Salman Khan: ಬಿಗ್​ಬಾಸ್​ 15ಕ್ಕೆ ಸಲ್ಮಾನ್ ಪಡೆಯೋ ಸಂಭಾವನೆ ನೂರಿನ್ನೂರು ಕೋಟಿಯಲ್ಲ; ಬರೋಬ್ಬರಿ ₹ 350 ಕೋಟಿ!

Big Boss 15: ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್​ಗೆ ವಿಪರೀತ ಬೇಡಿಕೆಯಿದೆ. ಇದೀಗ ಅವರ ಬಿಗ್​ಬಾಸ್ 15ರ ಸಂಭಾವನೆಯ ವಿಚಾರ ಕೇಳಿ ಎಲ್ಲರೂ ದಂಗಾಗಿದ್ದಾರೆ.

Salman Khan: ಬಿಗ್​ಬಾಸ್​ 15ಕ್ಕೆ ಸಲ್ಮಾನ್ ಪಡೆಯೋ ಸಂಭಾವನೆ ನೂರಿನ್ನೂರು ಕೋಟಿಯಲ್ಲ; ಬರೋಬ್ಬರಿ ₹ 350 ಕೋಟಿ!
ಸಲ್ಮಾನ್ ಖಾನ್ (ಸಾಂದರ್ಭಿಕ ಚಿತ್ರ)
TV9kannada Web Team

| Edited By: shivaprasad.hs

Sep 19, 2021 | 11:49 AM

ಬಾಲಿವುಡ್​ನ ಖ್ಯಾತ ನಟ ಸಲ್ಮಾನ್ ಖಾನ್ ತಮ್ಮ ಚಿತ್ರಗಳಿಗೆ ಬಹುದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಹಾಗೆಯೇ ಹಿಂದಿಯ ಜನಪ್ರಿಯ ರಿಯಾಲಿಟಿ ಶೋ, ಬಿಗ್​ಬಾಸ್ ನಿರೂಪಣೆಯ ಜವಾಬ್ದಾರಿಯನ್ನೂ ಹೊತ್ತಿರುವ ಅವರು ಅದಕ್ಕೆ ಎಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದು ಅಭಿಮಾನಿಗಳಿಗೆ ಕುತೂಹಲದ ವಿಷಯ. ಕಾರಣ, ಇತ್ತೀಚೆಗಷ್ಟೇ ಸಲ್ಮಾನ್ ಸಣ್ಣ ಜಾಹಿರಾತೊಂದನ್ನು ಕೇವಲ ಶೇರ್ ಮಾಡಿಕೊಂಡಿದ್ದಕ್ಕೆ ಬರೋಬ್ಬರಿ 50 ಲಕ್ಷ ರೂ ಪಡೆದಿದ್ದರು ಎಂಬ ಮಾಹಿತಿ ಬಹುದೊಡ್ಡ ಸುದ್ದಿಯಾಗಿತ್ತು. ಇದೀಗ ಸಲ್ಮಾನ್ ಬಿಗ್​ಬಾಸ್ ನಿರೂಪಣೆಗೆ ಪಡೆಯುತ್ತಿರುವ ಮೊತ್ತ ಎಲ್ಲರ ಹುಬ್ಬೇರಿಸಿದೆ.

ಸಲ್ಮಾನ್ ಖಾನ್ ಬಿಗ್​ಬಾಸ್ ನಿರೂಪಣೆಗೆ ಅಪಾರ ಅಭಿಮಾನಿಗಳಿದ್ದಾರೆ. ಕಾರಣ, ಈ ಬಾರಿ ಬಿಗ್​ಬಾಸ್ ಕಿರುತೆರೆಗೂ ಮೊದಲು ಒಟಿಟಿಯಲ್ಲಿ ಪ್ರಸಾರವಾಗಿತ್ತು. ಅದನ್ನು ಕರಣ್ ಜೋಹರ್ ನಡೆಸಿಕೊಟ್ಟಿದ್ದರು. ಆಘ ಸ್ಪರ್ಧಿಗಳು, ವೀಕ್ಷಕರು ಸೇರಿದಂತೆ ಬಹುತೇಕರು ಸಲ್ಮಾನ್​ರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದರು. ಜೊತೆಗೆ ಕರಣ್ ಜೋಹರ್ ಪಕ್ಷಪಾತ ಎಸಗುತ್ತಾರೆ. ಆದರೆ ಸಲ್ಮಾನ್ ಎಲ್ಲರ ಅಹವಾಲನ್ನೂ ಕೇಳುತ್ತಾರೆ ಎಂದು ಸ್ಪರ್ಧಿಗಳು ಆರೋಪ ಕೂಡ ಮಾಡಿದ್ದರು. ಇದೀಗ ಎಲ್ಲರ ಕಾಯುವಿಕೆಗೆ ಅಂತೂ ಕೊನೆ ಬಂದಿದೆ. ಬಿಗ್​ಬಾಸ್ ಒಟಿಟಿ ಮುಕ್ತಾಯವಾಗಿದ್ದು, ಇನ್ನು ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಚಾನೆಲ್​ನಲ್ಲಿ ಶೋ ಪ್ರಸಾರವಾಗಲಿದೆ.

ಇದೀಗ ಸಲ್ಮಾನ್ ಖಾನ್ ಬಿಗ್​ಬಾಸ್​ಗೆ ಎಷ್ಟು ಹಣ ಪಡೆಯುತ್ತಾರೆ ಎಂಬ ವಿಚಾರ ಎಲ್ಲೆಡೆ ಸುದ್ದಿಯಾಗುತ್ತಿದೆ. ಜೊತೆಗೆ ಕೆಲವೊಒಂದು ಮೂಲಗಳ ಮಾಹಿತಿಯನ್ನೂ ಉಲ್ಲೇಖಿಸಿ ಮೊತ್ತದ ಕುರಿತೂ ಚರ್ಚಿಸಲಾಗುತ್ತಿದೆ. ಹೌದು. ಸಲ್ಮಾನ್ ಬಿಗ್​ಬಾಸ್ 15ರ ಸಂಚಿಕೆಯ 14 ವಾರಗಳ ಕಾರ್ಯಕ್ರಮಕ್ಕಾಗಿ ಬರೋಬ್ಬರಿ ₹ 350 ಕೋಟಿಯನ್ನು ಪಡೆಯುತ್ತಾರೆ ಎಂದು ‘ಲೆಟ್ಸ್ ಒಟಿಟಿ’ ವರದಿ ಮಾಡಿದೆ. ಈ ಮೊತ್ತವನ್ನು ಕೇಳಿ ಎಲ್ಲರೂ ದಂಗಾಗಿದ್ದು ಹೌದಾದರೂ, ಸಲ್ಮಾನ್ ವರ್ಚಸ್ಸಿಗೆ ಈ ಮೊತ್ತ ಕಡಿಮೆಯೇನಲ್ಲ ಎಂದು ಮಾತನಾಡಿಕೊಳ್ಳುತ್ತಿದ್ಧಾರೆ.

ಇದಕ್ಕೆ ಮತ್ತೊಂದು ಕಾರಣವಿದೆ ಎಂಬ ಮಾತೂ ಕೇಳಿಬರುತ್ತಿದೆ. ಕಾರಣ, ಬಿಗ್ ಬಾಸ್ 14 ನಡೆದಾಗ ಕೊರೊನಾ ಕಾರಣದಿಂದ ಸಲ್ಮಾನ್ ಕಡಿಮೆ ಸಂಭಾವವನೆ ತೆಗೆದುಕೊಂಡಿದ್ದರಂತೆ. ಆದ್ದರಿಂದಲೇ ಈ ಬಾರಿ 15 ಪ್ರತಿಶತ ಸಂಭಾವನೆ ಅಧಿಕಗೊಳಿಸಿದ್ದಾರೆ ಎನ್ನುತ್ತವೆ ಮೂಲಗಳು. ಆದರೆ ಇದನ್ನು ಚಾನೆಲ್ ಅಥವಾ ಸಲ್ಮಾನ್ ಇನ್ನೂ ಅಧಿಕೃತ ಎಂದು ಹೇಳಿಲ್ಲ, ಹಾಗಂತ ನಿರಾಕರಿಸಿಯೂ ಇಲ್ಲ. ಇದು ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಅದೇನೇ ಇದ್ದರೂ ಸಲ್ಮಾನ್ ಅವರನ್ನು ಕಿರುತೆರೆಯಲ್ಲಿ ಕಾಣಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುವುದು ಸುಳ್ಳಲ್ಲ.

ಇದನ್ನೂ ಓದಿ:

ದಿವ್ಯಾ ಅಗರ್​ವಾಲ್​ಗೆ ಒಲಿದ ಬಿಗ್​ ಬಾಸ್​ ಒಟಿಟಿ; ಶಮಿತಾ ಶೆಟ್ಟಿಗೆ ನಿರಾಸೆ, ಇವರಿಗೆ ಸಿಗ್ತಿರೋ ಹಣ ಎಷ್ಟು?

ಸಲ್ಮಾನ್​ ಖಾನ್​ ಮಾಡಿದ 30 ಸೆಕೆಂಡ್​ ಕೆಲಸಕ್ಕೆ 50 ಲಕ್ಷ ರೂ. ಸಂಬಳ; ಸಲ್ಲು ಬರೆದಿದ್ದು ಒಂದೇ ವಾಕ್ಯ

(Salman Khan gets Rs 350 Crore for his Big Boss hosting says reports)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada