೂ ದೊಡ್ಡ ಕಷ್ಟ ಎಂಬುದನ್ನು ನೋಡಿಲ್ಲ. ಯಾವ ವಿಚಾರದಲ್ಲೂ ಅವರು ಜವಾಬ್ದಾರಿ ಹೊತ್ತುಕೊಳ್ಳುವ ಪರಿಸ್ಥಿತಿ ಬಂದಿಲ್ಲ. ಅವರಿಗೆ ಇಷ್ಟ ಬಂದಿದ್ದನ್ನು ಓದುವ ಹಾಗೂ ಇಷ್ಟದ ಕೆಲಸ ಮಾಡುವ ಅವಕಾಶವನ್ನು ಕುಟುಂಬದವರು ನೀಡಿದ್ದರು. ಹೀಗಾಗಿ ಯಾವುದು ಕೂಡ ಸಮಸ್ಯೆ ಎಂದು ಅವರಿಗೆ ಅನಿಸೇ ಇಲ್ಲ. ರಮೋಲಾಗೆ ಅಡುಗೆ ಮಾಡೋಕೆ ಬರುವುದಿಲ್ಲ. ಇದನ್ನು ಅವರು ಓಪನ್​ ಆಗಿಯೇ ಬಿಗ್​ ಬಾಸ್ ಮಿನಿ ಸೀಸನ್​ನಲ್ಲಿ​ ಮನೆಯಲ್ಲಿ ಹೇಳಿಕೊಂಡಿದ್ದರು.

ಬಿಗ್​ ಬಾಸ್​ ಮನೆಯಲ್ಲಿ ರಮೋಲಾ ಅಡುಗೆ ಮಾಡೋಕೆ ವಿಳಂಬವಾಗಿತ್ತು. ಇದು ಮನೆಯವರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ, ಅಡುಗೆ ರುಚಿಯಾಗಿತ್ತು. ಮೊದಲ ಪ್ರಯತ್ನದಲ್ಲೇ ಅವರು ಯಶಸ್ವಿಯಾಗಿದ್ದರು. ಇದನ್ನು ನಿರಂಜನ್​ ಬಾಯ್ತುಂಬ ಹೊಗಳಿದ್ದರು. ಈ ಮಾತು ಕೇಳುತ್ತಿದ್ದಂತೆ ರಮೋಲಾ ಗಳಗಳನೆ ಅತ್ತಿದ್ದರು. ತೆರೆಮೇಲೆ ಕಾಣಿಸುವ ಸಾನಿಯಾಗೂ ತೆರೆಹಿಂದಿನ ರಮೋಲಾಗೂ ತುಂಬಾನೇ ವ್ಯತ್ಯಾಸವಿದೆ ಎಂದು ವೀಕ್ಷಕರು ಕಮೆಂಟ್​ ಮಾಡಿದ್ದರು.

ಇದನ್ನೂ ಓದಿ: ಕನ್ನಡತಿಯಲ್ಲಿ ಖಡಕ್​ ವಿಲನ್​ ರಮೋಲಾ ನಿಜ ಜೀವನದಲ್ಲಿ ಹೀಗಿದ್ದಾರಾ?; ಸಣ್ಣ ಘಟನೆಯಿಂದ ಎಲ್ಲವೂ ಗೊತ್ತಾಯ್ತು

‘ಕನ್ನಡತಿ’ ರಮೋಲಾ ಕೊಟ್ಟ ಖಡಕ್​ ಕೌಂಟರ್​ಗೆ ಸೈಲೆಂಟ್​ ಆದ ನಿರಂಜನ್​

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ