AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ವಿಟರ್​ನಲ್ಲಿ ಟ್ರೆಂಡ್​ ಆಯ್ತು ಶಾರುಖ್​ ಖಾನ್​ ‘ಪಠಾಣ್​’; ಸಿನಿಮಾ ತಂಡ ಕೊಟ್ಟ ಹೊಸ ಅಪ್​ಡೇಟ್​ ಏನು?

‘ಪಠಾಣ್​’ ಸಿನಿಮಾ ಶೂಟಿಂಗ್​ ಇಂದಿನಿಂದ ಆರಂಭವಾಗಿದೆ. ಈ ಕಾರಣಕ್ಕೆ ಟ್ವಿಟರ್​ ಟ್ರೆಂಡ್​ನಲ್ಲಿ ‘ಪಠಾಣ್​’, ಶಾರುಖ್​ ಖಾನ್​, ಚಿತ್ರದ ನಾಯಕಿ ದೀಪಿಕಾ ಹೆಸರು ರಾರಾಜಿಸಿದೆ.

ಟ್ವಿಟರ್​ನಲ್ಲಿ ಟ್ರೆಂಡ್​ ಆಯ್ತು ಶಾರುಖ್​ ಖಾನ್​ ‘ಪಠಾಣ್​’; ಸಿನಿಮಾ ತಂಡ ಕೊಟ್ಟ ಹೊಸ ಅಪ್​ಡೇಟ್​ ಏನು?
ಶಾರುಖ್​ ಖಾನ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Aug 28, 2021 | 4:58 PM

Share

‘ಜೀರೋ’ ಸೋಲಿನ ನಂತರದಲ್ಲಿ ಒಂದು ಬ್ರೇಕ್​ ತೆಗೆದುಕೊಂಡಿದ್ದ ಶಾರುಖ್​ ಖಾನ್​ ಈಗ ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ‘ಪಠಾಣ್​’ ಸಿನಿಮಾ ಕೈಗೆತ್ತಿಕೊಂಡಿರುವ ಅವರು, ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮೊದಲು ದುಬೈನಲ್ಲಿ ಶೂಟ್​ ಮಾಡಿದ್ದ ಚಿತ್ರತಂಡ​ ಈಗ ಯುರೋಪ್​ ದೇಶಗಳಿಗೆ ತೆರಳೋಕೆ ರೆಡಿ ಆಗಿದೆ. ಬೇರೆಬೇರೆ ದೇಶಗಳಲ್ಲಿ ಸಿನಿಮಾ ಶೂಟ್​ ನಡೆಯುತ್ತಿರುವ ವಿಚಾರ ಅಭಿಮಾನಿಗಳಿಗೆ ಎಗ್ಸೈಟ್​ಮೆಂಟ್​ ನೀಡಿದೆ.

‘ಪಠಾಣ್​’ ಸಿನಿಮಾ ಶೂಟಿಂಗ್​ ಇಂದಿನಿಂದ ಆರಂಭವಾಗಿದೆ. ಈ ಕಾರಣಕ್ಕೆ ಟ್ವಿಟರ್​ ಟ್ರೆಂಡ್​ನಲ್ಲಿ ‘ಪಠಾಣ್​’, ಶಾರುಖ್​ ಖಾನ್​, ಚಿತ್ರದ ನಾಯಕಿ ದೀಪಿಕಾ ಹೆಸರು ರಾರಾಜಿಸಿದೆ. ಮುಂಬೈನ ಸ್ಟುಡಿಯೋದಲ್ಲಿ ಕೆಲ ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಆ ಬಳಿಕ ಚಿತ್ರತಂಡ ಸ್ಪೇನ್​ ಸೇರಿ ಯುರೋಪ್​​ನ ಹಲವು​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲಿದೆ.

ಸದ್ಯ ಚಿತ್ರತಂಡ ಯುರೋಪ್​ಗೆ ಹಾರೋಕೆ ದಿನಾಂಕ ಫಿಕ್ಸ್​ ಮಾಡಿಲ್ಲ. ಕೊವಿಡ್​ ಎರಡನೇ ಅಲೆ ಕಡಿಮೆ ಆಗಿದೆ. ಮೂರನೇ ಅಲೆ ಭೀತಿ ಕಾಡುತ್ತಿದೆ. ಅದಕ್ಕೂ ಮೊದಲೇ ದೇಶಬಿಡುವ ಆಲೋಚನೆಯಲ್ಲಿ ಚಿತ್ರತಂಡ ಇದೆ. ಸದ್ಯ, ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಇನ್ನು, ಅಪ್ಘಾನಿಸ್ತಾನದಲ್ಲೂ ಚಿತ್ರತಂಡ ಶೂಟಿಂಗ್​ ನಡೆಸೋಕೆ ಪ್ಲ್ಯಾನ್​ ಮಾಡಿತ್ತು ಎನ್ನುವ ಸುದ್ದಿ ಹರಿದಾಡಿದೆ. ಆದರೆ, ಈ ಮಾತನ್ನು ಚಿತ್ರತಂಡ ಅಲ್ಲಗಳೆದಿದೆ. ‘ಅಪ್ಘಾನಿಸ್ತಾನದಲ್ಲಿ ಶೂಟ್​ ಮಾಡುವ ಯಾವುದೇ ಆಲೋಚನೆ ಇರಲಿಲ್ಲ. ಹಬ್ಬಿರುವ ಸುದ್ದಿ ಸುಳ್ಳು’ ಎನ್ನುವ ಸ್ಪಷ್ಟನೆ ಚಿತ್ರತಂಡದ ಕಡೆಯಿಂದ ಸಿಕ್ಕಿದೆ.

ಸಿದ್ಧಾರ್ಥ್​ ಆನಂದ್ ನಿರ್ದೇಶನ ಮಾಡುತ್ತಿರುವ ‘ಪಠಾಣ್​’ ಚಿತ್ರದಲ್ಲಿ ದೀಪಿಕಾ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಜಾನ್​ ಅಬ್ರಹಾಂ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ  ಶಾರುಖ್​ ಅವರದ್ದು ನೆಗೆಟಿವ್​ ಪಾತ್ರ ಎನ್ನುವ ಸುದ್ದಿ ಇದೆ. 2013ರಲ್ಲಿ ತೆರೆಗೆ ಬಂದಿದ್ದ ಶಾರುಖ್​ ನಟನೆಯ ‘ಚೆನ್ನೈ ಎಕ್ಸ್​ಪ್ರೆಸ್’​ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಅವರ ಅಭಿನಯದ ‘ಹ್ಯಾಪಿ ನ್ಯೂ ಇಯರ್’​ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡಿದ್ದರೂ, ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಇದಾದ ನಂತರ ತೆರೆಕಂಡ ಅವರ ನಟನೆಯ ಎಲ್ಲಾ ಚಿತ್ರಗಳೂ ನೆಲ ಕಚ್ಚಿದ್ದವು. ಈ ಕಾರಣಕ್ಕೆ ‘ಪಠಾಣ್’​ ಸಿನಿಮಾ ಬಹಳ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ಶಾರುಖ್​ ನಟನೆಯ ಪಠಾಣ್​ ಸಿನಿಮಾ ರಿಲೀಸ್​ಗೆ ಫಿಕ್ಸ್​ ಆಯ್ತು ದಿನಾಂಕ 

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!