ಬಿಗ್​ ಬಾಸ್​ ಟಿಆರ್​ಪಿಯಲ್ಲಿ ತೀವ್ರ ಕುಸಿತ; ಅರ್ಧಕ್ಕೆ ನಿಲ್ಲಲಿದೆ ಶೋ?

ತೆಲುಗು ಬಿಗ್​ ಬಾಸ್​ ಆರಂಭವಾಗಿ ಕೆಲ ದಿನಗಳು ಕಳೆದಿವೆ. ಈ ಶೋನ ಟಿಆರ್​ಪಿ ಎಷ್ಟಿರಬಹುದು ಎನ್ನುವ ಕುತೂಹಲ ಅನೇಕರಲ್ಲಿತ್ತು. ಈಗ ಇದಕ್ಕೆ ಉತ್ತರ ಸಿಕ್ಕಿದೆ.

ಬಿಗ್​ ಬಾಸ್​ ಟಿಆರ್​ಪಿಯಲ್ಲಿ ತೀವ್ರ ಕುಸಿತ; ಅರ್ಧಕ್ಕೆ ನಿಲ್ಲಲಿದೆ ಶೋ?
ಬಿಗ್​ ಬಾಸ್​ ಟಿಆರ್​ಪಿಯಲ್ಲಿ ತೀವ್ರ ಕುಸಿತ; ಅರ್ಧಕ್ಕೆ ನಿಲ್ಲಲಿದೆ ಶೋ?

ರಿಯಾಲಿಟಿ ಶೋಗಳ ಪೈಕಿ ಬಿಗ್​ ಬಾಸ್​ ಸಾಕಷ್ಟು ಜನಮನ್ನಣೆ ಪಡೆದುಕೊಂಡಿದೆ. ಇದನ್ನು ನೋಡೋಕೆ ದೊಡ್ಡ ವೀಕ್ಷಕರ ಬಳಗವೇ ಇದೆ. ಇದಕ್ಕೆ ಕಾರಣಗಳು ಹಲವು. ಸೆಲೆಬ್ರಿಟಿಗಳ ದಂಡು, ಲವ್​ ಸ್ಟೋರಿ, ಕಾಂಟ್ರವರ್ಸಿ ಬಿಗ್​ ಬಾಸ್​ ಮನೆಯ ಹೈಲೈಟ್. ಈ ಕಾರಣಕ್ಕೆ ಸಾಕಷ್ಟು ಮಂದಿ ಈ ಶೋ ವೀಕ್ಷಿಸೋಕೆ ಇಷ್ಟೊಡುತ್ತಾರೆ. ಆದರೆ, ತೆಲುಗು ಬಿಗ್​ ಬಾಸ್​ಗೆ ಸಂಕಷ್ಟ ಎದುರಾಗಿದ್ದು, ಶೋ ಅರ್ಧಕ್ಕೆ ನಿಂತರೂ ಅಚ್ಚರಿ ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ತೆಲುಗು ಬಿಗ್​ ಬಾಸ್​  ಸೀಸನ್​ ಐದು ಆರಂಭವಾಗಿ ಕೆಲ ದಿನಗಳು ಕಳೆದಿವೆ. ಈ ಶೋನ ಟಿಆರ್​ಪಿ ಎಷ್ಟಿರಬಹುದು ಎನ್ನುವ ಕುತೂಹಲ ಅನೇಕರಲ್ಲಿತ್ತು. ಈಗ ಇದಕ್ಕೆ ಉತ್ತರ ಸಿಕ್ಕಿದೆ. ಬಿಗ್​ ಬಾಸ್​ ಶೋ 15.70 ಟಿಆರ್​ಪಿ ಪಡೆದುಕೊಂಡಿದೆ. ಉಳಿದ ಧಾರಾವಾಹಿ ಹಾಗೂ ಶೋಗಳಿಗೆ ಹೋಲಿಕೆ ಮಾಡಿದರೆ ಬಿಗ್​ ಬಾಸ್​ ಟಿಆರ್​ಪಿ ಮುಂಚೂಣಿಯಲ್ಲಿದೆ. ಆದರೆ, ಶೋಗೆ ಆಗುತ್ತಿರುವ ವೆಚ್ಚಕ್ಕೆ ಹೋಲಿಕೆ ಮಾಡಿದರೆ ಬಿಗ್​ ಬಾಸ್​ ಟಿಆರ್​ಪಿ ತುಂಬಾನೇ ಕುಸಿತ ಕಂಡಂತೆ ಆಗಿದೆ.

ಈ ಬಾರಿ 19 ಸ್ಪರ್ಧಿಗಳು ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಮತ್ತು ಕಿರುತೆರೆ ಸೆಲೆಬ್ರಿಟಿಗಳ ಜೊತೆಗೆ ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿರುವ ವ್ಯಕ್ತಿಗಳಿಗೂ ಈ ಬಾರಿ ತೆಲುಗು ಬಿಗ್​ ಬಾಸ್​ ಚಾನ್ಸ್​ ನೀಡಿದೆ. ಆದರೆ, ಇವರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಗೊತ್ತಿರುವವರು. ಉಳಿದವರೆಲ್ಲ ಹೊಸ ಮುಖಗಳೇ. ಇದರಿಂದ ವೀಕ್ಷಕರು ಬೇಸರಗೊಂಡಿದ್ದಾರೆ. ಟಿಆರ್​ಪಿ ಕುಸಿಯೋಕೆ ಇದು ಕೂಡ ಪ್ರಮುಖ ಕಾರಣ.

ಕೆಲವೇ ದಿನಗಳಲ್ಲಿ ಐಪಿಎಲ್​, ಅದಾದ ನಂತರದಲ್ಲಿ ಟಿ20 ವರ್ಲ್ಡ್​​​ಕಪ್​ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಬಿಗ್​ ಬಾಸ್​ ನೋಡುವವರ ಸಂಖ್ಯೆ ಕಡಿಮೆ. ಟಿಆರ್​ಪಿ ದೃಷ್ಟಿಯಲ್ಲಿ ಬಿಗ್​ ಬಾಸ್​ಗೆ ಇದು ಕೂಡ ಅಡೆತಡೆಯೇ. ಬಿಗ್​ ಬಾಸ್​ ಮನೆಯಲ್ಲಿ ಒಂದಷ್ಟು ವಿವಾದಗಳು ಹುಟ್ಟಿಕೊಂಡರೆ ಖಂಡಿತವಾಗಿಯೂ ಹೆಚ್ಚು ವೀಕ್ಷಕರನ್ನು ಸೆಳೆಯೋಕೆ ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ, ಶೋ ಸಂಕಷ್ಟ ಎದುರಿಸೋದು ಪಕ್ಕಾ ಎನ್ನುವ ಮಾತು ಕೇಳಿ ಬಂದಿದೆ. ಇದರಿಂದ ಶೋ ಅನ್ನು ಅರ್ಧಕ್ಕೆ ನಿಲ್ಲಿಸುವ ನಿರ್ಧಾರ ಕೈಗೊಂಡರು ಅಚ್ಚರಿ ಇಲ್ಲ ಎನ್ನುವ ಮಾತು ಕೇಳಿ ಬಂದಿದೆ.

ಇದನ್ನೂ ಓದಿ: ‘ಆ್ಯಸಿಡ್​ ಹಾಕಲು ಮಾಜಿ ಪ್ರಿಯಕರ ನನ್ನನ್ನು ದಾರಿಯಲ್ಲಿ ಅಟ್ಟಾಡಿಸಿಕೊಂಡು ಹೋಗಿದ್ದ; ಕರಾಳ ಸತ್ಯ ಬಿಚ್ಚಿಟ್ಟ ಬಿಗ್​ ಬಾಸ್​ ಸ್ಪರ್ಧಿ

Read Full Article

Click on your DTH Provider to Add TV9 Kannada