ಬಿಗ್​ ಬಾಸ್​ ಟಿಆರ್​ಪಿ ಹೆಚ್ಚಿಸೋಕೆ ಸ್ಟಾರ್​ ನಟನ ಮೊರೆ ಹೋದ ವಾಹಿನಿ; ಅಕ್ಕಿನೇನಿ ನಾಗಾರ್ಜುನ ಕಥೆ ಏನು?

‘ತೆಲುಗು ಬಿಗ್​ ಬಾಸ್​  ಸೀಸನ್​ 5’ ಆರಂಭವಾಗಿ ಕೆಲ ದಿನಗಳು ಕಳೆದಿವೆ. ಈ ಶೋನ ಟಿಆರ್​ಪಿ ಎಷ್ಟಿರಬಹುದು ಎನ್ನುವ ಕುತೂಹಲ ಅನೇಕರಲ್ಲಿತ್ತು. ಈಗ ಇದಕ್ಕೆ ಉತ್ತರ ಸಿಕ್ಕಿದೆ.

ಬಿಗ್​ ಬಾಸ್​ ಟಿಆರ್​ಪಿ ಹೆಚ್ಚಿಸೋಕೆ ಸ್ಟಾರ್​ ನಟನ ಮೊರೆ ಹೋದ ವಾಹಿನಿ; ಅಕ್ಕಿನೇನಿ ನಾಗಾರ್ಜುನ ಕಥೆ ಏನು?
ಬಿಗ್​ ಬಾಸ್​ ಟಿಆರ್​ಪಿ ಹೆಚ್ಚಿಸೋಕೆ ಸ್ಟಾರ್​ ನಟನ ಮೊರೆ ಹೋದ ವಾಹಿನಿ; ಅಕ್ಕಿನೇನಿ ನಾಗಾರ್ಜುನ ಕಥೆ ಏನು?

ತೆಲುಗು ಬಿಗ್​ ಬಾಸ್​ ಸೀಸನ್ 5ರ ಟಿಆರ್​ಪಿ ಕುಸಿದಿದೆ. ಪರಿಚಯದ ಮುಖಗಳು ಇಲ್ಲ ಅನ್ನೋದು ಇದಕ್ಕೆ ಪ್ರಮುಖ ಕಾರಣ. ತೀವ್ರವಾಗಿ ಕುಸಿದ ಬಿಗ್​ ಬಾಸ್​ ಟಿಆರ್​ಪಿ ಹೆಚ್ಚಿಸೋಕೆ ವಾಹಿನಿ ನಾನಾ ಕಸರತ್ತು ನಡೆಸುತ್ತಿದೆ. ಈಗ ವಾಹಿನಿಯವರು ತೆಲುಗಿನ ಸ್ಟಾರ್​ ನಟನ ಮೊರೆ ಹೋಗಿದ್ದಾರೆ. ಈ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಹಾಗಾದರೆ, ನಿರೂಪಕ ಅಕ್ಕಿನೇನಿ ನಾಗಾರ್ಜುನ ಕಥೆ ಏನು ಎನ್ನುವ ಪ್ರಶ್ನೆ ಕೂಡ ಮೂಡಿದೆ.

‘ತೆಲುಗು ಬಿಗ್​ ಬಾಸ್​  ಸೀಸನ್​ 5’ ಆರಂಭವಾಗಿ ಕೆಲ ದಿನಗಳು ಕಳೆದಿವೆ. ಈ ಶೋನ ಟಿಆರ್​ಪಿ ಎಷ್ಟಿರಬಹುದು ಎನ್ನುವ ಕುತೂಹಲ ಅನೇಕರಲ್ಲಿತ್ತು. ಈಗ ಇದಕ್ಕೆ ಉತ್ತರ ಸಿಕ್ಕಿದೆ. ಬಿಗ್​ ಬಾಸ್​ ಶೋ 15.70 ಟಿಆರ್​ಪಿ ಪಡೆದುಕೊಂಡಿದೆ. ಉಳಿದ ಧಾರಾವಾಹಿ ಹಾಗೂ ಶೋಗಳಿಗೆ ಹೋಲಿಕೆ ಮಾಡಿದರೆ ಬಿಗ್​ ಬಾಸ್​ ಟಿಆರ್​ಪಿ ಮುಂಚೂಣಿಯಲ್ಲಿದೆ. ಆದರೆ, ಶೋಗೆ ಆಗುತ್ತಿರುವ ವೆಚ್ಚಕ್ಕೆ ಹೋಲಿಕೆ ಮಾಡಿದರೆ ಬಿಗ್​ ಬಾಸ್​ ಟಿಆರ್​ಪಿ ಅಂದುಕೊಂಡ ಗುರಿತಲುಪಿಲ್ಲ. ಇದಕ್ಕೆ ವಾಹಿನಿ ಹೊಸ ಪ್ಲ್ಯಾನ್​ ಒಂದನ್ನು ರೂಪಿಸಿದೆ.

ಟಾಲಿವುಡ್​ನ ಖ್ಯಾತ ನಟ ರಾಮ್​ ಚರಣ್​ ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಹಾಗಂತ ನಾಗಾರ್ಜುನ ಬದಲಿಗೆ ಇವರು ಬಿಗ್​ ಬಾಸ್​ ನಿರೂಪಣೆ ಮಾಡುತ್ತಿಲ್ಲ. ರಾಮ್​ ಚರಣ್​ ಬಿಗ್​ ಬಾಸ್​ ಮನೆ ಒಳಗೆ ತೆರಳಲಿದ್ದಾರೆ. ಅಲ್ಲಿ ಸ್ಪರ್ಧಿಗಳ ಜತೆ ಕೆಲ ಸಮಯ ಸಂವಾದ ನಡೆಸಲಿದ್ದಾರೆ.

ರಾಮ್ ಚರಣ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತಿ ಅವರದ್ದು. ಒಂದೊಮ್ಮೆ ಬಿಗ್​ ಬಾಸ್​ ಮನೆ ಒಳಗೆ ಅವರು ತೆರಳಿದರೆ ಬಿಗ್​ ಬಾಸ್​ ನೋಡುಗರ ಸಂಖ್ಯೆ ಹೆಚ್ಚಲಿದೆ. ಈ ಮೂಲಕ ಜನರನ್ನು ಹೆಚ್ಚು ಸೆಳೆಯುವ ಆಲೋಚನೆಯಲ್ಲಿ ವಾಹಿನಿ ಇದೆ.

ಈ ಬಾರಿ 19 ಸ್ಪರ್ಧಿಗಳು ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಮತ್ತು ಕಿರುತೆರೆ ಸೆಲೆಬ್ರಿಟಿಗಳ ಜೊತೆಗೆ ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿರುವ ವ್ಯಕ್ತಿಗಳಿಗೂ ಈ ಬಾರಿ ತೆಲುಗು ಬಿಗ್​ ಬಾಸ್​ ಚಾನ್ಸ್​ ನೀಡಿದೆ. ಆದರೆ, ಇವರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಗೊತ್ತಿರುವವರು. ಉಳಿದವರೆಲ್ಲ ಹೊಸ ಮುಖಗಳೇ. ಇದರಿಂದ ವೀಕ್ಷಕರು ಬೇಸರಗೊಂಡಿದ್ದಾರೆ.

ಇದನ್ನೂ ಓದಿ: ಆನ್​ಲೈನ್​ನಲ್ಲೇ ಎಂಗೇಜ್​ಮೆಂಟ್​ ಮಾಡಿಕೊಂಡ ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಸ್ಪರ್ಧಿ 

ಬಿಗ್​ ಬಾಸ್​ ಟಿಆರ್​ಪಿಯಲ್ಲಿ ತೀವ್ರ ಕುಸಿತ; ಅರ್ಧಕ್ಕೆ ನಿಲ್ಲಲಿದೆ ಶೋ?

Read Full Article

Click on your DTH Provider to Add TV9 Kannada