ದಿವ್ಯಾ ಅಗರ್​ವಾಲ್​ಗೆ ಒಲಿದ ಬಿಗ್​ ಬಾಸ್​ ಒಟಿಟಿ; ಶಮಿತಾ ಶೆಟ್ಟಿಗೆ ನಿರಾಸೆ, ಇವರಿಗೆ ಸಿಗ್ತಿರೋ ಹಣ ಎಷ್ಟು?

TV9 Digital Desk

| Edited By: Rajesh Duggumane

Updated on:Sep 18, 2021 | 11:26 PM

ವೂಟ್​ ಆ್ಯಪ್​ನಲ್ಲಿ ​ ಲೈವ್​ ವೀಕ್ಷಣೆ ಮಾಡೋಕೆ ಕನ್ನಡ ಬಿಗ್​ ಬಾಸ ಸೀಸನ್​ 8ರಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಇದಕ್ಕಿಂತ ಕೊಂಚ ಭಿನ್ನವಾಗಿ ಹಿಂದಿಯವರು ಮಾಡಿದ್ದರು. ‘ಬಿಗ್​ ಬಾಸ್​ ಒಟಿಟಿ’ ಎಂದರೆ ಕೇವಲ ವೂಟ್​ ಆ್ಯಪ್​ನಲ್ಲಿ ಮಾತ್ರ ಪ್ರಸಾರವಾಗುತ್ತದೆ.

ದಿವ್ಯಾ ಅಗರ್​ವಾಲ್​ಗೆ ಒಲಿದ ಬಿಗ್​ ಬಾಸ್​ ಒಟಿಟಿ; ಶಮಿತಾ ಶೆಟ್ಟಿಗೆ ನಿರಾಸೆ, ಇವರಿಗೆ ಸಿಗ್ತಿರೋ ಹಣ ಎಷ್ಟು?
Follow us

ಹಿಂದಿಯವರು ‘ಬಿಗ್​ ಬಾಸ್​ ಒಟಿಟಿ’ ಹೆಸರಿನ ಹೊಸ ಕಾನ್ಸೆಪ್ಟ್​ ಮೂಲಕ ಪ್ರೇಕ್ಷಕರ ಎದುರು ಬಂದಿದ್ದರು. ಕೇವಲ 6 ವಾರ ನಡೆದ ಈ ಶೋ ಈಗ ಪೂರ್ಣಗೊಂಡಿದೆ  ದಿವ್ಯಾ ಅಗರ್​ವಾಲ್​ ವಿನ್ನರ್​ ಆಗಿ ಹೊರ ಹೊಮ್ಮಿದ್ದಾರೆ. ಈ ಮೂಲಕ ‘ಬಿಗ್​ ಬಾಸ್​ ಒಟಿಟಿ’ ಶೋನ ಮೊದಲ ಸೀಸನ್ ವಿನ್​ ಆಗಿದ್ದಾರೆ. ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ತಿಳಿಸಲಾಗುತ್ತಿದೆ. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಎರಡನೇ ರನ್ನರ್​ ಅಪ್​ ಆದರೆ, ನಿಶಾಂತ್​ ಭಟ್​ ಮೊದಲ ರನ್ನರ್​ ಅಪ್​ ಆಗಿದ್ದಾರೆ. 

ವೂಟ್​ ಆ್ಯಪ್​ನಲ್ಲಿ ​ ಲೈವ್​ ವೀಕ್ಷಣೆ ಮಾಡೋಕೆ ಕನ್ನಡ ಬಿಗ್​ ಬಾಸ ಸೀಸನ್​ 8ರಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಇದಕ್ಕಿಂತ ಕೊಂಚ ಭಿನ್ನವಾಗಿ ಹಿಂದಿಯವರು ಮಾಡಿದ್ದರು. ‘ಬಿಗ್​ ಬಾಸ್​ ಒಟಿಟಿ’ ಎಂದರೆ ಕೇವಲ ವೂಟ್​ ಆ್ಯಪ್​ನಲ್ಲಿ ಮಾತ್ರ ಪ್ರಸಾರವಾಗುತ್ತದೆ. ಈ ಶೋಗೆ ಹಲವು ಸೆಲೆಬ್ರಿಟಿಗಳು, ಸೋಶಿಯಲ್​ ಮೀಡಿಯಾ ಇನ್​ಫ್ಲ್ಯುನ್ಸರ್​ಗಳು ಬಂದಿದ್ದರು. ಅಂತಿಮವಾಗಿ, ದಿವ್ಯಾ ಅಗರ್​ವಾಲ್​ ವಿನ್ನರ್​ ಆಗಿದ್ದಾರೆ.

ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್​ ಬಾಸ್ ನಿರೂಪಣೆಯನ್ನು ಸಲ್ಮಾನ್​ ಖಾನ್​ ಮಾಡಿದ್ದರು. ಆದರೆ, ‘ಬಿಗ್​ ಬಾಸ್​ ಒಟಿಟಿ’ಯನ್ನು ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್​ ಜೋಹರ್​ ನಡೆಸಿಕೊಟ್ಟಿದ್ದಾರೆ. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ, ರಾಕೇಶ್ ಬಾಪಟ್, ದಿವ್ಯಾ ಅಗರ್ವಾಲ್, ನಿಶಾಂತ್ ಭಟ್ ಹಾಗೂ ಪ್ರತೀಕ್ ಸೆಹಜ್ಪಾಲ್ ಫಿನಾಲೆಯಲ್ಲಿ ಇದ್ದರು. ಅಂತಿಮವಾಗಿ ಕರಣ್​ ಅವರು ದಿವ್ಯಾ ಅಗರ್​ವಾಲ್​ ಹೆಸರನ್ನು ವಿನ್ನರ್​ ಎಂದು ಘೋಷಣೆ ಮಾಡಿದರು. ಇವರಿಗೆ 25 ಲಕ್ಷ ರೂಪಾಯಿ ಬಹುಮಾನ ಹಣ ಸಿಕ್ಕಿದೆ.

ಬಿಗ್​ ಬಾಸ್​ ಒಟಿಟಿ ಮಾದರಿ ಹೊಸತು ಎನ್ನುವ ಕಾರಣಕ್ಕೆ ಮತ್ತು ಕೊವಿಡ್​ ಮೂರನೇ ಅಲೆಯ ಭಯದಿಂದ ಕೇವಲ 6 ವಾರ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇದರ ಅವಧಿ ವಿಸ್ತರಣೆ ಆಗಬಹುದು.

ಇದನ್ನೂ ಓದಿ: ಬಿಗ್​ ಬಾಸ್​ ಟಿಆರ್​ಪಿ ಹೆಚ್ಚಿಸೋಕೆ ಸ್ಟಾರ್​ ನಟನ ಮೊರೆ ಹೋದ ವಾಹಿನಿ; ಅಕ್ಕಿನೇನಿ ನಾಗಾರ್ಜುನ ಕಥೆ ಏನು?

ತಾಜಾ ಸುದ್ದಿ

Related Stories

Click on your DTH Provider to Add TV9 Kannada