AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್​ ಖಾನ್​ ಮಾಡಿದ 30 ಸೆಕೆಂಡ್​ ಕೆಲಸಕ್ಕೆ 50 ಲಕ್ಷ ರೂ. ಸಂಬಳ; ಸಲ್ಲು ಬರೆದಿದ್ದು ಒಂದೇ ವಾಕ್ಯ

ಸಲ್ಮಾನ್​ ಖಾನ್​ ಹಂಚಿಕೊಂಡಿರುವ ಒಂದು ಜಾಹೀರಾತಿನಿಂದ ಅವರಿಗೆ ಬರೋಬ್ಬರಿ 50 ಲಕ್ಷ ರೂ. ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ. ಅದು ಶಾರುಖ್​ ಖಾನ್​ಗೆ ಸಂಬಂಧಿಸಿದ ಜಾಹೀರಾತು ಎಂಬುದು ವಿಶೇಷ.

ಸಲ್ಮಾನ್​ ಖಾನ್​ ಮಾಡಿದ 30 ಸೆಕೆಂಡ್​ ಕೆಲಸಕ್ಕೆ 50 ಲಕ್ಷ ರೂ. ಸಂಬಳ; ಸಲ್ಲು ಬರೆದಿದ್ದು ಒಂದೇ ವಾಕ್ಯ
ಸಲ್ಮಾನ್​ ಖಾನ್​
TV9 Web
| Edited By: |

Updated on: Sep 18, 2021 | 9:34 AM

Share

ನಟ ಸಲ್ಮಾನ್​ ಖಾನ್​ಗೆ ಯಾವ ಪರಿ ಡಿಮ್ಯಾಂಡ್​ ಇದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಸಿನಿಮಾಗಳು ಸೋತರೂ ಅವರ ಸ್ಟಾರ್​ ಗಿರಿ ಕಿಂಚಿತ್ತೂ ಕಮ್ಮಿ ಆಗುತ್ತಿಲ್ಲ. ಹಾಗಾಗಿ ಅವರಿಗೆ ನೂರಾರು ಕೋಟಿ ರೂ. ಸಂಭಾವನೆ ಸಿಗುತ್ತದೆ. ಸಿನಿಮಾಗಳು ಮಾತ್ರವಲ್ಲದೇ ಬಿಗ್​ ಬಾಸ್​ ರಿಯಾಲಿಟಿ ಶೋ ನಿರೂಪಣೆಯಿಂದಲೂ ಅವರು ಭರ್ಜರಿ ಸಂಬಳ ಪಡೆಯುತ್ತಾರೆ. ಅದೆಲ್ಲವನ್ನೂ ಮೀರಿಸುವಂತಹ ಸುದ್ದಿಯೊಂದು ಈಗ ಕೇಳಿಬಂದಿದೆ. ಸಣ್ಣದೊಂದು ಕೆಲಸ ಮಾಡಿದ್ದಕ್ಕೆ ಸಲ್ಮಾನ್​ ಖಾನ್​ಗೆ ಬರೋಬ್ಬರಿ 50 ಲಕ್ಷ ರೂ. ಸಂಭಾವನೆ ನೀಡಲಾಗಿದೆ ಎಂಬ ಮಾಹಿತಿ ಬಿ-ಟೌನ್​ ಅಂಗಳದಲ್ಲಿ ಹರಿದಾಡುತ್ತಿದೆ. ಏನದು ಕೆಲಸ? ಒಂದು ಒಂದೇ ಒಂದು ಜಾಹೀರಾತನ್ನು ಶೇರ್​ ಮಾಡಿದ್ದು! ಈ ಕೆಲಸಕ್ಕೆ 30 ಸೆಕೆಂಡ್​ ಸಮಯ ಸಾಕು.

ಸೆಲೆಬ್ರಿಟಿಗಳು ತಮ್ಮ ಸೋಶಿಯಲ್​ ಮೀಡಿಯಾ ಪೋಸ್ಟ್​ ಮೂಲಕವೂ ಹಣ ಗಳಿಸುತ್ತಾರೆ. ಕಮರ್ಷಿಯಲ್​ ಜಾಹೀರಾತುಗಳನ್ನು ತಮ್ಮ ಖಾತೆಗಳಲ್ಲಿ ಶೇರ್​ ಮಾಡಿಕೊಂಡರೆ ಅವರಿಗೆ ಹಣ ಸಿಗುತ್ತದೆ. ಈಗ ಸಲ್ಮಾನ್​ ಖಾನ್​ ಹಂಚಿಕೊಂಡಿರುವ ಒಂದು ಜಾಹೀರಾತಿನಿಂದ ಅವರಿಗೆ ಬರೋಬ್ಬರಿ 50 ಲಕ್ಷ ರೂ. ಸಿಕ್ಕಿದೆ ಎನ್ನಲಾಗಿದೆ. ಯಾವುದು ಆ ಜಾಹೀರಾತು? ಶಾರುಖ್​ ಖಾನ್​ ಓಟಿಟಿ ಎಂಟ್ರಿಗೆ ಸಕಲ ಸಿದ್ಧತೆ ನಡೆಯುತ್ತಿದೆ. ಅದಕ್ಕಾಗಿ ಒಂದು ಜಾಹೀರಾತು ತಯಾರಿಸಲಾಗಿದ್ದು, ಅದನ್ನು ಸಲ್ಮಾನ್​ ಖಾನ್​ ಶೇರ್​ ಮಾಡಿಕೊಂಡಿದ್ದಾರೆ. ಅದಕ್ಕೆ ಅವರಿಗೆ 50 ಲಕ್ಷ ರೂ. ಹಣ ನೀಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಈವರೆಗೂ ಶಾರುಖ್​ ಖಾನ್​ ಓಟಿಟಿ ಪ್ರವೇಶಿಸಿಲ್ಲ. ಇತ್ತ ಅವರ ಸಿನಿಮಾಗಳು ಕೂಡ ಬಾಕ್ಸ್​ಆಫೀಸ್​ನಲ್ಲಿ ಗೆಲ್ಲುತ್ತಿಲ್ಲ. ಹಾಗಾಗಿ ಅವರನ್ನು ಓಟಿಟಿಗೆ ಕರೆದುಕೊಂಡು ಬರಲು ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಸಂಸ್ಥೆ ಪ್ಲ್ಯಾನ್​ ಮಾಡಿದೆ. ಅದಕ್ಕೆ ಶಾರುಖ್​ ಕೂಡ ಒಪ್ಪಿದ್ದು, ಜಾಹೀರಾತುಗಳ ಮೂಲಕ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ. ಅದಕ್ಕೆ ಸಲ್ಮಾನ್​ ಖಾನ್​ ಕೂಡ ಕೈ ಜೋಡಿಸಿದ್ದಾರೆ. ಜಾಹೀರಾತನ್ನು ಶೇರ್​ ಮಾಡಿಕೊಂಡಿರುವ ಅವರು, ‘ಶಾರುಖ್​ ಖಾನ್​ಗೆ ಸ್ವಾಗತ ಮಾಡುವುದಿಲ್ಲವೇ?’ ಎಂದು ಒಂದೇ ಒಂದು ವಾಕ್ಯ ಕ್ಯಾಪ್ಷನ್​ ನೀಡಿದ್ದಾರೆ. ಇಷ್ಟು ಮಾಡಿದ್ದಕ್ಕೆ ಭಾರಿ ಮೊತ್ತದ ಸಂಭಾವನೆಯನ್ನು ಜೇಬಿಗೆ ಇಳಿಸಿಕೊಂಡಿದ್ದಾರೆ.

ಇದನ್ನೂ ಓದಿ:

ಸಿದ್ದಾರ್ಥ್​ ಶುಕ್ಲಾ ಸಾವಿನ ಬಗ್ಗೆ ನಗುತ್ತಾ ಮಾತನಾಡಿದ್ದ ಸಲ್ಮಾನ್​ ಖಾನ್​: ಶಾಕಿಂಗ್​ ವಿಡಿಯೋ ವೈರಲ್

ಟ್ವಿಟರ್​ನಲ್ಲಿ ಟ್ರೆಂಡ್​ ಆಯ್ತು ಶಾರುಖ್​ ಖಾನ್​ ‘ಪಠಾಣ್​’; ಸಿನಿಮಾ ತಂಡ ಕೊಟ್ಟ ಹೊಸ ಅಪ್​ಡೇಟ್​ ಏನು?

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!